ನನಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಇದೆ..; ಸಚಿವ ಉಮೇಶ್​ ಕತ್ತಿ ಪುನರುಚ್ಚಾರ

Umesh Katti: ಉಮೇಶ್​ ಕತ್ತಿಯವರ ವಿಚಾರಕ್ಕೆ ಬಂದರೆ, ಬೆಳಗಾವಿಯ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕ. ಒಟ್ಟು ನಾಲ್ಕು ಬಾರಿ ಸಚಿವರಾಗಿದ್ದಾರೆ. ಇದೀಗ ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನನಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಇದೆ..; ಸಚಿವ ಉಮೇಶ್​ ಕತ್ತಿ ಪುನರುಚ್ಚಾರ
ಉಮೇಶ್ ಕತ್ತಿ
Edited By:

Updated on: Jul 22, 2021 | 2:59 PM

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ (B.S.Yediyurappa) ನವರು ಮುಖ್ಯಮಂತ್ರಿ ಹುದ್ದೆ (Chief Minister Post)ಗೆ ರಾಜೀನಾಮೆ ನೀಡುವುದು ಇನ್ನೂ ಸ್ಪಷ್ಟವಾಗಿಲ್ಲ. ಜು.25ರಂದು ಈ ವಿಚಾರದಲ್ಲಿ ಒಂದು ಅಂತಿಮ ನಿರ್ಧಾರ ಹೊರಬರಲಿದೆ. ಆದರೆ ಸಚಿವ ಉಮೇಶ್ ಕತ್ತಿ ಈಗಾಗಲೇ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂಬುದನ್ನು ಹೇಳಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು 8 ಬಾರಿ ಶಾಸಕನಾಗಿದ್ದೇನೆ. ನನಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಯೂ ಇದೆ. ಮನುಷ್ಯ ಸಹಜ ಆಸೆಯೂ ಇದೆ ಎಂದು ಹೇಳಿದ್ದಾರೆ.

ಯಡಿಯೂರಪ್ಪನವರು ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಆ ಸ್ಥಾನಕ್ಕೆ ಏರಲಿರುವ ಬಿಜೆಪಿ ನಾಯಕ ಯಾರು ಎಂಬುದು ಬಹುದೊಡ್ಡ ಕುತೂಹಲ. ಅದನ್ನು ಸದ್ಯದ ಮಟ್ಟಿಗೆ ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಮುಖ್ಯಮಂತ್ರಿ ಹುದ್ದೆ ರೇಸ್​ನಲ್ಲಿ ಅರವಿಂದ್ ಬೆಲ್ಲದ್ ಹೆಸರು ಮುಂಚೂಣಿಯಲ್ಲಿದೆ. ಅವರ ಬಿಟ್ಟು, ಪ್ರಲ್ಹಾದ್ ಜೋಶಿ, ವಿಶ್ವೇಶ್ವರ ಹೆಗಡೆ ಕಾಗೇರಿಯವ ಹೆಸರೂ ಕೇಳಿಬರುತ್ತಿದೆ. ಈಶ್ವರಪ್ಪನವರನ್ನು ಸಿಎಂ ಮಾಡಿ ಎಂಬ ಬೇಡಿಕೆಯೂ ಹಾಲುಮತ ಸಮುದಾಯದಿಂದ ಕೇಳಿಬರುತ್ತಿದೆ.

ಇನ್ನು ಉಮೇಶ್​ ಕತ್ತಿಯವರ ವಿಚಾರಕ್ಕೆ ಬಂದರೆ, ಬೆಳಗಾವಿಯ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕ. ಒಟ್ಟು ನಾಲ್ಕು ಬಾರಿ ಸಚಿವರಾಗಿದ್ದಾರೆ. ಇದೀಗ ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ 60 ವರ್ಷ. ಬಿಜೆಪಿಯ 75 ವರ್ಷದ ಲಿಮಿಟ್​ ಸಂಸ್ಕೃತಿಯ ಪ್ರಕಾರವೇ ಹೋದರೂ ಇನ್ನೂ 15ವರ್ಷ ಯಾವುದೇ ತೊಂದರೆ ಇಲ್ಲ. ಮೂಲತಃ ಬಿಜೆಪಿಯವರು ಅಲ್ಲದೆ ಹೋದರೂ..ಸದ್ಯ ಪ್ರಭಾವಿ ನಾಯಕನಂತೂ ಹೌದು. ಇವರು ಮುಖ್ಯಮಂತ್ರಿ ಸ್ಥಾನದ ವಿಚಾರಕ್ಕೆ ಬಂದರೆ ಮುಚ್ಚುಮರೆ ಮಾಡದೆ, ಮೊದಲಿನಿಂದಲೂ ತಾನು ಸಿಎಂ ಹುದ್ದೆಯ ಆಕಾಂಕ್ಷಿ ಎಂದು ಹೇಳಿಕೊಂಡೇ ಬಂದಿದ್ದಾರೆ. ಈಗ ಮತ್ತೆ ಅದನ್ನೇ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: Karnataka Political Development: ಬಿಜೆಪಿ ಹೈಕಮ್ಯಾಂಡ್​ನ ಸಿದ್ಧ ಮಾದರಿಯ ಆಯ್ಕೆ ವಿಧಾನದಲ್ಲಿ ಕರ್ನಾಟಕದಿಂದ ಇವರೆಲ್ಲ ರೇಸ್​ನಲ್ಲಿ

I am Deserve to Chief Minister Post Said minister Umesh Katti

Published On - 2:54 pm, Thu, 22 July 21