ವೀಡಿಯೋ ಕಾಲ್ ಮಾಡಿ, ಮೋಡಿ ಮಾಡ್ತಾರೆ.. ಯಾಮಾರಿದ್ರೆ ಜಾರಕಿಹೊಳಿ ಮಾದರಿ ಸಿಡಿ ರಿಲೀಸ್ ಮಾಡ್ತಾರೆ!

| Updated By: ಸಾಧು ಶ್ರೀನಾಥ್​

Updated on: Mar 19, 2021 | 2:55 PM

ಮೊದಲು 50ಸಾವಿರ ಹಣ ಕೇಳ್ತಾರೆ. ಕೊಡಲ್ಲ ಅಂದ್ರೆ ಎಡಿಟ್ ಮಾಡಿದ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡ್ತಾರೆ. ಹಣ ನೀಡದಿದ್ರೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡೋದಾಗಿ ಧಮ್ಕಿ ಹಾಕ್ತಾರೆ. ಕೊನೆಗೆ 20 ಸಾವಿರ ಕೊಟ್ರೆ ವೀಡಿಯೋ ಡಿಲೀಟ್ ಮಾಡೋ ಅಭಯ ನೀಡ್ತಾರೆ.

ವೀಡಿಯೋ ಕಾಲ್ ಮಾಡಿ, ಮೋಡಿ ಮಾಡ್ತಾರೆ.. ಯಾಮಾರಿದ್ರೆ ಜಾರಕಿಹೊಳಿ ಮಾದರಿ ಸಿಡಿ ರಿಲೀಸ್ ಮಾಡ್ತಾರೆ!
ವಾಟ್ಸಪ್ ವೀಡಿಯೋ ಕಾಲ್ ಮಾಡಿ ಹಣ ಪೀಕ್ತಾರೆ ಖದೀಮರು
Follow us on

ಹುಬ್ಬಳ್ಳಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ನಿಮಗೆಲ್ಲ ಗೊತ್ತೇ ಇದೆ. ಈ ಕೇಸ್ ಮಾದರಿಯಲ್ಲೇ ಅಮಾಯಕರಿಗೆ ಬ್ಲಾಕ್ ಮೇಲ್ ಮಾಡಿ ಹಣ ಪೀಕುತ್ತಿದ್ದ ಗ್ಯಾಂಗ್​ವೊಂದು ಪತ್ತೆಯಾಗಿದೆ. ಈ ಕಿರಾತಕರು ಬ್ಲಾಕ್ ಮೇಲ್ ದಂಧೆಯನ್ನೇ ಉದ್ಯೋಗವಾಗಿಸಿಕೊಂಡಿದ್ದರು. ಸ್ವಲ್ಪ ಯಾಮಾರಿದ್ರೂ ಮಾನ ಮರ್ಯಾದೆ ಹರಾಜು ಹಾಕ್ತಾರೆ. ವಾಟ್ಸಪ್ ವೀಡಿಯೊ ಕಾಲ್ ಮಾಡಿ, ನಿಮ್ಮ ವೀಕ್ನೆಸ್ ತಿಳಿದುಕೊಂಡು ಹಣ ಪೀಕ್ತಾರೆ. ಇಂಥದ್ದೊಂದು ಗ್ಯಾಂಗ್ ಹುಬ್ಬಳ್ಳಿಯಲ್ಲಿ ಸಕ್ರಿಯವಾಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.

ಇತ್ತೀಚೆಗಷ್ಟೇ ರಿಲೀಸ್ ಆದ ಸಿಡಿ ಇಡೀ ರಾಜಕೀಯವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಈಗಲೂ ಕೂಡ ಇದರ ತನಿಖೆ ನಡೆಯುತ್ತಲೇ ಇದೆ. ಇದರಂತೆಯೇ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲೂ ಖತರ್ನಾಕ್ ಗ್ಯಾಂಗ್​ವೊಂದು ಮಾನ ಮರ್ಯಾದೆಗೆ ಅಂಜುವವರನ್ನು ತಮ್ಮ ಟಾರ್ಗೆಟ್ ಮಾಡಿಕೊಂಡು ಹಣಕ್ಕಾಗಿ ಮಾನದ ಜೊತೆ ಆಟವಾಡುತ್ತಿದೆ.

ಮೊದಲಿಗೆ ಅನೌನ್ ನಂಬರ್​ನಿಂದ ವಾಟ್ಸಪ್ ವೀಡಿಯೋ ಕಾಲ್ ಮಾಡ್ತಾರೆ. ಅದ್ರಲ್ಲಿ ಯುವತಿಯೊಬ್ಬಳು ನಿಮ್ಮ ಮುಂದೆ ಸಂಪೂರ್ಣ ಬೆತ್ತಲಾಗ್ತಾಳೆ‌. ಬಳಿಕ ನಿಮ್ಮನ್ನೂ ನಗ್ನವಾಗುವಂತೆ ಪ್ರಚೋದಿಸ್ತಾಳೆ. ಸ್ವಲ್ಪ ಯಾಮಾರಿದ್ರೆ ಸಿಡಿ ಹೊರಗಡೆ ಬರೋದು ಗ್ಯಾರಂಟಿ. ವೀಡಿಯೋ ಕಾಲ್ ಮಾಡಿದಾಗ ಎದುರುಗಡೆ ವ್ಯಕ್ತಿಯ ಫೋಟೋವನ್ನ ಈ ಖದೀಮರು ಸ್ಕ್ರೀನ್ ಕ್ಯಾಪ್ಚರ್ ಮಾಡಿಕೊಳ್ಳುತ್ತಾರೆ. ಬಳಿಕ ಆ ಫೋಟೋ ಅನ್ನು ಅಶ್ಲೀಲ ವೀಡಿಯೋಗೆ ಹೊಂದಾಣಿಕೆಯಾಗುವಂತೆ ಎಡಿಟ್ ಮಾಡ್ತಾರೆ. ಅಲ್ಲಿಂದ ಅವರ ನಿಜವಾದ ಆಟ ಶುರುವಾಗುತ್ತೆ.

ಮೊದಲು 50 ಸಾವಿರ ಹಣ ಕೇಳ್ತಾರೆ. ಕೊಡಲ್ಲ ಅಂದ್ರೆ ಎಡಿಟ್ ಮಾಡಿದ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡ್ತಾರೆ. ಹಣ ನೀಡದಿದ್ರೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡೋದಾಗಿ ಧಮ್ಕಿ ಹಾಕ್ತಾರೆ. ಕೊನೆಗೆ 20 ಸಾವಿರ ಕೊಟ್ರೆ ವೀಡಿಯೋ ಡಿಲೀಟ್ ಮಾಡೋ ಅಭಯ ನೀಡ್ತಾರೆ.

ಪ್ರತಿಷ್ಠಿತ ಮನೆತನದ ಯುವಕರೇ ಈ ಖದೀಮರ ಟಾರ್ಗೆಟ್. ಇದೀಗ ವಾಣಿಜ್ಯ ನಗರಿಯಲ್ಲಿ ಇಂತಹ ಬ್ಲಾಕ್ ಮೇಲಿಂಗ್ ದಂಧೆ ನಡೆಯುತ್ತಿದೆ. ಸದ್ಯ ಇಂತಹುದೇ ಭಯದಲ್ಲಿ ಹುಬ್ಬಳ್ಳಿಯ ಯುವಕರು ಸಿಲುಕಿಕೊಂಡಿದ್ದಾರೆ. ಯುವಕನೊಬ್ಬ ಯುವತಿ ಮಾತಿಗೆ ಮರುಳಾಗಿ ಆಕೆಯ ತಾಳಕ್ಕೆ ತಕ್ಕಂತೆ ಕುಣಿದು ಕಂಗಾಲಾಗಿದ್ದಾನೆ. ಈ ಬಗ್ಗೆ ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಸುಂದರ ಯುವತಿಯ Friend Request ಬಂದರೆ ಇರಲಿ ಎಚ್ಚರ..! ನೀವೂ ವಂಚಕರ ಜಾಲದಲ್ಲಿ ಸಿಕ್ಕಿಬೀಳಬಹುದು..