ಕರ್ನಾಟಕದ ಈ ಜಿಲ್ಲೆಗಳಿಗೆ ರೈಲ್ವೆ ಇಲಾಖೆಯ ಬಂಪರ್ ಕೊಡುಗೆ: 4 ವಿಶೇಷ ರೈಲುಗಳು ‘ಖಾಯಂ’! ದರದಲ್ಲೂ ಇಳಿಕೆ

ಭಾರತೀಯ ರೈಲ್ವೆ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಈವರೆಗೆ ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದ ನಾಲ್ಕು ಪ್ರಮುಖ ರೈಲುಗಳನ್ನು ಕಾಯಂಗೊಳಿಸಿ ಆದೇಶ ಹೊರಡಿಸಲಾಗಿದೆ. ಇದರಿಂದ ಟಿಕೆಟ್ ದರ ಇಳಿಕೆಯಾಗುವುದರ ಜೊತೆಗೆ ಸಂಚಾರದ ವಿಶ್ವಾಸಾರ್ಹತೆ ಹೆಚ್ಚಾಗಿದೆ. ಸೊಲ್ಲಾಪುರ-ಕಲಬುರಗಿ, ದೌಂಡ್-ಕಲಬುರಗಿ, ಸೊಲ್ಲಾಪುರ-ಮುಂಬೈ, ಮತ್ತು ಸೊಲ್ಲಾಪುರ-ಅನಕಾಪಲ್ಲಿ ರೈಲುಗಳು ಇನ್ನು ನಿಯಮಿತವಾಗಿ ಸಂಚರಿಸಲಿವೆ.

ಕರ್ನಾಟಕದ ಈ ಜಿಲ್ಲೆಗಳಿಗೆ ರೈಲ್ವೆ ಇಲಾಖೆಯ ಬಂಪರ್ ಕೊಡುಗೆ: 4 ವಿಶೇಷ ರೈಲುಗಳು ಖಾಯಂ! ದರದಲ್ಲೂ ಇಳಿಕೆ
ಸಾಂದರ್ಭಿಕ ಚಿತ್ರ

Updated on: May 01, 2026 | 12:10 PM

ಬೆಂಗಳೂರು, ಮೇ.1: ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಮಂಡಳಿಯು ಭರ್ಜರಿ ಸಿಹಿಸುದ್ದಿ ನೀಡಿದೆ. ಈವರೆಗೆ ತಾತ್ಕಾಲಿಕವಾಗಿ ‘ವಿಶೇಷ ರೈಲು’ಗಳಾಗಿ ಸಂಚರಿಸುತ್ತಿದ್ದ ನಾಲ್ಕು ಪ್ರಮುಖ ರೈಲುಗಳನ್ನು ಈಗ ಕಾಯಂಗೊಳಿಸಿ ಆದೇಶ ಹೊರಡಿಸಲಾಗಿದೆ. ಇದರಿಂದ ಟಿಕೆಟ್ ದರ ಇಳಿಕೆಯಾಗುವುದರ ಜೊತೆಗೆ ಸಂಚಾರದ ವಿಶ್ವಾಸಾರ್ಹತೆ ಹೆಚ್ಚಾದಂತಾಗಿದೆ.

ಖಾಯಂಗೊಂಡ ರೈಲುಗಳ ವಿವರ:

ಸೊಲ್ಲಾಪುರ – ಕಲಬುರಗಿ ಡೆಮು (71435/71436): ಪ್ರತಿದಿನ ಸಂಚರಿಸುವ ಈ ರೈಲು ಗಾಣಗಾಪುರ ದತ್ತಾತ್ರೇಯ ಭಕ್ತರಿಗೆ ಮತ್ತು ದೈನಂದಿನ ಪ್ರಯಾಣಿಕರಿಗೆ ವರದಾನವಾಗಲಿದೆ.

ದೌಂಡ್ – ಕಲಬುರಗಿ ಫಾಸ್ಟ್ ಪ್ಯಾಸೆಂಜರ್: ವಾರದ ಐದು ದಿನ (51301/51302) ಹಾಗೂ ವಾರಕ್ಕೆ ಎರಡು ದಿನ (51303/51304) ಸಂಚರಿಸುವ ರೈಲುಗಳನ್ನು ನಿಯಮಿತಗೊಳಿಸಲಾಗಿದೆ.

ಸೊಲ್ಲಾಪುರ – ಮುಂಬೈ (ಲೋಕಮಾನ್ಯ ತಿಲಕ್) ಎಕ್ಸ್‌ಪ್ರೆಸ್ (11303/11304): ಕಲಬುರಗಿ, ಹುಮ್ನಾಬಾದ್, ಬೀದರ್ ಮತ್ತು ಭಾಲ್ಕಿ ಮೂಲಕ ಸಂಚರಿಸುವ ಈ ರೈಲು ಕಲ್ಯಾಣ ಕರ್ನಾಟಕದಿಂದ ಮುಂಬೈಗೆ ನೇರ ಸಂಪರ್ಕ ಕಲ್ಪಿಸಲಿದೆ.

ಸೊಲ್ಲಾಪುರ – ಅನಕಾಪಲ್ಲಿ ಎಕ್ಸ್‌ಪ್ರೆಸ್ (11313/11314): ವಾಡಿ, ಯಾದಗಿರಿ ಮತ್ತು ರಾಯಚೂರು ಮೂಲಕ ಸಾಗುವ ಈ ರೈಲು ಆಂಧ್ರಪ್ರದೇಶದ ವಿಜಯವಾಡ ಮತ್ತು ಕರಾವಳಿ ಭಾಗಕ್ಕೆ ತೆರಳಲು ಸಹಕಾರಿಯಾಗಿದೆ.

ಇದನ್ನೂ ಓದಿ: ಮಳೆ ಮಧ್ಯೆ ಜೆಪಿ ನಗರ ಟು ಕೋರಮಂಗಲ ಜರ್ನಿ: ಆಟೋ ಚಾಲಕನ ಈ ಒಂದು ಮಾತು ಪ್ರಿಯಾಂಕಾ ಕಣ್ಣಾಲಿ ಒದ್ದೆ ಮಾಡಿದ್ದು ಯಾಕೆ ಗೊತ್ತಾ?

ಪ್ರಯಾಣಿಕರಿಗಾಗುವ ಲಾಭಗಳೇನು?

ಟಿಕೆಟ್ ದರ ಇಳಿಕೆ: ‘ವಿಶೇಷ ರೈಲು’ ಎಂಬ ಹಣೆಪಟ್ಟಿ ದೂರವಾಗುವುದರಿಂದ ಹೆಚ್ಚುವರಿ ಶುಲ್ಕ ರದ್ದಾಗಿ ಸಾಮಾನ್ಯ ದರ ಅನ್ವಯವಾಗಲಿದೆ.

ಸ್ಥಿರ ಸಂಚಾರ: ರೈಲುಗಳು ರದ್ದಾಗುವ ಆತಂಕವಿಲ್ಲದೆ ಸಾರ್ವಜನಿಕರು ಮುಂಗಡ ಟಿಕೆಟ್ ಕಾಯ್ದಿರಿಸಬಹುದು.

ಅಂತರರಾಜ್ಯ ಸಂಪರ್ಕ: ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ತೆರಳುವ ವ್ಯಾಪಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಇದು ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us