ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಸಭೆಯೊಂದು ವಿಜಯನಗರದ ಸುಜ್ಞಾನ ಮಂಟಪದಲ್ಲಿ ಈಗ ನಡೆಯುತ್ತಿದೆ. ಉಜ್ಜಯಿನಿ ಪೀಠದ ಜಗದ್ಗುರು ನೇತೃತ್ವದಲ್ಲಿ ಸುಮಾರು 160 ರಿಂದ 180 ಮಠಾಧೀಶರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಭೆ ಆರಂಭವಾಗುತ್ತಿದ್ದಂತೆ ಸಮುದಾಯದ ಉಪಪಂಗಡಗಳನ್ನು ಒಬಿಸಿಗೆ ಸೇರಿಸುವಂತೆ ಕೇಂದ್ರಕ್ಕೆ ಒತ್ತಾಯಿಸಿ ಶ್ರೀಗಳು ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಬಿಎಸ್ ಪರಮಶಿವಯ್ಯ ಅವರ ಮೂಲಕ ಸರ್ಕಾರಕ್ಕೆ ರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟವು ಏಳು ಪುಟದ ಮನವಿ ಸಲ್ಲಿಸಿದೆ.
ವೇದಿಕೆಯ ಮೇಲೆ ಸರ್ಪಭೂಷನ ಮಠದ ಮಲ್ಲಿಕಾರ್ಜುನ ದೇವರು, ಉಜ್ಜಯಿನಿ ಜಗದ್ಗುರು ಡಾ ಮರುಳಸಿದ್ದಶಿವಾಚಾರ್ಯ ಮಹಾ ಸ್ವಾಮಿಗಳು, ಶ್ರೀಶೈಲ ಜಗದ್ಗುರು ಚೆನ್ನಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು, ಸಿದ್ಧಗಂಗಾಶ್ರೀಗಳು, ದಿಂಗಾಲೇಶ್ವರ ಸ್ವಾಮಿಗಳು, ಸಿಂದಗಿ ಪ್ರಭು ಸಾರಂಗ ಶಿವಾಚಾರ್ಯ ಸ್ವಾಮಿಗಳು, ಮುಚ್ಚಳಾಂಭ ಶ್ರೀಗಳು, ಶಿವಗಂಗೆ ಶ್ರೀಗಳಾದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು, ಬಸವಾನಂದ ಸ್ವಾಮಿಗಳು, ಉಪ್ಪೂರು ಗದ್ದಿಗೆಯ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮಹಾಂತ ಲಿಂಗ ಶಿವಾಚಾರ್ಯ ಸ್ವಾಮಿಗಳು ವಿಭೂತಿಪುರ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಪರಮಶಿವಯ್ಯ ಹಾಗೂ ಕೆಆರ್ಐಡಿಎಲ್ ಅಧ್ಯಕ್ಷ ಎಂ ರುದ್ರೇಶ್ ಉಪಸ್ಥಿತಿರಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಬಿಸಿಗೆ ಸೇರಿಸುವಂತೆ ಕೇಂದ್ರಕ್ಕೆ ಒತ್ತಾಯ
Published On - 11:41 am, Sat, 13 February 21