ಕೆಅರ್ ಎಸ್ ಗೆ ಒಳಹರಿವು ಅಕ್ಷರಶಃ ಶೂನ್ಯವಾಗಿದೆ, ಮಳೆಗಾಗಿ ದೇವರನ್ನು ಪ್ರಾರ್ಥಿಸದೆ ಬೇರೆ ದಾರಿಯಿಲ್ಲ: ಡಿಕೆ ಶಿವಕುಮಾರ್

ಕೆಅರ್ ಎಸ್ ಗೆ ಒಳಹರಿವು ಅಕ್ಷರಶಃ ಶೂನ್ಯವಾಗಿದೆ, ಮಳೆಗಾಗಿ ದೇವರನ್ನು ಪ್ರಾರ್ಥಿಸದೆ ಬೇರೆ ದಾರಿಯಿಲ್ಲ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 30, 2023 | 6:17 PM

ಸಚಿವರು ಈ ಮಾತುಗಳನ್ನು ಮಾಧ್ಯಮದವರ ಮುಂದೆ ಹೇಳಿ ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡಿದರೆ ಹೇಗೆ? ವಸ್ತುಸ್ಥಿತಿ ಕನ್ನಡಿಗರಿಗೆ ಗೊತ್ತಿದೆ, ಅದರೆ ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರಕ್ಕೆ ಗೊತ್ತಿಲ್ಲ, ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತೆ ಆಡುತ್ತಿದೆ. ಹಾಗಾಗಿ ಶಿವಕುಮಾರ್, ಸಿಡಬ್ಲ್ಯುಅರ್ ಸಿ, ಸಿಡಬ್ಲ್ಯುಎಂಎ ಮತ್ತು ಸರ್ವೋಚ್ಛ ನ್ಯಾಯಾಲಯಕ್ಕೆ ಮನವರಿಕೆ ಮಾಡಿಸಬೇಕಿದೆ.

ಬೆಂಗಳೂರು: ಕಾವೇರಿ ನದಿ ನೀರು ವಿಚಾರವಾಗಿ ನಗರಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದ ಉಪ ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವ ಡಿಕೆ ಶಿವಕುಮಾರ್ (DK Shivakumar), ತಮಿಳುನಾಡುಗೆ ನೀರು ಬಿಡುವ ಸ್ಥಿತಿಯಲ್ಲಿ ರಾಜ್ಯ ಇಲ್ಲ, ಇದನ್ನು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದರು. ಕೆಆರೆಸ್ ಗೆ ಒಳಹರಿವು (inflow to KRS) ಶೂನ್ಯವಾಗಿಬಿಟ್ಟಿದೆ. ಎಲ್ಲ ಜಲಾಶಯಗಳು ಸೇರಿ 51 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಕುಡಿಯುವದಕ್ಕೂ ನೀರಿನ ಕೊರತೆ ಉಂಟಾಗಲಿರುವುದರಿಂದ ಮಿಕ್ಕಿರುವ ನೀರನ್ನು ಸಂರಕ್ಷಣೆ ಮಾಡಿಕೊಳ್ಳಲೇಬೇಕಿದೆ ಎಂದು ಶಿವಕುಮಾರ್ ಹೇಳಿದರು. ಮಳೆ ಸುರಿದು ಜಲಾಶಯಗಳಲ್ಲಿ ನೀರು ಹರಿದು ಬರುಂತಾಗಲಿ ಎಂದದು ದೇವರನ್ನು ಪ್ರಾರ್ಥಿಸುವ ಹೊರತಾಗಿ ತಮ್ಮಲ್ಲಿ ಬೇರೆ ದಾರಿ ಉಳಿದಿಲ್ಲ ಎಂದು ಶಿವಕುಮಾರ್ ಹೇಳಿದರು. ಸಚಿವರು ಈ ಮಾತುಗಳನ್ನು ಮಾಧ್ಯಮದವರ ಮುಂದೆ ಹೇಳಿ ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡಿದರೆ ಹೇಗೆ? ವಸ್ತುಸ್ಥಿತಿ ಕನ್ನಡಿಗರಿಗೆ ಗೊತ್ತಿದೆ, ಅದರೆ ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರಕ್ಕೆ (Cauvery Water Management Authority) ಗೊತ್ತಿಲ್ಲ, ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತೆ ಆಡುತ್ತಿದೆ. ಹಾಗಾಗಿ ಶಿವಕುಮಾರ್, ಸಿಡಬ್ಲ್ಯುಅರ್ ಸಿ, ಸಿಡಬ್ಲ್ಯುಎಂಎ ಮತ್ತು ಸರ್ವೋಚ್ಛ ನ್ಯಾಯಾಲಯಕ್ಕೆ ಮನವರಿಕೆ ಮಾಡಿಸಬೇಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ