ನಾನು ಯಡಿಯೂರಪ್ಪ ಕ್ಯಾಂಪ್ ಬದಲಾಯಿಸಿಲ್ಲ: ದೆಹಲಿಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ

ನಾನು ಬಿ.ಎಸ್‌. ಯಡಿಯೂರಪ್ಪ ಕ್ಯಾಂಪ್ ಬದಲಾಯಿಸಿಲ್ಲ, ಮಂತ್ರಿ ಸ್ಥಾನಕ್ಕೆ ಲಾಬಿ ಮಾಡಲು ನಾನು ದೆಹಲಿಗೆ ಬಂದಿಲ್ಲ ಎಂದು ದೆಹಲಿಯಲ್ಲಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ನಾನು ಯಡಿಯೂರಪ್ಪ ಕ್ಯಾಂಪ್ ಬದಲಾಯಿಸಿಲ್ಲ: ದೆಹಲಿಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ
ನಾನು ಯಡಿಯೂರಪ್ಪ ಕ್ಯಾಂಪ್ ಬದಲಾಯಿಸಿಲ್ಲ: ದೆಹಲಿಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ
Edited By:

Updated on: Jul 23, 2021 | 3:32 PM

ದೆಹಲಿ: ನಾನು ಬಿ.ಎಸ್‌. ಯಡಿಯೂರಪ್ಪ ಕ್ಯಾಂಪ್ ಬದಲಾಯಿಸಿಲ್ಲ, ಮಂತ್ರಿ ಸ್ಥಾನಕ್ಕೆ ಲಾಬಿ ಮಾಡಲು ನಾನು ದೆಹಲಿಗೆ ಬಂದಿಲ್ಲ ಎಂದು ದೆಹಲಿಯಲ್ಲಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದೇನೆ. ರಾಜ್ಯದ ಕೇಂದ್ರ ಸಚಿವರು, ಉಸ್ತುವಾರಿ ನಾಯಕ ಅರುಣ್ ಸಿಂಗ್ ಮತ್ತು ಸಂಘಟನೆಯ ಇಬ್ಬರು ಮುಖಂಡರನ್ನು ಭೇಟಿಯಾಗಿದ್ದೇನೆ. ಯಾವ ವಿಚಾರದ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳಲ್ಲ. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ಮಾಡಿದ್ದೇನೆ. ಒಟ್ನಲ್ಲಿ ದೆಹಲಿ ಭೇಟಿ ಫಲಪ್ರದವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿಯೂ ಆದ  ಎಂ.ಪಿ. ರೇಣುಕಾಚಾರ್ಯ  ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗಾರರಿಗೆ ತಿಳಿಸಿದರು.

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ನಿರ್ಗಮನದ ಬಗ್ಗೆ ಸುಳಿವು: ರೇಣುಕಾಚಾರ್ಯ ಮೊದಲ ಪ್ರತಿಕ್ರಿಯೆ

ಸಿಎಂ ಬದಲಾವಣೆ ಚರ್ಚೆ ಗರಿಗೆದರಿದ ಬೆನ್ನಲ್ಲೇ ದೆಹಲಿಗೆ ಹಾರಿದ ರೇಣುಕಾಚಾರ್ಯ

(I have not deserted bs yediyurappa camp says bjp mla mp renukacharya)

Published On - 3:26 pm, Fri, 23 July 21