ಚನ್ನಪಟ್ಟಣ ಕ್ಷೇತ್ರಕ್ಕೆ ಹೊಸ ರೂಪ ಕೊಡುತ್ತೇನೆ: ಡಿಕೆ ಶಿವಕುಮಾರ್​ ಭರವಸೆ

ಇಂದು ರಾಮನಗರ ಜಿಲ್ಲೆಯ ಚನ್ನಪಟ್ಟಣಕ್ಕೆ ಡಿಸಿಎಂ ಡಿಕೆ ಶಿವಕುಮಾರ್​ ಭೇಟಿ ನೀಡಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರಕ್ಕೆ 300 ಕೋಟಿ ರೂ. ಹಣ ಮಂಜೂರಾತಿ ಮಾಡಿಸಿದ್ದೇನೆ ಎಂದು ಹೇಳಿದ್ದಾರೆ.

ಚನ್ನಪಟ್ಟಣ ಕ್ಷೇತ್ರಕ್ಕೆ ಹೊಸ ರೂಪ ಕೊಡುತ್ತೇನೆ: ಡಿಕೆ ಶಿವಕುಮಾರ್​ ಭರವಸೆ
ಚನ್ನಪಟ್ಟಣ ಕ್ಷೇತ್ರಕ್ಕೆ ಹೊಸ ರೂಪ ಕೊಡುತ್ತೇನೆ: ಡಿಕೆ ಶಿವಕುಮಾರ್​ ಭರವಸೆ
Edited By:

Updated on: Oct 04, 2024 | 3:34 PM

ರಾಮನಗರ, ಅಕ್ಟೋಬರ್​​ 04: ಚನ್ನಪಟ್ಟಣ ಕ್ಷೇತ್ರಕ್ಕೆ 300 ಕೋಟಿ ರೂ. ಹಣ ಮಂಜೂರಾತಿ ಮಾಡಿಸಿದ್ದೇನೆ. ಚನ್ನಪಟ್ಟಣ ಕ್ಷೇತ್ರಕ್ಕೆ ಹೊಸ ರೂಪ ಕೊಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. 20 ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಕಳಿಯಲ್ಲಿ ಮನೆಗಳ ಅನುದಾನಕ್ಕೆ 2.16 ಕೋಟಿ ರೂ. ಹಣ ನೀಡಿದ್ದೇನೆ ಎಂದಿದ್ದಾರೆ.

ಸಿಎಸ್​ಆರ್ ಫಂಡ್​ನಿಂದ ಒಂದು ಒಳ್ಳೆಯ ಶಾಲೆ ಕಟ್ಟಿದ್ದೇನೆ. ಇನ್ನೂ ಕೆಲಸ ಮಾಡುವುದಕ್ಕೆ ಹೆಚ್ಚು ಶಕ್ತಿ ಕೊಡಬೇಕು. ನಾನು ನಿಮ್ಮ ಉಸ್ತುವಾರಿ ಸಚಿವ 20 ಸಲ ಕ್ಷೇತ್ರಕ್ಕೆ ಬಂದಿದ್ದೇನೆ. ನಿಮ್ಮ ಕ್ಷೇತ್ರದ ಶಾಸಕರು 20 ಸಲ ಬಂದಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.

ಡಿಕೆ ಶಿವಕುಮಾರ್​ ಟ್ವೀಟ್ 

ಈ ಮಧ್ಯೆ ಕೆರೆ ಎಲ್ಲಾ ಖಾಲಿ ಇದೆ ಎಂದು ಗ್ರಾಮಸ್ಥ ಕೂಗಿದ್ದು, ಆಯ್ತು ಮಾಡಿಸುತ್ತೇವೆ. ಅದನ್ನು ಮಾಡಬೇಕಾಗಿರುವವರು ಕಾಂಗ್ರೆಸ್​ನವರು ಮಾತ್ರ, ಬಿಜೆಪಿ, ದಳದಿಂದ ಆಗಲ್ಲ ಎಂದು ಕಿಡಿಕಾರಿದ್ದಾರೆ.

ಚನ್ನಪಟ್ಟಣಕ್ಕೆ ಹೊಸದೊಂದು ರೂಪ ನೀಡಲು ನಮ್ಮ ಸರ್ಕಾರ ಬದ್ಧವಾಗಿದ್ದು, ಇಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ಇಂದು ಚನ್ನಪಟ್ಟಣ ತಾಲೂಕು ನಾಗವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗವಾರ ಗ್ರಾಮ, ಚಿಕ್ಕೇನಹಳ್ಳಿ ಮತ್ತು ಮೊಗೇನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ: ಅಧಿಕಾರಿಗಳು, ಮುಖಂಡರು ಲಂಚ ಕೇಳಿದರೆ ನನ್ನ ವಿಳಾಸಕ್ಕೆ ಪತ್ರ ಬರೆಯಿರಿ: ಡಿಕೆ ಶಿವಕುಮಾರ್

ಚನ್ನಪಟ್ಟಣದ ಉಪ ನೋಂದಣಿ ಕಚೇರಿಗೆ ಕೂಡ ಡಿಕೆ ಶಿವಕುಮಾರ್​ ಇಂದು ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿದ್ದಾರೆ. ಹಾಗೆಯೇ ಕುಂದುಕೊರತೆಗಳನ್ನು ವಿಚಾರಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.