ಹೊನ್ನಾಳಿಯ ನೆಚ್ಚಿನ ಶಾಸಕನಿಗೆ 59ನೇ ಹುಟ್ಟುಹಬ್ಬದ ಸಂಭ್ರಮ: ರೇಣುಕಾಚಾರ್ಯ, ಪತ್ನಿಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ!

|

Updated on: Mar 01, 2021 | 6:42 PM

ಹೊನ್ನಾಳಿ ಹೋರಿ ಎಂದೇ ಖ್ಯಾತಿ ಪಡೆದಿರುವ ಕ್ಷೇತ್ರದ ಶಾಸಕ M.P.ರೇಣುಕಾಚಾರ್ಯರಿಗೆ 59ನೇ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ, ಇಂದು ಶಾಸಕನ ಅಭಿಮಾನಿಗಳು ರೇಣುಕಾಚಾರ್ಯ ಮತ್ತು ಅವರ ಪತ್ನಿಗೆ ಹಾಲಿನ ಅಭಿಷೇಕ ಮಾಡಿದರು. ದಂಪತಿಗೆ ಅಭಿಮಾನಿಗಳು 2 ಬಿಂದಿಗೆ ಹಾಲು ಸುರಿದು ಸಂಭ್ರಮಿಸಿದರು.

ಹೊನ್ನಾಳಿಯ ನೆಚ್ಚಿನ ಶಾಸಕನಿಗೆ 59ನೇ ಹುಟ್ಟುಹಬ್ಬದ ಸಂಭ್ರಮ: ರೇಣುಕಾಚಾರ್ಯ, ಪತ್ನಿಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ!
ನೆಚ್ಚಿನ ಶಾಸಕ ರೇಣುಕಾಚಾರ್ಯ, ಪತ್ನಿಗೆ ಹಾಲಿನ ಅಭಿಷೇಕ!
Follow us on

ದಾವಣಗೆರೆ: ಹೊನ್ನಾಳಿ ಕ್ಷೇತ್ರದ ಶಾಸಕ M.P.ರೇಣುಕಾಚಾರ್ಯರಿಗೆ 59ನೇ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ, ಇಂದು ಶಾಸಕನ ಅಭಿಮಾನಿಗಳು ರೇಣುಕಾಚಾರ್ಯ ಮತ್ತು ಅವರ ಪತ್ನಿಗೆ ಹಾಲಿನ ಅಭಿಷೇಕ ಮಾಡಿದರು. ದಂಪತಿಗೆ ಅಭಿಮಾನಿಗಳು 2 ಬಿಂದಿಗೆ ಹಾಲು ಸುರಿದು ಸಂಭ್ರಮಿಸಿದರು.

ದಂಪತಿಗೆ ಅಭಿಮಾನಿಗಳು 2 ಬಿಂದಿಗೆ ಹಾಲು ಸುರಿದು ಸಂಭ್ರಮಿಸಿದರು

ನೆಚ್ಚಿನ ಶಾಸಕ ರೇಣುಕಾಚಾರ್ಯ, ಪತ್ನಿಗೆ ಹಾಲಿನ ಅಭಿಷೇಕ!

ಕೇಕ್​ ಸವಿದ ಶಾಸಕ ರೇಣುಕಾಚಾರ್ಯ

ಕೇಕ್​ ಕತ್ತರಿಸಿ ಸಂಭ್ರಮಾಚರಣೆ

ರೇಣುಕಾಚಾರ್ಯರ ಜನ್ಮದಿನದ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭವನ್ನು ಏಪರ್ಡಿಸಲಾಗಿತ್ತು. ಹೊನ್ನಾಳಿಯಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಸಚಿವರಾದ ಬಿ.ಸಿ.ಪಾಟೀಲ್, ಭೈರತಿ ಬಸವರಾಜ್ ಹಾಗೂ BJP ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ರಾಜುಗೌಡ ಮತ್ತು ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ವೇಳೆ, ಶಾಸಕ ರೇಣುಕಾಚಾರ್ಯ ಅವರ ಅಭಿನಂದನಾ ಸಮಾರಂಭಕ್ಕೆ ಬಂದ ಸಿಎಂ ಪುತ್ರ ವಿಜಯೇಂದ್ರಗೆ ಅಭಿಮಾನಿಗಳು ಸೇಬಿನ ಹಾರ ಹಾಕಿ ಸನ್ಮಾನಿಸಿದರು. ಅತ್ತ ವಿಜಯೇಂದ್ರ ಹೋಗುತ್ತಿದ್ದಂತೆ ಸಾರ್ವಜನಿಕರು ಸೇಬುಗಳಿಗೆ ಕಿತ್ತಾಟ ನಡೆಸಿದ್ದು ಸಹ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನಾ ಮುಂದು ತಾ ಮುಂದು ಅಂತಾ ಆ್ಯಪಲ್​ಗಾಗಿ ಕೆಲ ಹೊತ್ತು ಹೋರಾಟ ಮಾಡಿದ ಸ್ಥಳೀಯರು ಬಳಿಕ ತಮ ಶಕ್ತ್ಯಾನುಸಾರ ಸೇಬುಗಳನ್ನು ಕಸಿದು ಕೊಂಡೊಯ್ದರು.

ಸೇಬಿಗಾಗಿ ಸ್ಥಳೀಯರ ಸೆಣಸಾಟ!

‘ರೇಣುಕಾಚಾರ್ಯರಿಗೆ ಮಂತ್ರಿಗಿರಿ ಕೊಡದಿದ್ರೆ ಶಾಪ ತಟ್ಟುತ್ತೆ’
ಅತ್ತ, ರೇಣುಕಾಚಾರ್ಯರಿಗೆ ಮಂತ್ರಿಗಿರಿ ಕೊಡದಿದ್ರೆ ಶಾಪ ತಟ್ಟುತ್ತೆ. ಸಿದ್ದೇಶಣ್ಣ ಮಂತ್ರಿ ಸ್ಥಾನ ಕೊಡಿಸೇ ಕೊಡುಸ್ತಾರೆ ಎಂದು ಅಭಿನಂದನಾ ಸಮಾರಂಭದಲ್ಲಿ ಶಾಸಕ ರಾಜುಗೌಡ ಹೇಳಿದರು.

ನಿನ್ನೆ ರೇಣುಕಾಚಾರ್ಯರಿಗೆ ನೀವು ಹಾಲಿನ ಅಭಿಷೇಕ ಮಾಡಿದ್ರಿ. ನಾವಾಗಿದ್ದರೆ ಆಲ್ಕೋಹಾಲ್​​ನಲ್ಲಿ ಅಭಿಷೇಕವನ್ನು ಮಾಡುತ್ತಿದ್ವಿ ಎಂದು ಶಾಸಕ ರಾಜುಗೌಡ ಹೇಳಿದರು. ರೇಣುಕಾಚಾರ್ಯರಿಗೆ ಜನರಿಗೆ ನೆರವಾಗುವ ಸಚಿವಸ್ಥಾನ ಸಿಗಲಿ. ಸಿಎಂಗೆ ಇಬ್ಬರು ಮಕ್ಕಳಲ್ಲ ಇರೋದು, ಮೂರು ಜನ ಮಕ್ಕಳು. ಸಿಎಂ ಮೊದಲನೇ ಮಗ ಶಾಸಕ ಎಂ.ಪಿ.ರೇಣುಕಾಚಾರ್ಯ. ಬಳಿಕ ರಾಘವೇಂದ್ರ, ವಿಜಯೇಂದ್ರ. ಸಿಎಂ ಬಿಎಸ್​​ವೈಗೆ ರೇಣುಕಾಚಾರ್ಯ ಹನುಮಂತ ಇದ್ದಂತೆ ಎಂದು ಅಭಿನಂದನಾ ಸಮಾರಂಭದಲ್ಲಿ ಶಾಸಕ ರಾಜುಗೌಡ ಹೇಳಿದರು.

ಬಳಿಕ ಮಾತನಾಡಿದ ಬಿ.ವೈ.ವಿಜಯೇಂದ್ರ ರೇಣುಕಾಚಾರ್ಯ ಕೇವಲ ಹೊನ್ನಾಳಿಗೆ ಸೀಮಿತವಲ್ಲ. ರಾಜ್ಯಾದ್ಯಂತ ಅವರ ಅಭಿಮಾನಿಗಳಿದ್ದರೆ ಎಂದು ಶಾಸಕರನ್ನು ಹಾಡಿ ಹೊಗಳಿದರು.

ಇದನ್ನೂ ಓದಿ: VTU 2ನೇ ವರ್ಷದ ಇಂಜಿನಿಯರಿಂಗ್ 3ನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ