ಕೊವಿಡ್ ಮೃತದೇಹ ಹೊತ್ತ ಆ್ಯಂಬುಲೆನ್ಸ್ನ್ನು ಸ್ವತಃ ಚಾಲನೆ ಮಾಡುವ ಶಾಸಕ, ಯಾರಿವರು ಗೊತ್ತೇ?
MP Renukacharya runs Covid Ambulance : ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸವಳಂಗ ಗ್ರಾಮದ ವಿವಾಹಿತ ಯುವಕನೋರ್ವ ಕೊರೊನಾ ಸೊಂಕಿನಿಂದ ಮೃತಪಟ್ಟಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಶಾಸಕ ರೇಣುಕಾಚಾರ್ಯ, ಯುಕನ ಕುಟುಂಬಕ್ಕೆ ಸಾಂತ್ವನ ಹೇಳಿ ಪಿಪಿಇ ಕಿಟ್ ಮತ್ತು ಅಂತ್ಯಸಂಸ್ಕಾರದ ಖರ್ಚಿಗೆ ವೈಯಕ್ತಿಕವಾಗಿ ₹15 ನೀಡಿದರು.
ದಾವಣಗೆರೆ: ಸಿಎಂ ಯಡಿಯೂರಪ್ಪರ ರಾಜಕೀಯ ಕಾರ್ಯದರ್ಶಿ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಸದಾ ಸುದ್ದಿಯಲ್ಲಿ ಇರುವ ವ್ಯಕ್ತಿತ್ವ. ಸದ್ಯ ತಮ್ಮ ಕ್ಷೇತ್ರದ ಜನರ ಕೊವಿಡ ಸೋಂಕಿತರ ಸಲುವಾಗಿ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳ ತಮ್ಮ ಖಾತೆಯಲ್ಲಿ ಕೊವಿಡ್ ಸೋಂಕಿನ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ ಶಾಸಕ ರೇಣುಕಾಚಾರ್ಯ. ಹೀಗಿರುವಾಗ ಇಂದು ಅವರು ಮಾಡಿದ ಕೆಲಸವೊಂದು ನಿಜಕ್ಕೂ ಓರ್ವ ಶಾಸಕ ಹೀಗೂ ಇರಬಹುದಾ ಎಂದು ಅಚ್ಚರಿ ಮೂಡಿಸಿದೆ. ಅಲ್ಲದೇ, ನೆಟ್ಟಿಗರಂತೂ ಶಾಸಕ ರೇಣುಕಾಚಾರ್ಯರನ್ನು ಹಾಡಿ ಹೊಗಳುತ್ತಿದ್ದಾರೆ.
ಕಳೆದ ಹತ್ತು ದಿನಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಘಪರಿವಾರದ ಕಾರ್ಯಕರ್ತ ಸಾಸ್ವೇಹಳ್ಳಿ ರಂಗಪ್ಪ ಎಂಬುವವರ ತಾಯಿ ಕೊರೊನಾ ಸೋಂಕಿನಿಂದ ಇಂದು ಮೃತಪಟ್ಟಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕಾಗಮಿಸಿದ ಶಾಸಕ ರೇಣುಕಾಚಾರ್ಯ, ಸಾಸ್ವೇಸಾಂತ್ವನ ಹೇಳಿದಹಳ್ಳಿ ರಂಗಪ್ಪ ಅವರಿಗೆ ಸಾಂತ್ವನ ಹೇಳಿದರು. ಅಲ್ಲದೇ, ಮೃತದೇಹವನ್ನು ಹೊತ್ತ ಆ್ಯಂಬುಲೆನ್ಸ್ನ್ನು ಸ್ವತಃ ಚಾಲನೆ ಮಾಡಿಕೊಂಡು ಚಿತಾಗಾರಕ್ಕೆ ಕೊಂಡೊಯ್ದರು.
ಇದೊಂದೇ ಅಲ್ಲದೇ,ಅವರು ಕೊವಿಡ್ನಿಂದ ಮೃತಪಟ್ಟವರ ಮೃತದೇಹ ಹೊತ್ತ ಆ್ಯಂಬುಲೆನ್ಸ್ ಚಾಲನೆ ಮಾಡಿ ಚಿತಾಗಾರಕ್ಕೆ ಕೊಂಡೊಯ್ಯ ಇನ್ನೊಂದು ಘಟನೆಯೂ ಇಂದು ನಡೆದಿದೆ.
ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸವಳಂಗ ಗ್ರಾಮದ ವಿವಾಹಿತ ಯುವಕನೋರ್ವ ಕೊರೊನಾ ಸೊಂಕಿನಿಂದ ಮೃತಪಟ್ಟಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಶಾಸಕ ರೇಣುಕಾಚಾರ್ಯ, ಯುಕನ ಕುಟುಂಬಕ್ಕೆ ಸಾಂತ್ವನ ಹೇಳಿ ಪಿಪಿಇ ಕಿಟ್ ಮತ್ತು ಅಂತ್ಯಸಂಸ್ಕಾರದ ಖರ್ಚಿಗೆ ವೈಯಕ್ತಿಕವಾಗಿ ₹15 ನೀಡಿದರು. ಜತೆಗೆ, ತಮ್ಮ ತಂದೆ, ತಾಯಿ ಸ್ಮರಣಾರ್ಥ ಉಚಿತವಾಗಿ ನೀಡಿರುವ ಅಂಬುಲೆನ್ಸ್ನಲ್ಲಿ ಮೃತದೇಹವನ್ನು ಹಾಕಿಕೊಂಡು ತಾವೇ ಸ್ವತಃ ಚಾಲನೆ ಮಾಡಿ ಮೃತ ಕುಟುಂಬಕ್ಕೆ ಧೈರ್ಯ ಹೇಳಿದರು.
ಇದನ್ನೂ ಓದಿ: Karnataka Covid Update: ಕರ್ನಾಟಕದಲ್ಲಿ ಒಂದೇ ದಿನ 24,214, ಬೆಂಗಳೂರಿನಲ್ಲಿ 5,949 ಜನರಿಗೆ ಕೊವಿಡ್ ಸೋಂಕು ದೃಢ
Covid Warriors: ಕೊವಿಡ್ ಸೇನಾನಿಗಳಿಗೆ ಪ್ರೋತ್ಸಾಹ ಧನ 6 ತಿಂಗಳವರೆಗೂ ವಿಸ್ತರಣೆ ಮಾಡುವಂತೆ ಆದೇಶ
(Honnali MLA MP Renukacharya who runs an ambulance carrying a Covid dead body goes viral)