ಬೆಂಗಳೂರು: ವನ್ಯ ಪ್ರಾಣಿಗಳ (Animelas) ದಾಳಿಯಿಂದ ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ 11 ಜನ ಮೃತಪಟ್ಟಿದ್ದಾರೆ. ಈ ವರ್ಷದ ಮೊದಲಾರ್ಧದಲ್ಲಿ 28 ಜನ ಮೃತ ಪಟ್ಟಿದ್ದಾರೆ. ನಿನ್ನೆ (ಸೆ.04) ಮತ್ತೊಂದು ದುರ್ಘಟನೆ ಸಂಭವಿಸಿದೆ. ಹುಲಿ (Tigher) ದಾಳಿಯಿಂದ ಚರಣ್ ನಾಯ್ಕ್ ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆ ವೆಂಕಟೇಶ್ ಆನೆ (Elephant) ತುಳಿತಕ್ಕೆ ಬಲಿಯಾಗಿದ್ದಾರೆ. ಮಾನವ ಪ್ರಾಣಿ ಸಂಘರ್ಷದ ಬಗ್ಗೆ ಚರ್ಚೆ ಮಾಡಿದ್ದೇವೆ. ಜೀವಹಾನಿ ಆಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಆಗಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಗ್ಗೆ ಇಂದು (ಸೆ.05) ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಭೆ ಇದೆ. ಜನವಸತಿ ಪ್ರದೇಶಕ್ಕೆ ಆನೆ ಬರದಂತೆ ತಡೆಯಲು 640 ಕಿಮೀ ರೈಲ್ವೆ ಬ್ಯಾರಿಕೇಡ್ ಹಾಕಬೇಕಿದೆ. ಹೆಚ್ಚುವರಿ 300 ಕಿಮೀ ರೈಲ್ವೆ ಬ್ಯಾರಿಕೇಡ್ ಹಾಕಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಿದ್ದೇನೆ. 1000 ಕಿಮೀ ಸೋಲಾರ್ ತಂತಿ ಅಳವಡಿಸಲಾಗಿದೆ. 7 ಎಲಿಫೆಂಟಾ ಟಾಸ್ಕ್ ಫೋರ್ಸ್ಗಳನ್ನು ರಚನೆ ಮಾಡಿದ್ದೇವೆ. ಇದರಲ್ಲಿ 38 ಜನ ನುರಿತವರು ಇರುತ್ತಾರೆ ಎಂದರು ತಿಳಿಸಿದರು.
ಇದನ್ನೂ ಓದಿ: ಮೈಸೂರು: ಹುಲಿ ದಾಳಿಗೆ ಬಾಲಕ ಸಾವು, ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಅರಣ್ಯ ಇಲಾಖೆ
ಇನ್ನು ವನ್ಯ ಪ್ರಾಣಿಗಳಿಂದ ಹೊರ ಗುತ್ತಿಗೆಯ ಇಬ್ಬರು ನೌಕರರು ಮೃತ ಪಟ್ಟಿದ್ದಾರೆ. ಮುಂದೆ ಸಮಸ್ಯೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಅರಣ್ಯ ಸಮೀಪ ಇರುವ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ವನ್ಯ ಜೀವಿಗಳ ದಾಳಿಯಿಂದ ಮೃತಪಟ್ಟವರಿಗೆ ಪರಿಹಾರ ನೀಡಿದ್ದೇವೆ. ಗಣಿಗಾರಿಕೆಯಿಂದಲೂ ವನ್ಯ ಜೀವಿಗಳು ಕಾಡಿಗೆ ಬರುತ್ತಿವೆ. ಕಾಡಿನಂಚಿನಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲ ಎಂದು ಎಚ್ಚರಿಕೆ ನೀಡಿದರು
ಚಿತ್ರ ನಟ ಗಣೇಶ್ಗೆ ಅರಣ್ಯ ಇಲಾಖೆಯ ಮಾಹಿತಿ ಇಲ್ಲದೇ ಜಮೀನು ನೀಡಿದರು. ಅದನ್ನ ವಾಪಸು ಪಡೆಯುವ ಕೆಲಸ ಆಗಿದೆ. ಪ್ರಕರಣ ಈಗ ಕೋರ್ಟ್ನಲ್ಲಿ ಇದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Tue, 5 September 23