ಡಿಕೆ ಶಿವಕುಮಾರ್ಗೆ ತಾತ್ಕಾಲಿಕ ರಿಲೀಫ್: ಸಿಬಿಐ ನಡೆ ನೋಡಿಕೊಂಡು ಮುಂದಿನ ನಿರ್ಧಾರ ಮಾಡುತ್ತೇನೆ ಎಂದ ಯತ್ನಾಳ್
ತನ್ನ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಬಿಜೆಪಿ ಸರ್ಕಾರದ ಆದೇಶಕ್ಕೆ ತಡೆಕೋರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಾಪಸ್ ಪಡೆಯಲು ಹೈಕೋರ್ಟ್ ಅನುಮತಿ ನೀಡಿದೆ. ಮುಂದೆ ಸಿಬಿಐ ನಡೆಯ ಮೇಲೆ ಡಿಕೆ ಶಿವಕುಮಾರ್ ಅವರ ಭವಿಷ್ಯ ನಿಂತಿದೆ. ಈ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಟ್ವೀಟ್ ಮಾಡಿದ್ದು, ಸಿಬಿಐ ನಡೆಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.
ಬೆಂಗಳೂರು, ನ.29: ತನ್ನ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಬಿಜೆಪಿ ಸರ್ಕಾರದ ಆದೇಶಕ್ಕೆ ತಡೆಕೋರಿ ಡಿಕೆ ಶಿವಕುಮಾರ್ (DK Shivakumar) ಸಲ್ಲಿಸಿದ್ದ ಮೇಲ್ಮನವಿಯನ್ನು ವಾಪಸ್ ಪಡೆಯಲು ಹೈಕೋರ್ಟ್ ಅನುಮತಿ ನೀಡಿದೆ. ಆ ಮೂಲಕ ಕೋರ್ಟ್ ಡಿಕೆ ಶಿವಕುಮಾರ್ಗೆ ತಾತ್ಕಾಲಿಕ ರಿಲೀಫ್ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಸಿಬಿಐ ಮುಂದಿನ ನಡೆಯ ಮೇಲೆ ನನ್ನ ನಿರ್ಧಾರ ನಿಂತಿದೆ ಎಂದಿದ್ದಾರೆ.
ಗೌರವಾನ್ವಿತ ಹೈಕೋರ್ಟ್ ರಿಟ್ ಮೇಲ್ಮನವಿ ಮತ್ತು ರಿಟ್ ಅರ್ಜಿಯನ್ನು ಹಿಂಪಡೆಯಲು ಮೇಲ್ಮನವಿದಾರರಿಗೆ ಅನುಮತಿ ನೀಡಿದೆ. ಅನುಮತಿ ಹಿಂಪಡೆಯುವ ಸವಾಲನ್ನು ಪೀಠ ವಿಚಾರಣೆ ನಡೆಸಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅನುಮತಿ ವಾಪಸ್ ಪಡೆಯುವ ಸರ್ಕಾರದ ನಿರ್ಧಾರವನ್ನು ಸಿಬಿಐ ಪ್ರಶ್ನಿಸಬೇಕು, ಇಲ್ಲದಿದ್ದರೆ ನನ್ನ ಕಾನೂನು ತಂಡವನ್ನು ಸಂಪರ್ಕಿಸಿ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ ಎಂದಿದ್ದಾರೆ.
Honourable HighCourt has permitted the appellant to withdraw the Writ appeal and Writ Petition.
HighCourt has made it clear that the bench will hear the challenge to the withdrawal of Consent.
I will wait for CBI to challenge the withdrawal of consent, Else ill consult my legal… https://t.co/3IGn3bNfQG
— Basanagouda R Patil (Yatnal) (@BasanagoudaBJP) November 29, 2023
ಇದನ್ನೂ ಓದಿ: ಡಿಕೆ ಶಿವಕುಮಾರ್ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್, ಮೇಲ್ಮನವಿ ವಾಪಸ್ಗೆ ಅನುಮತಿ
ತಪ್ಪೇ ಮಾಡದೆ ಇದ್ದರೇ ತನಿಖೆ ಎದುರಿಸಲು “ಭಯ”ವೇಕೆ?
ತನ್ನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಯತ್ನಾಳ್ಗೆ ಯಾರ್ಯಾರಿಗೆ ಯಾವ ಯಾವ ರೀತಿ ಉತ್ತರ ಕೊಡಬೇಕೋ ಕೊಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಯತ್ನಾಳ್, ಯಾರು, ಯಾರಿಗೆ ಉತ್ತರ ಕೊಡುತ್ತಾರೋ ಕಾಲ ನಿರ್ಣಯ ಮಾಡುತ್ತದೆ ಎಂದಿದ್ದಾರೆ.
ಯಾರು, ಯಾರಿಗೆ ಉತ್ತರ ಕೊಡುತ್ತಾರೋ ಕಾಲ ನಿರ್ಣಯ ಮಾಡುತ್ತದೆ.
ನ್ಯಾಯಾಲಯದಲ್ಲಿ ಹಾಕಿದ್ದ ಅರ್ಜಿ ವಾಪಸ್ ಪಡೆಯುವುದು ಒಂದು ವಿಜಯವೆಂದು ಸಂಭ್ರಮಿಸಿದರೆ ಅದನ್ನು ಯಾರು ಪ್ರಶ್ನೆ ಮಾಡುತ್ತಾರೆ?
ತಪ್ಪೇ ಮಾಡದೆ ಇದ್ದರೇ ತನಿಖೆ ಎದುರಿಸಲು “ಭಯ”ವೇಕೆ? #NoAdjustmentPolitics
— Basanagouda R Patil (Yatnal) (@BasanagoudaBJP) November 29, 2023
ಈ ಬಗ್ಗೆ ಟ್ವೀಟ್ ಮಾಡಿದ ಯತ್ನಾಳ್, ಯಾರು, ಯಾರಿಗೆ ಉತ್ತರ ಕೊಡುತ್ತಾರೋ ಕಾಲ ನಿರ್ಣಯ ಮಾಡುತ್ತದೆ. ನ್ಯಾಯಾಲಯದಲ್ಲಿ ಹಾಕಿದ್ದ ಅರ್ಜಿ ವಾಪಸ್ ಪಡೆಯುವುದು ಒಂದು ವಿಜಯವೆಂದು ಸಂಭ್ರಮಿಸಿದರೆ ಅದನ್ನು ಯಾರು ಪ್ರಶ್ನೆ ಮಾಡುತ್ತಾರೆ? ತಪ್ಪೇ ಮಾಡದೆ ಇದ್ದರೇ ತನಿಖೆ ಎದುರಿಸಲು “ಭಯ”ವೇಕೆ? ಎಂದು ಪ್ರಶ್ನಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ