ತಮ್ಮನನ್ನು ಮದುವೆಯಾಗಲು ಒಪ್ಪದ ಪದವೀಧರ ಯುವತಿಯರು; ಇಬ್ಬರ ಮೇಲೂ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ
ತಮ್ಮನನ್ನ ಮದುವೆಯಾಗಲು ನಿರಾಕರಿಸಿದಕ್ಕೆ ಯುವತಿಯರ ಮೇಲೆ ಸಂಬಂಧಿಕರೇ ಹಲ್ಲೆ ನಡೆಸಿದ್ದಾರೆ. ಸದ್ಯ ಇಬ್ಬರು ಯುವತಿಗಳ ಮೇಲೆ ಹಲ್ಲೆ ಮಾಡಿದ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಹಾಸನ: ತನ್ನ ತಮ್ಮನನ್ನು ಮದುವೆಯಾಗಲು ಒಪ್ಪದಿದ್ದಕ್ಕೆ ಇಬ್ಬರು ಯುವತಿಯರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚಾವು ಗ್ರಾಮದಲ್ಲಿ ನಡೆದಿದೆ. ತಮ್ಮನನ್ನ ಮದುವೆಯಾಗಲು ನಿರಾಕರಿಸಿದಕ್ಕೆ ಯುವತಿಯರ ಮೇಲೆ ಸಂಬಂಧಿಕರೇ ಹಲ್ಲೆ ನಡೆಸಿದ್ದಾರೆ. ಸದ್ಯ ಇಬ್ಬರು ಯುವತಿಯರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಏಪ್ರಿಲ್ 12ರಂದು ದೊಡ್ಡಕುಂಚಾವು ಗ್ರಾಮದಲ್ಲಿ ಯೋಗಿತಾ ಹಾಗೂ ಪುಷ್ಪಿತಾ ಎಂಬ ಇಬ್ಬರು ಸಹೋದರಿಯರ ಮೇಲೆ ನಾಗರಾಜ್ ಹಲ್ಲೆ ನಡೆಸಿದ್ದಾನೆ. ಮದುವೆ ಮಾತುಕತೆಗೆಂದು ತಾಯಿ ಹಾಗೂ ಅಜ್ಜಿ ಜೊತೆ ಸೋದರ ಮಾವನ ಮನೆಗೆ ಬಂದಿದ್ದ ನಾಗರಾಜ್, ತನ್ನ ಸಹೋದರನಿಗೆ ಯೋಗಿತಾಳನ್ನ ಮದುವೆ ಮಾಡಿಕೊಡಲು ಪ್ರಸ್ತಾಪ ಮಾಡಿದ್ದ. ಬಿಎಸ್ಸಿ ಓದಿಕೊಂಡಿರೋ ನಾನು ಹಾಗು ನನ್ನ ತಂಗಿ ಇಬ್ಬರ ಪೈಕಿ ಯಾರೂ ನಿನ್ನ ತಮ್ಮನ ಮದುವೆ ಆಗಲ್ಲ ಎಂದು ಇಬ್ಬರೂ ಸಹೋದರಿಯರು ನಾಗರಾಜ್ನ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಮದುವೆಯಾಗಲು ಒಪ್ಪದ ಕಾರಣ ತಾಯಿ ಹಾಗು ಅಜ್ಜಿ ಜೊತೆ ಸೇರಿ ಮಚ್ಚಿನಿಂದ ಕೊಚ್ಚಿ ಕೊಲೆ ಯತ್ನಕ್ಕೆ ನಾಗರಾಜ್ ಮುಂದಾಗಿದ್ದಾನೆ.
ಸದ್ಯ ಘಟನೆ ಬಳಿಕ ಗಾಯಾಳುಗಳಾದ ಯೋಗಿತಾ ಹಾಗೂ ಪುಷ್ಪಿತಾಳಿಗೆ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆ ಆರೋಪಿ ನಾಗರಾಜ್, ಹಲ್ಲೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಅಜ್ಜಿ ಪುಟ್ಟಮ್ಮ, ಸೋದರತ್ತೆ ಅಕ್ಕಮ್ಮ ಸೇರಿ ಘಟನೆ ಸಂಬಂಧ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
(Family Attack on Two Girls For Reject To Marriage Brother in Hassan)
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಲಾಪರಾಧಿಯಿಂದ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ