ಕೇಂದ್ರ ಸರ್ಕಾರವನ್ನು.. ಮೋದಿ ಸರ್ಕಾರ ಎಂದು ಸಂಬೋಧಿಸದಂತೆ ಹೈಕೋರ್ಟ್ಗೆ PIL ಸಲ್ಲಿಕೆ
ಕೇಂದ್ರ ಸರ್ಕಾರವನ್ನು ಮೋದಿ ಸರ್ಕಾರ ಎಂದು ಸಂಬೋಧಿಸದಂತೆ ಕೋರಿ ಹೈಕೋರ್ಟ್ಗೆ PIL ಸಲ್ಲಿಕೆಯಾಗಿತ್ತು. ಮಲ್ಲಿಕಾರ್ಜುನ ಎಂಬುವವರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಬೆಂಗಳೂರು: ಕೇಂದ್ರ ಸರ್ಕಾರವನ್ನು ಮೋದಿ ಸರ್ಕಾರ ಎಂದು ಸಂಬೋಧಿಸದಂತೆ ಕೋರಿ ಹೈಕೋರ್ಟ್ಗೆ PIL ಸಲ್ಲಿಕೆಯಾಗಿತ್ತು. ಮಲ್ಲಿಕಾರ್ಜುನ ಎಂಬುವವರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಜೊತೆಗೆ, ಅರ್ಜಿಯಲ್ಲಿ ರಾಜ್ಯ ಸರ್ಕಾರವನ್ನು BSYಸರ್ಕಾರ ಎಂಬ ಸಂಬೋಧನೆಗೂ ನಿರ್ಬಂಧ ಕೋರಲಾಗಿತ್ತು. ಆದರೆ, ಇದೀಗ, ಕೇಂದ್ರ ಸರ್ಕಾರವನ್ನು ಮೋದಿ ಸರ್ಕಾರ ಎಂದು ಸಂಬೋಧಿಸದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಜೊತೆಗೆ, ಈ ಕುರಿತು PIBಗೆ ಮನವಿ ನೀಡಲು ಅರ್ಜಿದಾರರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಈ ಮೂಲಕ, ಹೈಕೋರ್ಟ್ ಮಲ್ಲಿಕಾರ್ಜುನ ಎಂಬುವವರ PILನ ಇತ್ಯರ್ಥಗೊಳಿಸಿದೆ.
32 ಮಕ್ಕಳಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ: ಕರ್ನಾಟಕದ ಇಬ್ಬರಿಗೆ ಗೌರವ