ಹುಡುಗಿಗೆ‌ ಕೈ ಕೊಟ್ಟವನ ಮನೆ ಅಡ್ರೆಸ್​ ತೋರಿಸಿದ್ದಕ್ಕೆ ಬೆಳೀತು ದುಶ್ಮನಿ.. ಸಕ್ಕರೆ ನಾಡಲ್ಲಿ ಬಿತ್ತು ಯುವಕನ ಹೆಣ!

ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಅಪಹರಿಸಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ MES ಬಡಾವಣೆಯಲ್ಲಿ ನಡೆದಿದೆ. 23 ವರ್ಷದ ಶರತ್ ಎಂಬ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಹುಡುಗಿಗೆ‌ ಕೈ ಕೊಟ್ಟವನ ಮನೆ ಅಡ್ರೆಸ್​ ತೋರಿಸಿದ್ದಕ್ಕೆ ಬೆಳೀತು ದುಶ್ಮನಿ.. ಸಕ್ಕರೆ ನಾಡಲ್ಲಿ ಬಿತ್ತು ಯುವಕನ ಹೆಣ!
ಶರತ್
Follow us
KUSHAL V
|

Updated on: Jan 25, 2021 | 5:24 PM

ಮಂಡ್ಯ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಅಪಹರಿಸಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ MES ಬಡಾವಣೆಯಲ್ಲಿ ನಡೆದಿದೆ. 23 ವರ್ಷದ ಶರತ್ ಎಂಬ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಶರತ್‌ನನ್ನು ಆಟೋದಲ್ಲಿ ಅಪಹರಿಸಿದ ನಾಲ್ವರು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.

ಶರತ್​ ಮೇಲೆ ಅಷ್ಟೊಂದು ಹಗೆ ಯಾಕೆ? ಅಂದ ಹಾಗೆ, ಯಾವುದೋ ಲವ್ ಧೋಖಾ ವಿಚಾರವಾಗಿ ಮೋಸ ಹೋಗಿದ್ದ ಹುಡುಗಿಯೊಬ್ಬಳು ಒಂದು ವಾರದ ಹಿಂದೆ ತನಗೆ ಕೈಕೊಟ್ಟ ಹುಡುಗನ ಫೋಟೋ ಹಿಡಿದು ಬಡಾವಣೆಗೆ ಬಂದಿದ್ದಳಂತೆ. ಕಾಣೆಯಾಗಿರುವ ಹುಡುಗನ ಮನೆ ತೋರಿಸಿ ಎಂದು ಕೇಳಿಕೊಂಡಿದ್ದಳಂತೆ.

ಈ ವೇಳೆ, ಶರತ್ ಕೈಕೊಟ್ಟಿದ್ದ ಹುಡುಗನ ಮನೆ ವಿಳಾಸ ತೋರಿಸಿದ್ದನಂತೆ. ಇದರಿಂದ ಸಿಟ್ಟಿಗೆದ್ದ ಲವರ್​ ಬಾಯ್​, ಶರತ್​ ಮೇಲೆ ದ್ವೇಷ ಬೆಳೆಸಿಕೊಂಡಿದ್ದನಂತೆ. ಹಾಗಾಗಿ, ಇಂದು ಆತ 4ಜನರೊಂದಿಗೆ ಸೇರಿ ಶರತ್ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಹುಣಸೋಡು ಸ್ಪೋಟ ಪ್ರಕರಣ; ವಾಹನಗಳ ದೃಶ್ಯ ಸೆರೆ