ಕೊರೊನಾ ಡೆತ್ ಬಗ್ಗೆ ಅಡಿಟಿಂಗ್ ಆಗಲಿ, ಆಸ್ಪತ್ರೆಗಳ ಬೆಡ್ ರಿಯಾಲಿಟಿ ಚೆಕ್ಗೆ ನಾನೇ ಬರುತ್ತೇನೆ: ಡಿ.ಕೆ.ಶಿವಕುಮಾರ್
ಕರ್ನಾಟಕ ರಾಜ್ಯದಲ್ಲಿ ಲಾಕ್ಡೌನ್ ಮಾಡುವುದು ವೇಡ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಳೆದ ಬಾರಿ ಲಾಕ್ಡೌನ್ ಆದಾಗ ಜನರಿಗೆ ಏನು ಕೊಟ್ಟಿದ್ದೀರಿ? ಯಾವೆಲ್ಲ ನೆರವು ನೀಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕೊವಿದ್ ಹೆಚ್ಚುತ್ತಿರುವ ಬೆನ್ನಲ್ಲೇ ಆಕ್ಸಿಜನ್ ಮತ್ತು ಬೆಡ್ಗಳ ಕೊರತೆ ಬಗ್ಗೆ ಬಲವಾಗಿ ಮಾತು ಕೇಳಿಬರುತ್ತಿದೆ. ಏನೂ ಸಮಸ್ಯೆ ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ವಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ರಾಜ್ಯದ ಎಷ್ಟು ಆಸ್ಪತ್ರೆಗಳಲ್ಲಿ ಬೆಡ್ ಇದೆ ನೋಡೋಣ. ನಾನು ರಿಯಾಲಿಟಿ ಚೆಕ್ ಮಾಡುವುದಕ್ಕೆ ಬರುತ್ತೇನೆ ಎಂದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಏನೂ ಸಮಸ್ಯೆಯಿಲ್ಲ ಎಂದು ಸಚಿವರು ಪ್ರತಿನಿತ್ಯ ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತಿದ್ದಾರೆ. ಆದರೆ ವಾಸ್ತವ ಏನು ಎಂಬುದನ್ನು ನೋಡಬೇಕು. ಸರ್ಕಾರ ಮೊದಲೇ ಸೂಕ್ತ ಕ್ರಮ ಕೈಗೊಂಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ನೋಡಿ ಜನರು ನಗುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆಗೆ 25 ಸಾವಿರ ನಿಗದಿಪಡಿಸಲಾಗಿದೆ. ಶವಸಂಸ್ಕಾರ ಗೌರವಯುತವಾಗಿ ನಡೆಯಬೇಕು. ಟೋಕನ್ ತೆಗೆದುಕೊಂಡು, 25 ಸಾವಿರ ರೂ.ನೀಡಿ ಶವಸಂಸ್ಕಾರ ಮಾಡಬೇಕಾ? ಕೊರೊನಾ ಡೆತ್ ಬಗ್ಗೆ ಆಡಿಟಿಂಗ್ ಆಗಬೇಕು. ಆಗಷ್ಟೇ ರಾಜ್ಯದ ಜನರಿಗೆ ಸ್ಪಷ್ಟ ಮಾಹಿತಿ ಸಿಗುತ್ತದೆ. ರಾಜ್ಯದಲ್ಲಿ ಬೆಡ್ ಸಿಗದೆ ಸತ್ತವರೆಷ್ಟು? ಎಂಬುದೂ ತಿಳಿಯುತ್ತದೆ ಎಂದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಐದಾರು ಸಚಿವರಯ, ಅಧಿಕಾರಿಗಳು ಮಾತ್ರ ಸರ್ಕಾರವಲ್ಲ. ಸರ್ಕಾರ ಎಂದರೆ ಗ್ರಾಮ ಪಂಚಾಯಿತಿಯೂ ಸೇರಿರುತ್ತದೆ. ಪಿಎಂ ಕೇರ್ನಿಂದ ಎಷ್ಟು ಫಂಡ್ ಬಂತು ಲೆಕ್ಕ ಕೊಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಲಾಕ್ಡೌನ್ ಬೇಡ ಕರ್ನಾಟಕ ರಾಜ್ಯದಲ್ಲಿ ಲಾಕ್ಡೌನ್ ಮಾಡುವುದು ವೇಡ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಳೆದ ಬಾರಿ ಲಾಕ್ಡೌನ್ ಆದಾಗ ಜನರಿಗೆ ಏನು ಕೊಟ್ಟಿದ್ದೀರಿ? ಯಾವೆಲ್ಲ ನೆರವು ನೀಡಿದ್ದೀರಿ? ಎಂದು ಪ್ರಶ್ನಿಸಿದ ಅವರು, ಈ ಬಾರಿ ಲಾಕ್ಡೌನ್ ಮಾಡಿದರೆ ಜನರಿಗೆ ಏನು ನೆರವು ನೀಡುತ್ತೀರಿ? ಫುಡ್ ಕಿಟ್ ಕೊಡುತ್ತೀರಾ, ಆರ್ಥಿಕ ಸಹಾಯ ಮಾಡುತ್ತೀರಾ? ರಾಜ್ಯ ಸರ್ಕಾರ ಯಾವೆಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಕೇಳಿದ್ದಾರೆ. ಕೊರೊನಾ ಹೆಚ್ಚಳಕ್ಕೆ ಜನರೇ ಹೊಣೆ ಎಂದು ಸಚಿವ ಡಾ.ಸುಧಾಕರ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, ಜನರೇ ಕಾರಣ ಅನ್ನೋದಾದರೆ, ಆರೋಗ್ಯ ಸಚಿವರಾಗಿ ನೀವೇಕೆ ಇದ್ದೀರಿ? ನೀವೇನು ಮಾಡುತ್ತಿದ್ದೀರಿ? ಜನರಿಗೆ ಆಳ್ವಿಕೆ ಮಾಡಲು ಬಿಟ್ಟುಬಿಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: Employees Provident Fund | UAN ಸಂಖ್ಯೆಯ ಗೊಡವೆ ಇಲ್ಲದೆ ಪಿಎಫ್ ಖಾತೆಯಲ್ಲಿ ಬ್ಯಾಲೆನ್ಸ್ ಚೆಕ್ ಮಾಡುವ ಉಪಾಯ ಇಲ್ಲಿದೆ!
ಕೊರೊನಾ ಸೋಂಕಿಗೆ ಬೆಂಗಳೂರಿನಲ್ಲಿ 27 ವರ್ಷದ ಯುವಕ ಬಲಿ
Published On - 3:31 pm, Tue, 20 April 21