ಬೆಂಗಳೂರು ಸೆ.25: ಮದ್ಯದ ಬೆಲೆಯಲ್ಲಿ ಕರ್ನಾಟಕ (Karnataka) ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ತೆಲಂಗಾಣ ಎರಡನೇ ಸ್ಥಾನದಲ್ಲಿದೆ. ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಎಂಆರ್ಪಿ (MRP) (ಮ್ಯಾಕ್ಸಿಮಮ್ ರೀಟೇಲ್ ಪ್ರೈಸ್) ಮೇಲಿನ ತೆರಿಗೆ ಕೂಡ ಹೆಚ್ಚಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯದ (Alcohol) ನೈಜ ಬೆಲೆಗೆ ಶೇ 83 ತೆರಿಗೆ ವಿಧಿಸಲಾಗುತ್ತದೆ. ವರದಿಯೊಂದರ ಪ್ರಕಾರ, ಗೋವಾದಲ್ಲಿ 100 ರೂ. ಗೆ ಮಾರಾಟವಾಗುವ ಸ್ಪಿರಿಟ್ (ನಾನ್-ಬಿಯರ್) ಕರ್ನಾಟಕದಲ್ಲಿ ಸುಮಾರು 513 ರೂ.ಗೆ ಮಾರಾಟವಾಗುತ್ತದೆ.
ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಮದ್ಯದ ಬೆಲೆ ಹೆಚ್ಚಾಗುತ್ತಿದೆ. ದೇಶದ ಎಲ್ಲ ರಾಜ್ಯಗಳಿಗಿಂತ ಗೋವಾದಲ್ಲಿ ಅತಿ ಕಡಿಮೆ ಬೆಲೆಗೆ ಮದ್ಯ ಸಿಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಮೊದಲ ಬಜೆಟ್‌ನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತೀಯ ನಿರ್ಮಿತ ಮದ್ಯದ (ಐಎಂಎಲ್) ಎಲ್ಲಾ 18 ಸ್ಲ್ಯಾಬ್‌ಗಳ ಮೇಲೆ ಶೇ 20 ರಷ್ಟು ಮತ್ತು ಬಿಯರ್‌ನ ಮೇಲೆ ಸುಂಕವನ್ನು ಶೇ 10 ತೆರಿಗೆ ಹೆಚ್ಚಿಸಿದ್ದಾರೆ. ಅಬಕಾರಿ ಇಲಾಖೆಯ ಗುರಿಯ ಆದಾಯ ಗುರಿಯನ್ನೂ 36,000 ರೂ. ಕೋಟಿಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಗ್ಯಾರಂಟಿ ನಷ್ಟ ಭರಿಸೋಕ್ಕೆ ಸರ್ಕಾರದಿಂದ ಹೊಸ ಪ್ಲಾನ್; ಮಾಲ್, ಸೂಪರ್ ಮಾರ್ಕೆಟ್‌ನಲ್ಲೂ ಮದ್ಯ ಮಾರಾಟ
ಕರ್ನಾಟಕದ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಫೆಡರೇಶನ್‌ನ ಹೇಳಿಕೆಯ ಪ್ರಕಾರ ಆಗಸ್ಟ್‌ನ ಮೊದಲ ಎರಡು ವಾರಗಳಲ್ಲಿ ಮಾರಾಟ ಮತ್ತು ಆದಾಯ ಎರಡರಲ್ಲೂ ಗಣನೀಯ ಕುಸಿತ ಕಂಡಿದೆ. ಇದರಿಂದ ಸರ್ಕಾರದ ಯೋಜನೆಗಳಿಗೆ ಹೊಡೆತ ಬಿದ್ದಿದೆ.
ಆಗಸ್ಟ್‌ನ ಮೊದಲಾರ್ಧದಲ್ಲಿ ಐಎಮ್ಎಲ್ನ 21.87 ಲಕ್ಷ ಬಾಕ್ಸ್‌ಗಳು ಮಾರಾಟವಾಗಿವೆ. ಇದು ಆಗಸ್ಟ್ 2022 ರಲ್ಲಿ ಆಗಸ್ಟ್ ತಿಂಗಳಲ್ಲಿ ಮಾರವಾಟವಾದ ಮದ್ಯಕ್ಕಿಂತ ಶೇ 14.25 ರಷ್ಟು ಕಡಿಮೆಯಾಗಿದೆ. ಹೊಸ ಬೆಲೆ ಜುಲೈ 20 ರಿಂದ ಜಾರಿಗೆ ಬಂದಿದೆ. ಹೊಸ ಬೆಲೆ ಬಂದ ನಂತರ ಮದ್ಯಕ್ಕೆ ಬೇಡಿಕೆ ಕಡಿಮೆಯಾಗಿದೆ ಎಂದು ಸಂಘದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Mon, 25 September 23