ಶೃಂಗೇರಿ ಅಪ್ರಾಪ್ತೆ ಅತ್ಯಾಚಾರ ಪ್ರಕರಣ: ಅಂತಿಮ ಹಂತಕ್ಕೆ ಬಂದ ತನಿಖೆ

|

Updated on: Apr 14, 2021 | 2:15 PM

ಪ್ರಕರಣ ಬೆಳಕಿಗೆ ಬಂದ ಹಲವು ದಿನಗಳ ಕಾಲ 15 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಲು ಚಿಕ್ಕಮ್ಮ ಕುಮ್ಮಕ್ಕು ನೀಡುತ್ತಿದ್ದಳೆಂಬ ಮಾಹಿತಿ ತಿಳಿದುಬಂದಿತ್ತು. ಬಾಲಕಿ ಮೊದಲು ಚಿಕ್ಕಮ್ಮ ಅಂತಾ ಹೇಳಿಕೊಂಡಿದ್ದ ಮಹಿಳೆ ಈ ನೀಚಕೃತ್ಯದ ರೂವಾರಿ ಎನ್ನುವುದು ಗೊತ್ತಾಯಿತು.

ಶೃಂಗೇರಿ ಅಪ್ರಾಪ್ತೆ ಅತ್ಯಾಚಾರ ಪ್ರಕರಣ: ಅಂತಿಮ ಹಂತಕ್ಕೆ ಬಂದ ತನಿಖೆ
ಸಾಂದರ್ಭಿಕ ಚಿತ್ರ
Follow us on

ಚಿಕ್ಕಮಗಳೂರು: ಶೃಂಗೇರಿ ಗ್ರಾಮವೊಂದರಲ್ಲಿ ಅಪ್ರಾಪ್ತೆ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಚಿಕ್ಕಮಗಳೂರಿನ ವಿಶೇಷ ಪೋಕ್ಸೋ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಅಪ್ರಾಪ್ತ ಬಾಲಕಿಯ ಮೇಲೆ ಸತತ 5 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ನಡೆದಿತ್ತು. ಈ ಪ್ರಕರಣ ಜನವರಿ 30 ಬೆಳಕಿಗೆ ಬಂದಿತ್ತು. ಬೆಳಕಿಗೆ ಬಂದ ಬಳಿಕ ಸುಮಾರು 37 ಆರೋಪಿಗಳನ್ನು ಬಂಧಿಸಲಾಗಿತ್ತು.

ಪ್ರಕರಣ ಸಂಬಂಧ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸಿಪಿಐಯನ್ನು ಐಜಿಪಿ ಸಸ್ಪೆಂಡ್ ಮಾಡಿತ್ತು. ಆ ಬಳಿಕ ಎಎಸ್ಪಿ ಶ್ರುತಿ ನೇತೃತ್ವದಲ್ಲಿ  ತನಿಖೆ ನಡೆದಿತ್ತು. ನಡೆದ ತನಿಖೆ ಇದೀಗ ಅಂತಿಮ ಹಂತವನ್ನು ತಲುಪಿದೆ.

ಹೆತ್ತಮ್ಮನಿಂದಲೇ ಮಗಳ ಮೇಲಿನ ಅತ್ಯಾಚಾರಕ್ಕೆ ಕುಮ್ಮಕ್ಕು
ಪ್ರಕರಣ ಬೆಳಕಿಗೆ ಬಂದ ಹಲವು ದಿನಗಳ ಕಾಲ 15 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಲು ಚಿಕ್ಕಮ್ಮ ಕುಮ್ಮಕ್ಕು ನೀಡುತ್ತಿದ್ದಳೆಂಬ ಮಾಹಿತಿ ತಿಳಿದುಬಂದಿತ್ತು. ಬಾಲಕಿ ಮೊದಲು ಚಿಕ್ಕಮ್ಮ ಅಂತಾ ಹೇಳಿಕೊಂಡಿದ್ದ ಮಹಿಳೆ ಈ ನೀಚಕೃತ್ಯದ ರೂವಾರಿ ಎನ್ನುವುದು ಗೊತ್ತಾಯಿತು. ಹಣದಾಸೆಗೆ ಬಾಲಕಿಯನ್ನ ಹೆದರಿಸಿ, ಕಾಮ ಕ್ರೌಯಕ್ಕೆ ದೂಡಿ, ಲಕ್ಷಗಟ್ಟಲೇ ಹಣ ಪಡೆದಿರುವುದು ತನಿಖೆಯಿಂದ ಗೊತ್ತಾಯಿತು. ಆದರೆ ಚಿಕ್ಕಮ್ಮ ಅಂತಾ ಹೇಳಿಕೊಂಡಿದ್ದ ಮಹಿಳೆ ನಿಜಕ್ಕೂ ಬಾಲಕಿಯ ಚಿಕ್ಕಮ್ಮ ಅಲ್ಲ ಅವಳು ಸಂತ್ರಸ್ತೆಯ ಹೆತ್ತಮ್ಮ ಎನ್ನುವ ಸತ್ಯ ಪೊಲೀಸ್ ತನಿಖೆಯಿಂದ ಹೊರಬಿದ್ದಿತ್ತು.

ಇದನ್ನೂ ಓದಿ

ಶೃಂಗೇರಿ ಅಪ್ರಾಪ್ತೆ ಅತ್ಯಾಚಾರ ಪ್ರಕರಣ; ಹಣಕ್ಕಾಗಿ ಮಗಳ ಮಾನವನ್ನೇ ಕಾಮುಕರಿಗೆ ಬಲಿ ಕೊಟ್ಟದ್ದು ಚಿಕ್ಕಮ್ಮ ಅಲ್ಲ ಹೆತ್ತ ತಾಯಿ

ಮಾಡೆಲ್ ಮೇಲೆ ಪ್ರಿಯತಮನಿಂದಲೇ ನಿರಂತರ ಅತ್ಯಾಚಾರ, ಬ್ಲ್ಯಾಕ್​ಮೇಲ್: ನೊಂದ ಯುವತಿಯಿಂದ ಯಶವಂತಪುರ ಠಾಣೆಗೆ ದೂರು

(investigation into the Sringeri rape case has come to final stage)