ಬೆಂಗಳೂರು, ಆಗಸ್ಟ್ 16: ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ರದ್ದುಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಇತ್ತೀಚೆಗೆ ಹೇಳಿದ್ದರು. ಇದೀಗ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಇನ್ಫೋಸಿಸ್ ಮಂಡಳಿಯ ಮಾಜಿ ಸದಸ್ಯ ಮೋಹನ್‌ದಾಸ್ ಪೈ ಅವರು ಟೀಕಿಸಿದ್ದು, ಇದು ‘ನಮ್ಮ ಯುವಕರ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ’ ಎಂದು ಕಿಡಿಕಾರಿದ್ದಾರೆ. ಎನ್ಇಪಿ ರದ್ದು ಮಾಡುವ ನಿರ್ಣಯವು ಬಹಳ ಕೆಟ್ಟ ನಿರ್ಧಾರವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಸಂಸ್ಥೆಗಳಿಗೆ ಹೊಸ ಆಯಾಮ ಹಾಗೂ ತತ್ವಗಳನ್ನು ಕಟ್ಟಿಕೊಡುತ್ತಿತ್ತು ಎಂದು ಹೇಳಿದ್ದಾರೆ.
ಈ ಕುರಿತಾಗಿ ಮೋಹನ್‌ದಾಸ್ ಪೈ ಅವರು ಟ್ವೀಟ್ ಮಾಡಿದ್ದು, ಸರ್ಕಾರವು ಅಗತ್ಯ ಬಿದ್ದರೆ ಎನ್ಇಪಿ ನಿಯಮಗಳನ್ನು ಮಾರ್ಪಾಡುಗೊಳಿಸಬಹುದಾಗಿತ್ತು. ಅದರ ಬದಲಾಗಿ ರಾಜಕೀಯ ಹಿತಾಸಕ್ತಿಗಾಗಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ರಾಜಿಯಾಗಿರುವುದು ಸರಿಯಲ್ಲ, ಸಂವಿಧಾನಿಕ ತತ್ವಗಳು ಮರೆಯಾದವೇ ಎಂದು ಪ್ರಶ್ನಿಸಿದ್ದಾರೆ.
Very wrong decision!NEP is a frame work,set of principles which give flexibility to Ed institutions and greater autonomy.States can modify,change!why isthe future of our youth compromised for political reasons?where is the consultations? @CMofKarnataka @DKShivakumar @rajeevgowda https://t.co/GJyGzasZCt
— Mohandas Pai (@TVMohandasPai) August 16, 2023
ಅದೇ ರೀತಿಯಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಪ್ರತಿಕ್ರಿಯಿಸಿದ್ದು, ಇದೊಂದು ಮೂರ್ಖ ನಿರ್ಧಾರ. ಒಂದು ವೇಳೆ ಎನ್‌ಇಪಿ ಹಿಂಪಡೆದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಎನ್ಇಪಿ ರದ್ದತಿ ಮಾಡುವ ಬದಲು ನಿಯಮಗಳಲ್ಲಿ ಸಣ್ಣಪುಟ್ಟ ಬದಲಾಣೆಗಳನ್ನು ಮಾಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೂ ಮುನ್ನ ಬಾಕಿ ಯೋಜನೆಗಳಿಗೆ ಅನುಮತಿ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ಶಾಸಕರ ಮನವಿ
ವಿರೋಧ ಪಕ್ಷದಲ್ಲಿದ್ದಾಗ, ಕಾಂಗ್ರೆಸ್ ಆರ್‌ಎಸ್‌ಎಸ್ ಪ್ರಧಾನ ಕಚೇರಿಯನ್ನು ಉಲ್ಲೇಖಿಸಿ ಎನ್‌ಇಪಿಯನ್ನು ‘ನಾಗ್ಪುರ ಶಿಕ್ಷಣ ನೀತಿ’ ಎಂದು ಈ ಹಿಂದೆ ಟೀಕೆ ಮಾಡಿತ್ತು.
#WATCH | Former Karnataka CM Basavaraj Bommai says “The decision to change NEP is a foolish one. NEP is deliberated for several years throughout the country. The Siddaramaiah govt had approved this draft during his old regime. The draft has been made with a futuristic approach… pic.twitter.com/ehOiST4EZa
— ANI (@ANI) August 16, 2023
ಚುನಾವಣೆಯ ನಂತರ ಸರ್ಕಾರ ರಚನೆಯಾಗುವ ಮೊದಲು ಶೈಕ್ಷಣಿಕ ವರ್ಷ ಪ್ರಾರಂಭವಾಗಿತ್ತು. ಆದ್ದರಿಂದ ವಿದ್ಯಾರ್ಥಿಗಳನ್ನು ಗೊಂದಲಕ್ಕಿಡು ಮಾಡಬಾರದೆಂದು ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಲಾಗುತ್ತಿದೆ. ಈ ಕುರಿತು ಸಕಲ ಸಿದ್ಧತೆಗಳೂ ನಡೆದಿವೆ ಎಂದು ಸಿಎಂ ಸಿದ್ದರಾಮಯ್ಯ ಆಗಸ್ಟ್ 14 ರಂದು ಸರ್ವ ಸದಸ್ಯರ ಸಭೆಯಲ್ಲಿ ಹೇಳಿದ್ದರು.
ಇದನ್ನೂ ಓದಿ: ಕಸ್ತೂರಿ ರಂಗನ್ ಬಗ್ಗೆ ವಿರೋಧವೋ, ಎನ್ಇಪಿ ಬಗ್ಗೆ ವಿರೋಧವೋ; ಕರ್ನಾಟಕ ಸರ್ಕಾರಕ್ಕೆ ಸಿಟಿ ರವಿ ಪ್ರಶ್ನೆ
ಎನ್‌ಇಪಿಯನ್ನು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ವಿರೋಧಿಸಿದ್ದಾರೆ. ಆದರೆ ಬಿಜೆಪಿ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ರಾಜಿ ಮಾಡಿಕೊಂಡು ಅದನ್ನು ಜಾರಿಗೆ ತರಲಾಗಿದೆ. 2021 ರಲ್ಲಿ ಕರ್ನಾಟಕದಲ್ಲಿ ಉನ್ನತ ಶಿಕ್ಷಣದಲ್ಲಿ NEP ಅನ್ನು ಮೊದಲು ಜಾರಿಗೆ ತರಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.