ಧಾರವಾಡ: ಜಿ.ಪಂ. ಸದಸ್ಯ ಯೋಗೀಶ್ ಗೌಡ ಹತ್ಯೆ ಕೇಸ್ಗೆ ಸಂಬಂಧಿಸಿ ಮತ್ತೊಂದು ಗಮನಾರ್ಹ ಬೆಳೆವಣಿಗೆ ನಡೆದಿದೆ. ಸಿಬಿಐ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು ತನಿಖೆಯ ವೇಳೆ ಹಿಂದಿನ ಪೊಲೀಸ್ ಅಧಿಕಾರಿ ಕಾಲಿಗೆ ಬಿದ್ದು ಕಣ್ಣೀರಿಟ್ಟ ಘಟನೆ ನಡೆದಿದೆ.
ಕೊಲೆ ಪ್ರಕರಣದ ಆರೋಪಿಗಳನ್ನು ಬದಲಿಸಿರುವ ಆರೋಪ ಸತ್ಯ ಸತ್ಯ ಸತ್ಯ..
ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಅಂದಿನ ತನಿಖಾಧಿಕಾರಿ ಇನ್ಸ್ಪೆಕ್ಟರ್ ಚೆನ್ನಕೇಶವ ಟಿಂಗರಿಕರ್, ಸಿಬಿಐ ತನಿಖೆ ವೇಳೆ ಆರೋಪಿ ಬಸವರಾಜ ಮುತ್ತಗಿ ಕಾಲಿಗೆ ಬಿದ್ದಿದ್ದು CBI ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಹಾಗೂ ತಾನು ಕೊಲೆ ಪ್ರಕರಣದ ಆರೋಪಿಗಳನ್ನು ಬದಲಿಸಿರುವ ಆರೋಪ ಸತ್ಯ. ಇದಕ್ಕಾಗಿ ಬಸವರಾಜ ಮುತ್ತಗಿ ಬಳಿ 16 ಲಕ್ಷ ರೂ. ಹಣ ಪಡೆದಿರುವುದಾಗಿಯೂ ಟಿಂಗರಿಕರ್ ಒಪ್ಪಿಕೊಂಡಿದ್ದಾರೆ.
ಆದರೆ ಬಸವರಾಜ ಮುತ್ತಗಿ ತಾನು ಟಿಂಗರಿಕರ್ಗೆ ಹಣ ನೀಡಿಲ್ಲವೆನ್ನುತ್ತಿದ್ದಾರೆ. ಈ ವೇಳೆ ಮುತ್ತಗಿ ಕಾಲಿಗೆ ಬಿದ್ದು ಹಣ ನೀಡಿದ್ದಾಗಿ ಒಪ್ಪಿಕೊಳ್ಳುವಂತೆ ಟಿಂಗರಿಕರ್ ಕಣ್ಣೀರಾಕಿ ಮನವಿ ಮಾಡಿಕೊಂಡಿದ್ದಾರೆ. ಬಳಿಕ ಕಣ್ಣೀರಾಕಿದ ಹಿನ್ನೆಲೆಯಲ್ಲಿ ಆಯ್ತು ಬಿಡಿ ಎಂದು ಮುತ್ತಗಿ ಹಣ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇಂತಹದೊಂದು ಘಟನೆ ವಿಚಾರಣೆ ವೇಳೆ ನಡೆದಿದೆ.
ಯೋಗೀಶ್ ಹತ್ಯೆ: ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಟಿಂಗರಿಕರ್ ಪಾತ್ರವೇನು? ರೋಚಕ ಕತೆ ಇಲ್ಲಿದೆ