ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ಆಗ್ರಹ; ಬೇಡಿಕೆ ಈಡೇರಿಸದಿದ್ದರೆ ಅಕ್ಟೋಬರ್ 15ರಿಂದ ಮತ್ತೆ ಹೋರಾಟ
ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ಆಗ್ರಹ ವಿಚಾರದಲ್ಲಿ ಬೇಡಿಕೆ ಈಡೇರಿಸಲು ಮುಖ್ಯಮಮತ್ರಿ ಬಿ.ಎಸ್ ಯಡಿಯೂರಪ್ಪ 6 ತಿಂಗಳ ಸಮಯ ಕೇಳಿದ್ದಾರೆ. ಆ ಸಮಯದೊಳಗೆ ಬೇಡಿಕೆ ಈಡೇರಿಸದಿದ್ದರೆ ಅಕ್ಟೋಬರ್ 15ರಿಂದ ಮತ್ತೆ ಹೋರಾಟ ಕೈಗೊಳ್ಳುತ್ತೇವೆ ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.
ವಿಜಯಪುರ: ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ಆಗ್ರಹ ವಿಚಾರದಲ್ಲಿ ಬೇಡಿಕೆ ಈಡೇರಿಸಲು ಮುಖ್ಯಮಮತ್ರಿ ಬಿ.ಎಸ್ ಯಡಿಯೂರಪ್ಪ 6 ತಿಂಗಳ ಸಮಯ ಕೇಳಿದ್ದಾರೆ. ಆ ಸಮಯದೊಳಗೆ ಬೇಡಿಕೆ ಈಡೇರಿಸದಿದ್ದರೆ ಅಕ್ಟೋಬರ್ 15ರಿಂದ ಮತ್ತೆ ಹೋರಾಟ ಕೈಗೊಳ್ಳುತ್ತೇವೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.
ಸಚಿವ ಮುರುಗೇಶ್ ನಿರಾಣಿ ನಾಲಾಯಕ್ ಎಂಬ ಪದ ಬಳಸಿದ ವಿಚಾರದಲ್ಲಿ, ಅವುರು ಯಾವುದರಲ್ಲಿ ಒಳ್ಳೆಯವರಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಅನೇಕ ಹಿರಿಯರು ಮನವಿ ಮಾಡಿಕೊಂಡಿದ್ದರಿಂದ ಅವರಿಗೆ ಗೌರವ ಕೊಟ್ಟು ಹೋರಾಟ ನಿಲ್ಲಿಸಿದ್ದೇವೆ. ನಮ್ಮ ಕೊನೆಯ ಹೋರಾಟ ಮಾಡು ಇಲ್ಲವೆ ಮಡಿಯ ರೀತಿ ಇರುತ್ತದೆ. ಇದನ್ನು ಮುರುಗೇಶ್ ನಿರಾಣಿ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಸಮಗ್ರ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸಿಎಂ ಬಿಎಸ್ವೈ ಸೂಚನೆ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಆಗ್ರಹಿಸಿ ಎಲ್ಲೆಡೆಯಿಂದ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಈ ಕುರಿತು ಸಮಗ್ರ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಹೋರಾಟ.. ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಶುರು ರಾಜ್ಯದಲ್ಲಿ ಪ್ರಮುಖ ಸಮಾಜವಾಗಿರೋ ಲಿಂಗಾಯತ ಪಂಚಮಸಾಲಿ ಸಮಾಜ 2ಎ ಮೀಸಲಾತಿಗಾಗಿ ಹೋರಾಡುತ್ತಿದೆ. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು ಅಂತಾ ಪಣತೊಟ್ಟಿರೋ ಕೂಡಲಸಂಗಮದ ಪಂಚಮಸಾಲಿ ಶ್ರೀಗಳು, ಕೂಡಲಸಂಗಮದಿಂದ ಪಾದಯಾತ್ರೆ ಆರಂಭಿಸಿದ್ದರು. ಬೆಂಗಳೂರುವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕೂಡಲಸಂಗಮದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ರಿಂದ ಹೋರಾಟ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ: ಸಮಗ್ರ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸಿಎಂ BSY ಸೂಚನೆ