ಪರೀಕ್ಷೆಗೂ ಮುನ್ನ FDA ಆನ್ಸರ್ ಕೀ ಸೋರಿಕೆ ಪ್ರಕರಣ: BE ಮುಗಿಸಿ ನೇರವಾಗಿ SDA ಹುದ್ದೆಗೆ ಸೇರಿದ್ದ ರಮೇಶ್​ ಹೆರಕಲ್​

|

Updated on: Jan 25, 2021 | 6:36 PM

KPSCಯಲ್ಲಿ SDA ಆಗಿದ್ದ ರಮೇಶ್ ಹೆರಕಲ್ BE ಮುಗಿಸಿ ನೇರವಾಗಿ ಹುದ್ದೆಗೆ ಸೇರಿದ್ದ ಎಂದು ತಿಳಿದುಬಂದಿದೆ. VTUನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದ್ದ ರಮೇಶ್​ 2017ರ ಜನವರಿ 15ರಂದು SDA ಆಗಿ ನೇಮಕಗೊಂಡಿದ್ದ.

ಪರೀಕ್ಷೆಗೂ ಮುನ್ನ FDA ಆನ್ಸರ್ ಕೀ ಸೋರಿಕೆ ಪ್ರಕರಣ: BE ಮುಗಿಸಿ ನೇರವಾಗಿ SDA ಹುದ್ದೆಗೆ ಸೇರಿದ್ದ ರಮೇಶ್​ ಹೆರಕಲ್​
ರಮೇಶ್ ಹೆರಕಲ್
Follow us on

ಬಾಗಲಕೋಟೆ: ಪರೀಕ್ಷೆಗೂ ಮುನ್ನ FDA ಆನ್ಸರ್ ಕೀ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಿಸಿಬಿ ವಶದಲ್ಲಿರುವ ಬಾಗಲಕೋಟೆ ಮೂಲದ ರಮೇಶ್‌ ಹೆರಕಲ್​ನ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಿದೆ.

KPSCಯಲ್ಲಿ SDA ಆಗಿದ್ದ ರಮೇಶ್ ಹೆರಕಲ್ BE ಮುಗಿಸಿ ನೇರವಾಗಿ ಹುದ್ದೆಗೆ ಸೇರಿದ್ದ ಎಂದು ತಿಳಿದುಬಂದಿದೆ. VTUನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದ್ದ ರಮೇಶ್​ 2017ರ ಜನವರಿ 15ರಂದು SDA ಆಗಿ ನೇಮಕಗೊಂಡಿದ್ದ.

ಈ ಮುಂಚೆ, ಜಿಲ್ಲೆಯ ಚಿಕ್ಕಪಡಸಲಗಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ರಮೇಶ್​ ಹೆರಕಲ್​ ಜಮಖಂಡಿಯಲ್ಲಿ PUC ಓದಿದ್ದನು ಎಂದು ಹೇಳಲಾಗಿದೆ. ಬಳಿಕ, ಬೆಳಗಾವಿಯಲ್ಲಿ BEವ್ಯಾಸಂಗ ಮಾಡಿದ್ದನಂತೆ

ಈ ನಡುವೆ, ರಜೆಯಿದ್ದಾಗ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮಕ್ಕೆ ಬರುತ್ತಿದ್ದನಂತೆ. ಅಂದ ಹಾಗೆ, ರಮೇಶ್​ ಹೆರಕಲ್​ನನ್ನು ನಿನ್ನೆ ಹಿರೇಪಡಸಲಗಿ ಗ್ರಾಮದಲ್ಲಿ ವಶಕ್ಕೆ ಪಡೆಯಲಾಗಿತ್ತು.

FDA ಪ್ರಶ್ನೆಪತ್ರಿಕೆ ಸೋರಿಕೆ ಕೇಸ್‌: KPSCಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ SDA ಸಿಸಿಬಿ ವಶಕ್ಕೆ