ಬೆಂಗಳೂರು: ಆನಂದ್ಸಿಂಗ್ರಿಂದ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ವಾಪಸ್ ಪಡೆದು, ಅವರಿಗೆ ಹಜ್, ವಕ್ಫ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಖಾತೆಯನ್ನು ನೀಡಲು ಸಿಎಂ ಯಡಿಯೂರಪ್ಪ ನಿರ್ಧಾರ ಮಾಡಿದ್ದಕ್ಕೆ, ಆನಂದ್ ಸಿಂಗ್ ಬೇಸರಗೊಂಡು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆನಂದ್ ಸಿಂಗ್ ಇದನ್ನು ನಿರಾಕರಿಸಿದ್ದಾರೆ.
ಟಿವಿ 9ಜತೆ ಮಾತನಾಡಿದ ಆನಂದ್ ಸಿಂಗ್, ನಾನು ಖಾತೆ ಬದಲಾವಣೆ ಬಗ್ಗೆ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ. ರಾಜಕೀಯದ ಬಗ್ಗೆ ನನ್ನ ಕುಟುಂಬಸ್ಥರ ಜತೆ ಚರ್ಚಿಸಿರಬಹುದು ಹೊರತು ಅಸಮಾಧಾನ ವ್ಯಕ್ತಪಡಿಸಿಲ್ಲ. ನಾನು ಸಚಿವ ಸ್ಥಾನ ನಿರೀಕ್ಷೆ ಮಾಡಿ ಬಂದ ವ್ಯಕ್ತಿಯಲ್ಲ. ನನ್ನ ನಿರೀಕ್ಷೆ, ಮನವಿಯನ್ನು ಮುಖ್ಯಮಂತ್ರಿ ಪುರಸ್ಕರಿಸಿದ್ದಾರೆ.
ಖಾತೆ ಬದಲಾವಣೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ನನಗೆ ಹೇಳಿದ್ದಾರೆ. ನನಗೆ ಯಾವ ಖಾತೆಯೂ ಬೇಡ, ಶಾಸಕನಾಗಿ ಉಳಿಯುತ್ತೇನೆ ಎಂದು ಮನವಿ ಮಾಡಿದ್ದೇನೆ. ಅವರು ನನ್ನ ಮನವಿ ಪುರಸ್ಕರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ.
ಮತ್ತೆ ಖಾತೆ ಬದಲಾವಣೆಗೆ ಸಿಎಂ ನಿರ್ಧಾರ; ವೈದ್ಯಕೀಯ ಶಿಕ್ಷಣ ಖಾತೆ ಸುಧಾಕರ್ ಹೆಗಲಿಗೆ?..ಆನಂದ್ ಸಿಂಗ್ ಮುನಿಸು !