ಬೆಂಗಳೂರಿನಲ್ಲಿ ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ
ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 35 ಲಕ್ಷ ಮೌಲ್ಯದ 350 ಎಂಡಿಎಂಎ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಸೇರಿ ಇಬ್ಬರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ. ಒಕೋರೋ ಕ್ರಿಶ್ಚಿಯಾನಾ ಇಫೆನಿ ಮತ್ತು ರೋಹಿತ್ ಕ್ರಿಸ್ಟೊಫರ್ ಬಂಧಿತ ಆರೋಪಿಗಳಾಗಿದ್ದಾರೆ.
ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದು, 35 ಲಕ್ಷ ಮೌಲ್ಯದ 350 ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ನೈಜೀರಿಯನ್ ಪ್ರಜೆಯಾದ ಓರ್ವ 2018ರಲ್ಲಿ ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದಿಳಿದಿದ್ದ. ಮೂರು ತಿಂಗಳ ಮಟ್ಟಿಗೆ ದೇಶಕ್ಕೆ ಬಂದಿದ್ದವ ಇಲ್ಲಿಯೇ ಠಿಕಾಣಿ ಹೂಡಿದ್ದ. ಬೆಂಗಳೂರು ಶೂಟರ್ಸ್ ಎಂಬ ಫುಟ್ ಬಾಲ್ ಅಕಾಡಮಿಯಲ್ಲಿ ರೋಹಿತ್ ಕ್ರಿಸ್ಟೊಫರ್ ಎಂಬುವವರ ಪರಿಚಯವಾಗಿತ್ತು. ರೋಹಿತ್ ಕ್ರಿಸ್ಟೊಫರ್ ಮುಖಾಂತರ ರಾಮಮೂರ್ತಿನಗರ ಕೆ.ಆರ್.ಪುರಂ ಭಾಗದಲ್ಲಿರುವ ಆಫ್ರಿಕನ್ ಪ್ರಜೆಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದರು.
ಆರೋಪಿಗಳು ಕೊರಿಯರ್ ಮುಖಾಂತರ ಎಂಡಿಎಂಎ ತರಿಸಿ ಮಾರಾಟ ಮಾಡುತ್ತಿದ್ದರು. ಯೂ ಕ್ಯಾಷ್, ಮನಿಟ್ರಾನ್ಸ್ಫರ್ ಮುಖಾಂತರ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಆರೋಪಿಗಳ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದ್ವಿಚಕ್ರ ವಾಹನ, ಮೊಬೈಲ್ ಕದಿಯುತ್ತಿದ್ದ ಮೂವರ ಬಂಧನ ದ್ವಿಚಕ್ರ ವಾಹನ, ಮೊಬೈಲ್ ಕದಿಯುತ್ತಿದ್ದ ಮೂವರನ್ನು ಕಾಟನ್ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೈಯ್ಯದ್ ಅರ್ಬಾಜ್, ದಾದಾಪೀರ್ ಮತ್ತು ಜಬ್ಬಿ ಪಾಶಾ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 16 ಮೊಬೈಲ್, 3 ದ್ವಿಚಕ್ರ ವಾಹನ ಹಾಗೂ ನಗದು ಜಪ್ತಿ ಮಾಡಲಾಗಿದೆ. ಬ್ಯಾಡರಹಳ್ಳಿ, ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್‌ಗಳ ಬಂಧನ.. 75 ಲಕ್ಷ ಮೌಲ್ಯದ ಡ್ರಗ್ ಸೀಜ್
ಸಿಸಿಬಿ ಪೊಲೀಸರಿಂದ ನೈಜೀರಿಯನ್ ಡ್ರಗ್ ಪೆಡ್ಲರ್ಸ್ ಸೆರೆ.. ಬಂಧಿತರಿಂದ 15 ಲಕ್ಷ ಮೌಲ್ಯದ ಡ್ರಗ್ಸ್ ವಶ..!
Published On - 1:37 pm, Fri, 19 March 21