ನಾವು ಬೆಂಗಳೂರಿಗೆ ಹೋರಾಟ ಮಾಡೋಕಲ್ಲ.. ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಲು ಬರ್ತಿದ್ದೇವೆ -ಕುರುಬೂರು ಶಾಂತಕುಮಾರ್
ನಾವು ಬೆಂಗಳೂರಿಗೆ ಹೋರಾಟ ಮಾಡುವುದಕ್ಕೆ ಬರುತ್ತಿಲ್ಲ. ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಲು ಬರ್ತಿದ್ದೇವೆ. ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್‌ಗೆ ಅವಕಾಶ ನೀಡಿದ್ದಾರೆ. ಹಾಗಾಗಿ, ಬೆಂಗಳೂರಿನಲ್ಲೂ ಟ್ರ್ಯಾಕ್ಟರ್ ಪರೇಡ್‌ಗೆ ಅನುಮತಿ ನೀಡ್ಬೇಕು ಎಂದು ಟಿವಿ9ಗೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಬೆಂಗಳೂರು: ನಾವು ಬೆಂಗಳೂರಿಗೆ ಹೋರಾಟ ಮಾಡುವುದಕ್ಕೆ ಬರುತ್ತಿಲ್ಲ. ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಲು ಬರ್ತಿದ್ದೇವೆ. ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್‌ಗೆ ಅವಕಾಶ ನೀಡಿದ್ದಾರೆ. ಹಾಗಾಗಿ, ಬೆಂಗಳೂರಿನಲ್ಲೂ ಟ್ರ್ಯಾಕ್ಟರ್ ಪರೇಡ್‌ಗೆ ಅನುಮತಿ ನೀಡ್ಬೇಕು ಎಂದು ಟಿವಿ9ಗೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ನಾಳೆ ದಿನ ಪೊಲೀಸರು ಅತಿರೇಕವಾಗಿ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಅವರೇ ಅದನ್ನು ಎದುರಿಸಬೇಕಾಗುತ್ತದೆ. ನಾವು ಈಗಾಗಲೇ ಎಲ್ಲ ರೈತರಿಗೆ ಕರೆ ಕೊಟ್ಟಿದ್ದೇವೆ. ಟ್ರ್ಯಾಕ್ಟರ್ ತಡೆದ ಸ್ಥಳದಲ್ಲೇ ಗೌರವ ಸಲ್ಲಿಸಲು ಹೇಳಿದ್ದೇವೆ. ಅಲ್ಲೇ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವಂತೆ ಹೇಳಿದ್ದೇವೆ ಎಂದು ಶಾಂತಕುಮಾರ್ ಹೇಳಿದರು.
ಆದರೆ ಈಗ, ಪೊಲೀಸರೇ ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ. ಮುಂದಾಗುವುದಕ್ಕೆ ಪೊಲೀಸರೇ ನೇರ ಹೊಣೆಯಾಗುತ್ತಾರೆ. ಪೊಲೀಸರು ಟ್ರ್ಯಾಕ್ಟರ್ ತಡೆದು ದಬ್ಬಾಳಿಕೆ ಮಾಡಿದರೆ ನಾವು ರಾಷ್ಟ್ರಗೀತೆ ಹಾಡುವ ಮೂಲಕ ಗೌರವ ಸಲ್ಲಿಸುತ್ತೇವೆ. ಅದನ್ನ ತಡೆದ್ರೆ ರಾಷ್ಟ್ರಗೀತೆಗೆ ಅಪಮಾನ ಮಾಡಿದಂತಾಗುತ್ತೆ ಎಂದು ಟಿವಿ9ಗೆ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ನಾಳಿನ ರೈತರ ಪ್ರತಿಭಟನೆ ಪರವಾಗಿ ಸರ್ಕಾರವೇ ನಿಲ್ಲಬೇಕು.. ಅವರೇ ರೈತರ ಧ್ವನಿಯಾಗಬೇಕು -ಡಿ.ಕೆ.ಶಿವಕುಮಾರ್