ಸ್ವಾತಂತ್ರ್ಯ ದಿನಾಚರಣೆ: ಜಿಲ್ಲಾವಾರು ಧ್ವಜಾರೋಹಣ ನಡೆಸಲಿರುವ ಸಚಿವರು ಯಾರು? ಪಟ್ಟಿ ಇಲ್ಲಿದೆ
Independence Day 2021: ಅನಾರೋಗ್ಯ ಅಥವಾ ಇತರ ಕಾರಣಗಳಿಂದ ಸೂಚಿತ ಸಚಿವರು ಧ್ವಜಾರೋಹಣ ಕಾರ್ಯಕ್ರಮಕ್ಕೆ ಅನುಪಸ್ಥಿತರಿದ್ದಲ್ಲಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡತಕ್ಕದ್ದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬೆಂಗಳೂರು: ಈ ಬಾರಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರುಗಳನ್ನು ನೇಮಕ ಮಾಡುವ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಎಲ್ಲಾ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, 15ನೇ ಆಗಸ್ಟ್ 2021ರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ (ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ) ಸೂಚಿತ ಸಚಿವರುಗಳನ್ನು ಹಾಗೂ ಜಿಲ್ಲಾಧಿಕಾರಿಗಳನ್ನು ಧ್ವಜಾರೋಹಣ ಮಾಡಲು ನೇಮಿಸಲಾಗಿದೆ ಎಂದು ತಿಳಿಸಲಾಗಿದೆ. ಎಲ್ಲಾ ಜಿಲ್ಲೆಗಳ ಪೈಕಿ ಚಾಮರಾಜನಗರ ಹಾಗೂ ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನಡೆಸಲಿದ್ದಾರೆ. ಉಳಿದ ಕಡೆಗಳಲ್ಲಿ ನೂತನ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
ಯಾವ ಜಿಲ್ಲೆಯಲ್ಲಿ, ಯಾವ ಸಚಿವರಿಂದ ಧ್ವಜಾರೋಹಣ ಇಲ್ಲಿದೆ ವಿವರ:
- ಬೆಳಗಾವಿ- ಗೋವಿಂದ ಎಂ ಕಾರಜೋಳ
- ಶಿವಮೊಗ್ಗ- ಕೆ.ಎಸ್ ಈಶ್ವರಪ್ಪ
- ಚಿತ್ರದುರ್ಗ- ಬಿ ಶ್ರೀರಾಮುಲು
- ರಾಯಚೂರು- ವಿ ಸೋಮಣ್ಣ
- ಬಾಗಲಕೋಟೆ- ಉಮೇಶ್ ವಿಶ್ವನಾಥ ಕತ್ತಿ
- ದಕ್ಷಿಣ ಕನ್ನಡ- ಎಸ್ ಅಂಗಾರ
- ತುಮಕೂರು- ಜೆ.ಸಿ ಮಾಧುಸ್ವಾಮಿ
- ಚಿಕ್ಕಮಗಳೂರು- ಆರಗ ಜ್ಞಾನೇಂದ್ರ
- ರಾಮನಗರ- ಡಾ. ಅಶ್ವತ್ಥ ನಾರಾಯಣ ಸಿ.ಎನ್
- ಗದಗ- ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ
- ವಿಜಯನಗರ- ಆನಂದ್ ಸಿಂಗ್
- ಕೊಡಗು- ಕೋಟ ಶ್ರೀನಿವಾಸ ಪೂಜಾರಿ
- ಬೀದರ್- ಪ್ರಭು ಚೌಹಾಣ್
- ಕಲಬುರಗಿ- ಮುರುಗೇಶ್ ರುದ್ರಪ್ಪ ನಿರಾಣಿ
- ಉತ್ತರ ಕನ್ನಡ- ಅರಬೈಲ್ ಶಿವರಾಮ್ ಹೆಬ್ಬಾರ್
- ಮೈಸೂರು- ಎಸ್.ಟಿ ಸೋಮಶೇಖರ್
- ಹಾವೇರಿ- ಬಿ.ಸಿ ಪಾಟೀಲ್
- ದಾವಣಗೆರೆ- ಬಿ. ಬಸವರಾಜ (ಭೈರತಿ)
- ಚಿಕ್ಕಬಳ್ಳಾಪುರ- ಡಾ. ಕೆ ಸುಧಾಕರ್
- ಹಾಸನ- ಕೆ. ಗೋಪಾಲಯ್ಯ
- ವಿಜಯಪುರ- ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ
- ಬೆಂಗಳೂರು ಗ್ರಾಮಾಂತರ- ಎನ್ ನಾಗರಾಜು (ಎಂಟಿಬಿ)
- ಮಂಡ್ಯ- ಡಾ. ಕೆ.ಸಿ ನಾರಾಯಣಗೌಡ
- ಯಾದಗಿರಿ- ಬಿ.ಸಿ ನಾಗೇಶ್
- ಉಡುಪಿ- ವಿ ಸುನೀಲ್ ಕುಮಾರ್
- ಕೊಪ್ಪಳ- ಆಚಾರ್ ಹಾಲಪ್ಪ ಬಸಪ್ಪ
- ಧಾರವಾಡ- ಶಂಕರ್ ಬಿ ಪಾಟೀಲ್ ಮುನೇನಕೊಪ್ಪ
- ಕೋಲಾರ- ಮುನಿರತ್ನ
- ಚಾಮರಾಜನಗರ- ಜಿಲ್ಲಾಧಿಕಾರಿಗಳು
- ಬಳ್ಳಾರಿ- ಜಿಲ್ಲಾಧಿಕಾರಿಗಳು
ಅನಾರೋಗ್ಯ ಅಥವಾ ಇತರ ಕಾರಣಗಳಿಂದ ಸೂಚಿತ ಸಚಿವರು ಧ್ವಜಾರೋಹಣ ಕಾರ್ಯಕ್ರಮಕ್ಕೆ ಅನುಪಸ್ಥಿತರಿದ್ದಲ್ಲಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡತಕ್ಕದ್ದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕನ್ನಡ ಪುಸ್ತಕ ಕೊಡಿ ಎಂದ ನೂತನ ಸಚಿವ ಸುನಿಲ್ ಕುಮಾರ್ ಈಗ ಕಲಾವಿದರೊಂದಿಗೆ ಕಾಫಿ ಕುಡಿಯಲಿದ್ದಾರೆ!