ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ನಿರ್ಗಮನದ ಬಗ್ಗೆ ಸುಳಿವು: ರೇಣುಕಾಚಾರ್ಯ ಮೊದಲ ಪ್ರತಿಕ್ರಿಯೆ

ಬಿ ಎಸ್​ ಯಡಿಯೂರಪ್ಪ: ಕರ್ನಾಟಕ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ನಿರ್ಗಮಿಸುವುದು ಬಹುತೇಕ ಖಚಿತವಾಗುತ್ತಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಸ್ವತಃ ಯಡಿಯೂರಪ್ಪ ಅವರೇ ತಮ್ಮ ನಿರ್ಗಮನದ ಬಗ್ಗೆ ಸುಳಿವು ನೀಡಿದ್ದಾರೆ. ಈ ಬಗ್ಗೆ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ನಿರ್ಗಮನದ ಬಗ್ಗೆ ಸುಳಿವು: ರೇಣುಕಾಚಾರ್ಯ ಮೊದಲ ಪ್ರತಿಕ್ರಿಯೆ
ಶಾಸಕ ರೇಣುಕಾಚಾರ್ಯ

ಬೆಂಗಳೂರು: ಬಿ ಎಸ್​ ಯಡಿಯೂರಪ್ಪ ಕರ್ನಾಟಕ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವುದು ಬಹುತೇಕ ಖಚಿತವಾಗುತ್ತಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಸ್ವತಃ ಯಡಿಯೂರಪ್ಪ ಅವರೇ ತಮ್ಮ ನಿರ್ಗಮನದ ಬಗ್ಗೆ ಸುಳಿವು ನೀಡಿದ್ದಾರೆ. ಈ ಬಗ್ಗೆ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಬಿ ಎಸ್​ ಯಡಿಯೂರಪ್ಪ ಅವರು ಸಂಘ ಪರಿವಾರದಿಂದ ಬಂದವರು. ಅವರು ಕೆಳಮಟ್ಟದ ಹಂತದಿಂದ ಹೋರಾಟ ಮಾಡಿಕೊಂಡು ಬಂದವರು. ಇದೀಗ ಬಿಜೆಪಿ ಹೈಕಮಾಂಡ್​ ನಾಯಕತ್ವದ ಬದಲಾವಣೆ ಮಾಡಿದರೆ ಅದಕ್ಕೆ ಯಡಿಯೂರಪ್ಪ ಬದ್ಧರಾಗಿರುತ್ತಾರೆ. ಬಿಜೆಪಿ ನಾಯಕರ ತೀರ್ಮಾನದ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿ ಬಳಿಕ ಮಾತನಾಡಿದ ರೇಣುಕಾಚಾರ್ಯ,  ನಾನು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಲು ಬಂದಿಲ್ಲ. ನಾನು ಯಾರ ಬಗ್ಗೆಯೂ ದೂರು ಕೊಡಲು ಬಂದಿಲ್ಲ, ಕೊಟ್ಟಿಲ್ಲ. ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿದ್ದೇನೆ. ರೇಣುಕಾಚಾರ್ಯ ನೇರವಾಗಿ ಮಾತನಾಡುವ ವ್ಯಕ್ತಿ. ಯಾರ ಷಡ್ಯಂತ್ರಕ್ಕೂ ಬಲಿಯಾಗಲ್ಲ ಎಂದಿದ್ದಾರೆ.

ಮೊದಲ ಸಲ ರಾಜೀನಾಮೆ ಸುಳಿವು ನೀಡಿದ ಸಿಎಂ ಬಿಎಸ್‌ವೈ?
ಇನ್ನು ಹೋಮದ ಬಳಿಕ ಬೆಂಗಳೂರಿನಲ್ಲಿ ಸಿಎಂ ರಾಜೀನಾಮೇ ಬಗ್ಗೆ ಮೌನ ಮುರಿದಿದ್ದಾರೆ. ಹೈಕಮಾಂಡ್ ಏನು ಹೇಳುತ್ತದೆಯೋ ಆ ತೀರ್ಮಾನ ನನ್ನದು. ಜು.25ರಂದು ಹೈಕಮಾಂಡ್ ನೀಡುವ ಸೂಚನೆಯಂತೆ ಕೆಲಸ ಮಾಡುತ್ತೇನೆ. ಜುಲೈ 26ರಿಂದ ನನ್ನ ಕೆಲಸವನ್ನು ಮಾಡುತ್ತೇನೆ ಎಂದರು.

ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರ ಕೊಟ್ಟಿಲ್ಲ. ಆದ್ರೆ ನನ್ನ ಕೆಲಸವನ್ನು ಮೆಚ್ಚಿ ಅಧಿಕಾರವನ್ನು ಕೊಟ್ಟಿದ್ದಾರೆ. ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರುವ ಸಂಕಲ್ಪ ನನ್ನದು. ಪಕ್ಷದ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳದೆ ನನಗೆ ಉತ್ತಮ ರೀತಿಯಲ್ಲಿ ಸಹಕಾರವನ್ನು ಕೊಡಬೇಕು. ನನ್ನ ಪರ ಹೇಳಿಕೆ, ಪ್ರತಿಭಟನೆ ಮಾಡದಂತೆ ಮನವಿ ಮಾಡುವೆ. ಮಠಾಧೀಶರು ನನಗೆ ಅಭೂತಪೂರ್ವ ಬೆಂಬಲ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜುಲೈ 26ರಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ರು.

(BS Yediyurappa exit from Karnataka chief ministership certain mp renukacharya statement)

Also Read:

CM BS Yediyurappa: ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡ ಸಿಎಂ ಬಿಎಸ್​ವೈ, ಯಡಿಯೂರಪ್ಪಗೆ ಕ್ರೈಸ್ತರ ಬೆಂಬಲ

Read Full Article

Click on your DTH Provider to Add TV9 Kannada