CM BS Yediyurappa: ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಧನ್ವಂತರಿ ಹೋಮದಲ್ಲಿ ಬಿಎಸ್‌ವೈ ಭಾಗಿ, ಯಡಿಯೂರಪ್ಪಗೆ ಕ್ರೈಸ್ತರ ಬೆಂಬಲ
ಬಿಎಸ್ ಯಡಿಯೂರಪ್ಪ: ಬೆಂಗಳೂರಿನ ಕಾಚರಕನಹಳ್ಳಿಯಲ್ಲಿರುವ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಧನ್ವಂತರಿ ಹೋಮ ಆಯೋಜಿಸಿದ್ದು ಸಿಎಂ ಬಿಎಸ್ ಯಡಿಯೂರಪ್ಪ ಭಾಗಿಯಾಗಿದ್ದಾರೆ.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಜೋರಾಗಿದೆ. ಈ ನಡುವೆ ಲೋಕ ಕಲ್ಯಾಣ ಮತ್ತು ಕೊರೊನಾ ನಿರ್ಮೂಲನೆಗಾಗಿ ಧನ್ವಂತರಿ ಹೋಮ ನಡೆಸಲಾಗುತ್ತಿದೆ. ಬೆಂಗಳೂರಿನ ಕಾಚರಕನಹಳ್ಳಿಯಲ್ಲಿರುವ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಧನ್ವಂತರಿ ಹೋಮ ಆಯೋಜಿಸಿದ್ದು ಸಿಎಂ ಬಿಎಸ್ ಯಡಿಯೂರಪ್ಪ ಭಾಗಿಯಾಗಿದ್ದಾರೆ. ಹೋಮದ ಪೂರ್ಣಾಹುತಿಯಲ್ಲಿ ಸಿಎಂ ಬಿಎಸ್‌ವೈ ಜೊತೆ ಶಾಸಕ ರಾಜುಗೌಡ, ಸಚಿವ ಬಿಸಿ ಪಾಟೀಲ್, ಸಚಿವ ಬೈರತಿ ಬಸವರಾಜ್ ಭಾಗಿ ಭಾಗಿಯಾಗಿದ್ದಾರೆ. ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಹೋಮ ನಡೆಸುತ್ತಿದೆ.
ಯಡಿಯೂರಪ್ಪಗೆ ಕ್ರೈಸ್ತರ ಬೆಂಬಲ ಇನ್ನು ಮತ್ತೊಂದು ಕಡೆ ಅಖಿಲ ಭಾರತ ಕ್ರೈಸ್ತ ಮಹಾಸಭಾದ ಮುಖಂಡರು ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದಾರೆ. ವಿ ಸ್ಟ್ಯಾಂಡ್ ವಿತ್ ಯಡಿಯೂರಪ್ಪ ಎಂದು ಬರೆಯಲ್ಪಟ್ಟಿದ್ದ ಬ್ಯಾನರ್ ಹಿಡಿದು ಮುಖಂಡರು ಆಗಮಿಸಿದ್ದಾರೆ.
ಮೊದಲ ಸಲ ರಾಜೀನಾಮೆ ಸುಳಿವು ನೀಡಿದ ಸಿಎಂ ಬಿಎಸ್‌ವೈ? ಇನ್ನು ಹೋಮದ ಬಳಿಕ ಬೆಂಗಳೂರಿನಲ್ಲಿ ಸಿಎಂ ರಾಜೀನಾಮೇ ಬಗ್ಗೆ ಮೌನ ಮುರಿದಿದ್ದಾರೆ. ಹೈಕಮಾಂಡ್ ಏನು ಹೇಳುತ್ತದೆಯೋ ಆ ತೀರ್ಮಾನ ನನ್ನದು. ಜು.25ರಂದು ಹೈಕಮಾಂಡ್ ನೀಡುವ ಸೂಚನೆಯಂತೆ ಕೆಲಸ ಮಾಡುತ್ತೇನೆ. ಜುಲೈ 26ರಿಂದ ನನ್ನ ಕೆಲಸವನ್ನು ಮಾಡುತ್ತೇನೆ ಎಂದರು.
ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರ ಕೊಟ್ಟಿಲ್ಲ. ಆದ್ರೆ ನನ್ನ ಕೆಲಸವನ್ನು ಮೆಚ್ಚಿ ಅಧಿಕಾರವನ್ನು ಕೊಟ್ಟಿದ್ದಾರೆ. ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರುವ ಸಂಕಲ್ಪ ನನ್ನದು. ಪಕ್ಷದ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳದೆ ನನಗೆ ಉತ್ತಮ ರೀತಿಯಲ್ಲಿ ಸಹಕಾರವನ್ನು ಕೊಡಬೇಕು. ನನ್ನ ಪರ ಹೇಳಿಕೆ, ಪ್ರತಿಭಟನೆ ಮಾಡದಂತೆ ಮನವಿ ಮಾಡುವೆ. ಮಠಾಧೀಶರು ನನಗೆ ಅಭೂತಪೂರ್ವ ಬೆಂಬಲ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜುಲೈ 26ರಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ರು.
ಇದನ್ನೂ ಓದಿ: Big Breaking: ಸಿಎಂ ಹುದ್ದೆಗೆ ರಾಜೀನಾಮೆ ? ಸುಳಿವು ನೀಡಿದ ಬಿಎಸ್ ಯಡಿಯೂರಪ್ಪ
Published On - 11:08 am, Thu, 22 July 21