32 ಮಕ್ಕಳಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ: ಕರ್ನಾಟಕದ ಇಬ್ಬರಿಗೆ ಗೌರವ
ಕರ್ನಾಟಕದ ಇಬ್ಬರು ಮಕ್ಕಳಿಗೆ ಪ್ರಶಸ್ತಿ ಸಿಕ್ಕಿದೆ. ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ರಾಕೇಶ್ ಕೃಷ್ಣ ಹಾಗೂ ಬೆಂಗಳೂರಿನ ವೀರ್ ಕಶ್ಯಪ್ಗೆ ಪ್ರಶಸ್ತಿ ದೊರೆತಿದೆ.
ಬೆಂಗಳೂರು: ಗಣರಾಜ್ಯೋತ್ಸವ ಸಮಯದಲ್ಲಿ ನೀಡುವ ಪ್ರಧಾನ ಮಂತ್ರಿ ಬಾಲ ಪುರಸ್ಕಾರ 2021 ಘೋಷಣೆ ಆಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 32 ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗಿದೆ. ಕೊರೊನಾ ಸಮಯದಲ್ಲೂ ಅನೇಕ ಮಕ್ಕಳು ತಮ್ಮ ಕಲೆಯನ್ನು ಅಭಿವ್ಯಕ್ತಪಡಿಸಿದ್ದಾರೆ. ಇಂಥವರನ್ನು ಗುರುತಿಸಿ ನಾವು ಪ್ರಶಸ್ತಿ ನೀಡಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕರ್ನಾಟಕದ ಇಬ್ಬರು ಮಕ್ಕಳಿಗೆ ಪ್ರಶಸ್ತಿ ಸಿಕ್ಕಿದೆ. ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ರಾಕೇಶ್ ಕೃಷ್ಣ ಹಾಗೂ ಬೆಂಗಳೂರಿನ ವೀರ್ ಕಶ್ಯಪ್ಗೆ ಈ ಗೌರವ ಸಿಕ್ಕಿದೆ. ಆವಿಷ್ಕಾರ ವಿಭಾಗದಲ್ಲಿ ಇವರಿಗೆ ಬಾಲ ಪುರಸ್ಕಾರ ಸಿಕ್ಕಿದೆ. ಒಂದು ಲಕ್ಷ ರೂಪಾಯಿ ನಗದು ಹಾಗೂ ಪದಕ ಇವರಿಗೆ ಸಿಗಲಿದೆ.
ಕೃಷಿ ಕ್ಷೇತ್ರದಲ್ಲಿ ಹೊಸ ಅನ್ವೇಷಣೆಗಾಗಿ ಕರ್ನಾಟಕದ ರಾಕೇಶ್ ಕೃಷ್ಣಗೆ ಈ ಗೌರವ ಸಂದಿದೆ. ಇವರು ಸೀಡೋಗ್ರಾಫರ್ ಎಂಬ ಬಹುಪಯೋಗಿ ಬೀಜ ಬಿತ್ತನೆ ಯಂತ್ರವನ್ನು ಕಂಡುಹಿಡಿದಿದ್ದಾರೆ. ವೀರ್ ಕಶ್ಯಪ್ ಕೊರೊನಾ ಸಂದರ್ಭದಲ್ಲಿ ಹೊಸ ಗೇಮ್ ಒಂದನ್ನು ಆವಿಷ್ಕರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Rakesh Krishna K from Karnataka has invented a novel multi-purpose seed-sowing machine called “SEEDOGRAPHER” for systematic cultivation. He is inspired by his father and aspires to become an inventor in the field of Quantum and Molecular Physics.#BalSamvadWithPM @MinistryWCD pic.twitter.com/SRM19BzPZg
— Mann Ki Baat Updates मन की बात अपडेट्स (@mannkibaat) January 25, 2021
Veer Kashyap, one of the winners of Pradhan Mantri Rashtriya Bal Puraskar 2021, aspires to start a board game company to design and publish his games and encourage children to share their ideas. #BalSamvadWithPM @MinistryWCD pic.twitter.com/VWiT86bNYv
— MyGovIndia (@mygovindia) January 25, 2021
ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪಡೆದ ರಾಕೇಶ್ ಕೃಷ್ಣ ಮತ್ತು ವೀರ್ ಕಶ್ಯಪ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಪ್ರಶಸ್ತಿ ಪಡೆದ ಇತರರ ಮಾಹಿತಿ ಇಲ್ಲಿದೆ.
- ಅಮೆಯಾ: ಡಾನ್ಸರ್, ಈ ವರೆಗೆ ನೂರಕ್ಕೂ ಹೆಚ್ಚು ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ
- ಆನಂದ್ ಕುಮಾರ್: ಗಣಿತದಲ್ಲಿ ಸಾಕಷ್ಟು ಥಿಯರಿಗಳನ್ನು ಕಂಡು ಹಿಡಿದಿದ್ದಾರೆ.
- ಅನುಜ್ ಜೈನ್: ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
- ಅನುರಾಗ್ ರಾಮೋಲಾ: ಇವರು ಆರ್ಟಿಸ್ಟ್. ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಆಲೋಚನೆಗಳನ್ನು ವಿವರಿಸಿ ಭೇಷ್ ಎನಿಸಿಕೊಂಡಿದ್ದರು.
- ಅನ್ವೇಷ್ ಶುಭಮ್ ಪ್ರಧಾನ್: ಓದಿನಲ್ಲಿ ಮುಂದಿರುವ ಇವರು 400ಕ್ಕೂ ಹೆಚ್ಚು ಪ್ರಮಾಣ ಪತ್ರ ಹಾಗೂ ಸ್ಕಾಲರ್ಶಿಪ್ ಪಡೆದಿದ್ದಾರೆ.
- ಅರ್ಚಿತ್ ರಾಹುಲ್: ‘ಪ್ರಸವಾನಂತರದ ರಕ್ತಸ್ರಾವ ಕಪ್’ ಅನ್ನು ರೂಪಿಸುವ ಮೂಲಕ ಇವರು ತಾಯಿಮರಣ ಪ್ರಮಾಣವನ್ನು ಜಾಗತಿಕವಾಗಿ ಕಡಿಮೆ ಮಾಡಲು ಸಹಾಯ ಮಾಡಿದ್ದಾರೆ.
- ಕಾಮ್ಯಾ ಕಾರ್ತಿಕೇಯನ್: ಸಾಕಷ್ಟು ಪರ್ವತಗಳನ್ನು ಏರಿದ ಖ್ಯಾತಿ ಇವರಿಗಿದೆ.
- ಸವಿತಾ ಕುಮಾರಿ: ಬಿಲ್ಲುಗಾರಿಕೆ ಅಭ್ಯಾಸ ಮಾಡುತ್ತಿರುವ ಇವರು ಸಾಕಷ್ಟು ಪ್ರಶಸ್ತಿ ಗೆದ್ದಿದ್ದಾರೆ.
- ಖುಷಿ ಚಿರಾಗ್: ಸ್ಕೇಟಿಂಗ್ನಲ್ಲಿ ಸಾಕಷ್ಟು ಪ್ರಶಸ್ತಿ ಗೆದ್ದಿದ್ದಾರೆ.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ; ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರಿಂದ ಶುಭಾಶಯ