ಮೈಸೂರು ವಿವಿಯ ಉತ್ತರ ಪತ್ರಿಕೆ ಅಕ್ರಮ ಜಾಲ ಕೇಸ್; ಆರೋಪಿ ಇನ್ಸ್ಪೆಕ್ಟರ್ ಜಾಮೀನು ಅರ್ಜಿ ವಜಾ

ಆರೋಪಿಯಾಗಿದ್ದ ಮಂಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ಜಾಮೀನು ಅರ್ಜಿ ವಜಾಗೊಂಡಿದೆ. ಮೈಸೂರಿನ 5ನೇ ಜಿಲ್ಲಾ & ಸತ್ರ ನ್ಯಾಯಾಲಯದಿಂದ ವಜಾಗೊಳಿಸಿದೆ.

ಮೈಸೂರು ವಿವಿಯ ಉತ್ತರ ಪತ್ರಿಕೆ ಅಕ್ರಮ ಜಾಲ ಕೇಸ್; ಆರೋಪಿ ಇನ್ಸ್ಪೆಕ್ಟರ್ ಜಾಮೀನು ಅರ್ಜಿ ವಜಾ
ಪ್ರಾತಿನಿಧಿಕ ಚಿತ್ರ
Edited By: ಆಯೇಷಾ ಬಾನು

Updated on: Jun 30, 2021 | 11:23 AM

ಮೈಸೂರು ವಿವಿಯ ಉತ್ತರ ಪತ್ರಿಕೆ ಅಕ್ರಮ ಜಾಲ ಕೇಸ್ಗೆ ಸಂಬಂಧಿಸಿ ಪ್ರಕರಣದ ಆರೋಪಿಯಾಗಿದ್ದ ಮಂಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ಜಾಮೀನು ಅರ್ಜಿ ವಜಾಗೊಂಡಿದೆ. ಮೈಸೂರಿನ 5ನೇ ಜಿಲ್ಲಾ & ಸತ್ರ ನ್ಯಾಯಾಲಯದಿಂದ ವಜಾಗೊಳಿಸಿದೆ. ಇನ್ನು ಈ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮೊಹಮ್ಮದ್ ನಿಸಾರ್ನನ್ನು ಮೈಸೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ವಿವಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ಲಾಡ್ಜ್‌ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಲಾಗಿದೆ ಎಂದು ಹೇಳಲಾಗುತ್ತಿತ್ತು. ಏಪ್ರಿಲ್ 15, 22ರಂದು ಪ್ರಸಕ್ತ ಸಾಲಿನ ಪರೀಕ್ಷೆ ನಡೆದಿತ್ತು. ಪರೀಕ್ಷೆ ಮುಗಿದ ಬಳಿಕ ಬಿ‌ಎಸ್ಸಿ ರಸಾಯನಶಾಸ್ತ್ರ ಪರೀಕ್ಷೆಯನ್ನು ಚಂದನ್, ಚೇತನ್, ಇತರೆ ವಿದ್ಯಾರ್ಥಿಗಳು ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ಬರೆದಿದ್ದರು. ಈ ಪ್ರಕರಣ ಸಂಬಂಧ ಈಗ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ನಿಸಾರ್, ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ, ರಾಕೇಶ್, ಚಂದನ್, ಚೇತನ್, ಬ್ಲೂ ಡೈಮಂಡ್ ಲಾಡ್ಜ್ ಮಾಲೀಕನ ವಿರುದ್ಧ ಕೇಸ್ ದಾಖಲಾಗಿದೆ. ಪರೀಕ್ಷೆ ನಡೆಯುವಾಗ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ ದಾಳಿ ಮಾಡಿ ಆರೋಪಿಗಳ ಹೇಳಿಕೆ ಪಡೆದು ಆರೋಪಿಗಳನ್ನು ಬಿಟ್ಟ ಆರೋಪ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ ವಿರುದ್ಧವೂ FIR ದಾಖಲಾಗಿದೆ. ಸೆಕ್ಷನ್ 420, 406, 408, 470, 471, 472, 473, 474 ಸೇರಿ ಹಲವು ಸೆಕ್ಷನ್‌ಗಳಡಿ ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲಾಡ್ಜ್‌ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಿದ ಆರೋಪ; ಇನ್ಸ್‌ಪೆಕ್ಟರ್ ಸೇರಿ 6 ಜನರ ವಿರುದ್ಧ ಎಫ್​ಐಆರ್

TV9 Web

TV9 Kannada

Read More
Loading...
Unable to load recommendations.
Follow Us