ಬಣ್ಣದ ಲೋಕದ ಕನಸು ಕಂಡಿದ್ದ ಜಯಶ್ರೀಗೆ ಮನಸಿನ ಬಣ್ಣವೇ ಮಾಸಿಹೋಗಿತ್ತು; ಜೀವವನ್ನೇ ಕಸಿಯಿತು ಖಿನ್ನತೆಯೆಂಬ ಕೂಪ

ಚಿಕ್ಕವಯಸ್ಸಿನಂದಲೂ ನನಗೆ ಆಗಬಾರದ್ದೆಲ್ಲ ಆಗಿದೆ.. ತುಂಬ ಕಷ್ಟಪಟ್ಟಿದ್ದೇನೆ. ನನ್ನ ಸೋದರಮಾವ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದೂ ಜಯಶ್ರೀ ಆರೋಪಿಸಿದ್ದರು. ಆಸ್ತಿ ವಿಚಾರಕ್ಕೆ ನನಗೆ ತೀವ್ರ ಹಿಂಸೆ ನೀಡಲಾಗಿದೆ ಎಂದಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು.

ಬಣ್ಣದ ಲೋಕದ ಕನಸು ಕಂಡಿದ್ದ ಜಯಶ್ರೀಗೆ ಮನಸಿನ ಬಣ್ಣವೇ ಮಾಸಿಹೋಗಿತ್ತು; ಜೀವವನ್ನೇ ಕಸಿಯಿತು ಖಿನ್ನತೆಯೆಂಬ ಕೂಪ
ಜಯಶ್ರೀ ರಾಮಯ್ಯ
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 25, 2021 | 6:14 PM

ರೂಪದರ್ಶಿಯಾಗಿದ್ದ ಜಯಶ್ರೀ ರಾಮಯ್ಯ ಬಿಗ್​ಬಾಸ್​ ಸೀಸನ್​ 3ಯಲ್ಲಿ ಭಾಗವಹಿಸಿ ಮನೆಮಾತಾದವರು. ಅದಾದ ಬಳಿಕ ಉಪ್ಪು ಹುಳಿ ಖಾರ ಎಂಬ ಕಾಮಿಡಿ ಸಿನಿಮಾದಲ್ಲಿ ನಟಿಸಿ ಪ್ರಸಿದ್ಧಿ ಪಡೆದರು. ಕನ್ನಡ್​ ಗೊತ್ತಿಲ್ಲ.. ಸಿನಿಮಾದಲ್ಲೂ ಪಾತ್ರ ನಿರ್ವಹಿಸಿದ್ದರು. ಮೂಲತಃ ಕೇರಳದವರು ಎನ್ನಲಾದ ಜಯಶ್ರೀ, ಬಣ್ಣದ ರಂಗಕ್ಕೆ ಮನಸೋತು ಬಂದವರು. ಬಿಗ್​ಬಾಸ್​ ಬಳಿಕ ಅದೂ ಇದೂ ವಿಡಿಯೋ ಮಾಡಿ, ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಿದ್ದ ಜಯಶ್ರಿ ತಮ್ಮದೇ ಆದ ಒಂದಷ್ಟು ಅಭಿಮಾನಿ ಬಳಗವನ್ನೂ ಸೃಷ್ಟಿಸಿಕೊಂಡಿದ್ದರು.

2020 ಜುಲೈನಲ್ಲಿ ಅವರೊಂದು ಫೇಸ್​ಬುಕ್​ ಪೋಸ್ಟ್ ಹಾಕುವವರೆಗೂ ಅವರಿಗೆ ಖಿನ್ನತೆ ಇದೆ ಎಂಬುದು ಅವರ ಆಪ್ತರಿಗೆ ಬಿಟ್ಟರೆ ಇನ್ಯಾರಿಗೂ ಗೊತ್ತಿರಲಿಲ್ಲ. ‘I quit.. ಈ ಕೆಟ್ಟದಾದ ಜಗತ್ತು ಮತ್ತು ಖಿನ್ನತೆಗೆ ಗುಡ್​ ಬೈ’ ಎಂದು ಅಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಅದಾದ ಬಳಿಕ ವಿಷ ಸೇವಿಸಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೋಸ್ಟ್​ ನೋಡಿದ ಹಲವರು ಕರೆ ಮಾಡಿದ್ದರೂ ಅಂದು ಜಯಶ್ರೀ ಸ್ವೀಕರಿಸಿರಲಿಲ್ಲ. ಅದೆಲ್ಲ ಮುಗಿದ ಮೇಲೆ ಕೆಲ ಹೊತ್ತಿನ ಬಳಿಕ ಮತ್ತೊಂದು ಪೋಸ್ಟ್ ಮಾಡಿದ್ದ ಜಯಶ್ರೀ, ‘ನನಗೇನೂ ಆಗಿಲ್ಲ.. ಆರಾಮಾಗಿ, ಸುರಕ್ಷಿತವಾಗಿದ್ದೇನೆ’ ಎಂದೂ ಹೇಳಿಕೊಂಡಿದ್ದರು.

ಇದು ಇಷ್ಟಕ್ಕೇ ನಿಲ್ಲದೆ, ಮತ್ತೆ ಕೆಲವೇ ದಿನದಲ್ಲಿ ತಮ್ಮ ತಲೆಯನ್ನು ಸಂಪೂರ್ಣವಾಗಿ ಬೋಳಿಸಿಕೊಂಡ ಫೋಟೋ ಅಪ್ಲೋಡ್ ಮಾಡಿ, ನನ್ನ ಕೂದಲನ್ನೆಲ್ಲ ಕ್ಯಾನ್ಸರ್ ರೋಗಿಗಳಿಗೆ ಕೊಟ್ಟಿದ್ದೇನೆ, ಹೊಸ ಜೀವನ ಪ್ರಾರಂಭ ಮಾಡುತ್ತಿದ್ದೇನೆ ಎಂದೂ ಹೇಳಿಕೊಂಡಿದ್ದ ಜಯಶ್ರೀಗೆ ಸಾವಿನ ಪಾಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

2016ರ ಬಿಗ್​ಬಾಸ್​​ನಲ್ಲಿ ಭಾಗಿ ಖಾಸಗಿ ಕಂಪನಿಯೊಂದರಲ್ಲಿ ಎಚ್​ಆರ್​ ಆಗಿ ಕೆಲಸ ಮಾಡುತ್ತಿದ್ದ ಜಯಶ್ರೀಗೆ ಮೊದಲಿನಿಂದಲೂ ಮಾಡೆಲಿಂಗ್​ ಕ್ಷೇತ್ರದಲ್ಲಿ ಆಸಕ್ತಿ ಇತ್ತು. ಡ್ಯಾನ್ಸ್​ ಎಂದರೆ ಹುಚ್ಚಿತ್ತು. ಅದರಂತೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಿಗ್​ಬಾಸ್​ ಸೀಸನ್ 3ಯಲ್ಲಿ ಅವಕಾಶವನ್ನೂ ಪಡೆದರೂ, ದೊಡ್ಡ ಮನೆಯಲ್ಲಿ ತುಂಬ ದಿನ ಇರಲು ಸಾಧ್ಯವಾಗಲಿಲ್ಲ. ಅಲ್ಲೂ ಅಂದುಕೊಂಡಷ್ಟೇನೂ ಯಶಸ್ಸು ಸಿಗಲಿಲ್ಲ. ಹಾಗೇ 2017ರಲ್ಲಿ ಇಮ್ರಾನ್​ ಸರ್ದಾರಿಯಾ ನಿರ್ದೇಶನದ ಉಪ್ಪು ಹುಳಿ ಖಾರ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರೂ ಮುಂದೆ ಸಿನಿಮಾ ಕ್ಷೇತ್ರದಲ್ಲೂ ಸಕ್ರಿಯರಾಗಲು ಅವರಿಗೆ ಸಾಧ್ಯವಾಗಲಿಲ್ಲ. ಕನ್ನಡ್​ ಗೊತ್ತಿಲ್ಲದಲ್ಲಿ ಅತಿಥಿ ಪಾತ್ರವೊಂದು ಸಿಕ್ಕಿತ್ತು.

ದಯಾಮರಣಕ್ಕೂ ಮನವಿ ಇನ್ನು ಚಿಕ್ಕವಯಸ್ಸಿನಂದಲೂ ನನಗೆ ಆಗಬಾರದ್ದೆಲ್ಲ ಆಗಿದೆ. ತುಂಬಾ ಕಷ್ಟಪಟ್ಟಿದ್ದೇನೆ. ನನ್ನ ಸೋದರಮಾವ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದೂ ಜಯಶ್ರೀ ಆರೋಪಿಸಿದ್ದರು. ಆಸ್ತಿ ವಿಚಾರಕ್ಕೆ ನನಗೆ ತೀವ್ರ ಹಿಂಸೆ ನೀಡಲಾಗಿದೆ ಎಂದಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ಸಲ್ಲಿಸಿದ್ದರು. ಕಳೆದ ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ನಟ ಕಿಚ್ಚ ಸುದೀಪ್​ ಕೂಡ ಕರೆ ಮಾಡಿ ಸಮಾಧಾನದ ಮಾತುಗಳನ್ನಾಡಿದ್ದರು. ಅದಾದ ಮೇಲೆ ಕೂಡ ಜಯಶ್ರೀ ಫೇಸ್​ಬುಕ್​ನಲ್ಲಿ ವಿಡಿಯೋ ಮಾಡಿ, ನನಗೆ ಯಾವುದೇ ಆರ್ಥಿಕ ಸಮಸ್ಯೆಯೂ ಇಲ್ಲ. ಸುದೀಪ್​ ಸರ್​ರಿಂದ ಒಂದು ರೂಪಾಯಿಯೂ ನಿರೀಕ್ಷೆ ಮಾಡುತ್ತಿಲ್ಲ. ಆದರೆ ಅತಿಯಾದ ಖಿನ್ನತೆಯಿಂದ ಬಳಲುತ್ತಿದ್ದೇನೆ. ನನಗೆ ದಯಾಮರಣ ಕರುಣಿಸಿ ಎಂದು ಮನವಿ ಮಾಡಿಕೊಂಡಿದ್ದರು.

ಸ್ನೇಹಿತರೇ ಎಲ್ಲ ಎನ್ನುತ್ತಿದ್ದರು ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದ ಜಯಶ್ರೀ, ನನಗೆ ಸ್ನೇಹಿತರೇ ಎಲ್ಲ ಎನ್ನುತ್ತಿದ್ದರು. ನಾನು ನನ್ನ ಅಚ್ಚುಮೆಚ್ಚಿನ ಸ್ನೇಹಿತರೊಂದಿಗೆ ಕಳೆದ ದಿನಗಳೇ ಸಿಹಿ ನೆನಪುಗಳು. ಫ್ರೆಂಡ್ಸ್ ಜತೆಗೆ ಇದ್ದರೆ ಲೈಫ್​ ಸಿಗುತ್ತದೆ ಎಂದು ಹೇಳುತ್ತಿದ್ದರು.

ರಾಜೇಶ್​ ನೆನಪಾಗುತ್ತಾರೆ.. ಕೆಲವು ವರ್ಷಗಳ ಹಿಂದೆ ಹಳ್ಳಿ ಹೈದ ಪ್ಯಾಟೀಗ್ ಬಂದ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿದ್ದ ರಾಜೇಶ್ ಕೂಡ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಶೋದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟಿದ್ದ ಅವರು, ನಂತರ ಇಲ್ಲಿ ಯಶಸ್ಸು ಕಾಣದೆ ಡಿಪ್ರೆಶನ್​ಗೆ ಜಾರಿದ್ದರು. ಪುನೀತ್​ ರಾಜ್​ಕುಮಾರ್​ರ ಅಪ್ಪಟ ಅಭಿಮಾನಿಯಾಗಿದ್ದ ರಾಜೇಶ್​ ಜಂಗಲ್​ ಜಾಕಿ ಎಂಬ ಸಿನಿಮಾವನ್ನು ಮಾಡಿದ್ದರು. ಆದರೆ ಪೂರ್ತಿಯಾಗಿ ನೆಲಕಚ್ಚಿತ್ತು. ರಿಯಾಲಿಟಿ ಶೋ ಮೂಲಕ ಸಿನಿ ಕ್ಷೇತ್ರಕ್ಕೆ ಕಾಲಿಟ್ಟು, ಅಲ್ಲಿಂದ ಜಗತ್ತನ್ನೇ ಬಿಟ್ಟು ಹೊರಟ ಈ ಜೀವ..ಇದೀಗ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡ ಹೊತ್ತಲ್ಲಿ ನೆನಪಾಗುತ್ತದೆ.

ಸಾವಿನ ಹಾದಿಯನ್ನೇ ತುಳಿದ ಬಿಗ್​ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ; ವೃದ್ಧಾಶ್ರಮದಲ್ಲಿ ಆತ್ಮಹತ್ಯೆ

ಕ್ಲಿನಿಕಲ್​ ಡಿಪ್ರೆಶನ್​ಗೆ ಒಳಗಾಗಿದ್ದ ಜಯಶ್ರೀ ಸಂಬಂಧಗಳ ಬಗ್ಗೆ ತುಂಬ ಭಯ ಬೆಳೆಸಿಕೊಂಡಿದ್ದರು: ಭಾವನಾ ಬೆಳಗೆರೆ

ನಿನ್ನೆ ರಾತ್ರಿ ಊಟ ಮಾಡಿ ರೂಂ ಸೇರಿದ್ದ ಜಯಶ್ರೀ ಹೊರಬರಲಿಲ್ಲ..

Published On - 6:12 pm, Mon, 25 January 21

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ