ಸಿಂಧೂರಿ ಅವರೇ ನಿಮ್ಮ ಚಾಟ್, ಪಿಕ್ಸ್ ನೋಡಿ ವಿಧಾನಸೌಧದಲ್ಲಿ ಕಾನೂನು ಮಂತ್ರಿ ಏನು ಕ್ಲಾಸ್ ತಗೊಂಡ್ರು ಜನತೆಗೆ ತಿಳಿಸಿ: ರೂಪಾ ಮತ್ತೊಂದು ಬಾಂಬ್

|

Updated on: Feb 19, 2023 | 10:17 PM

ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಫೇಸ್​ಬುಕ್​ ಪೋಸ್ಟ್ ಮಾಡಿದ್ದು, ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.

ಸಿಂಧೂರಿ ಅವರೇ ನಿಮ್ಮ ಚಾಟ್, ಪಿಕ್ಸ್ ನೋಡಿ ವಿಧಾನಸೌಧದಲ್ಲಿ ಕಾನೂನು ಮಂತ್ರಿ ಏನು ಕ್ಲಾಸ್ ತಗೊಂಡ್ರು ಜನತೆಗೆ ತಿಳಿಸಿ: ರೂಪಾ ಮತ್ತೊಂದು ಬಾಂಬ್
ರೋಹಿಣಿ ಸಿಂಧೂರಿ, D.ರೂಪಾ
Follow us on

ಬೆಂಗಳೂರು: ಇಷ್ಟು ದಿನ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರ ಮಧ್ಯೆ ವಾಕ್ಸಮರ, ಆರೋಪ-ಪ್ರತ್ಯಾರೋಪಗಳು ನಡೆಯುತ್ತಿದ್ದವು. ಈಗ ಕರ್ನಾಟಕದಲ್ಲಿ ಉನ್ನತ ಹುದ್ದೆಯಲ್ಲಿರುವ ಮಹಿಳಾ ಅಧಿಕಾರಿಗಳ ಮಧ್ಯೆ ದೊಡ್ಡ ಯುದ್ಧವೇ ನಡೆದಿದೆ. ಹೌದು…ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್(D Roopa Moudgil) ನಡುವಿನ ಹಾದಿ ಬೀದಿ ಕಾಳಗ ಇಲ್ಲಿಗೆ ನಿಲ್ಲುವಂತೆ ಕಾಣಿಸುತ್ತಿಲ್ಲ. ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ(Social Media) ಪೋಸ್ಟ್‌ ಹಾಕಿದ್ದು, ಇದು ಮತ್ತೊಂದು ತಿರುವು ಪಡೆದುಕೊಂಡಿದೆ.

ಇದನ್ನೂ ಓದಿ: ತಮ್ಮ ಖಾಸಗಿ ಫೋಟೋಗಳಿಗೆ ಸ್ಪಷ್ಟನೆ ಕೊಟ್ಟ ರೋಹಿಣಿ ಸಿಂಧೂರಿ, IPS ರೂಪಾ ವಿರುದ್ಧ ಕಾನೂನು ಹೋರಾಟಕ್ಕೆ ತೀರ್ಮಾನ

ಸಿಂಧೂರಿ ಅವರೇ, ನಿಮ್ಮ ಈ ಚಾಟ್ಸ್, ಪಿಕ್ಸ್ ನೋಡಿ( ಅಂದರೆ ನಾನು ಈಗಾಗಲೇ ಇಲ್ಲಿ ಹಾಕಿದ ಪಿಕ್ಸ್) ನೋಡಿ ಈ ರಾಜ್ಯದ ಕಾನೂನು ಮಂತ್ರಿಯವರು ಶಕ್ತಿ ಸೌಧ, ವಿಧಾನ ಸೌಧದಲ್ಲಿ ನಿಮಗೆ ಏನು ಕ್ಲಾಸ್ ತಗೊಂಡು ಏನು ಬುದ್ಧಿವಾದ ಹೇಳಿದರು ಎನ್ನುವುದನ್ನು ಜನತೆಗೆ ತಿಳಿಸಿ ಎಂದು ರೂಪಾ ಅವರು ಫೇಸ್​ಬುಕ್​ನಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ.

ಸಿಂಧೂರಿ ಅವರೇ, ನಿಮ್ಮ ಈ ಚಾಟ್, ಪಿಕ್ಸ್ ನೋಡಿ ಈ ರಾಜ್ಯದ ಕಾನೂನು ಮಂತ್ರಿಯವರು ನಿಮಗೆ ಏನು class ತಗೊಂಡು ಏನು ಬುದ್ಧಿವಾದ ಹೇಳಿದರು ಶಕ್ತಿ ಸೌಧ ವಿಧಾನ ಸೌಧದಲ್ಲಿ ಅದನ್ನೂ ಜನತೆಗೆ ತಿಳಿಸಿ ಎಂದು ತಮ್ಮ ಫೇಸ್​ಬುಕ್ ಖಾತೆ ಮೂಲಕ ಪೋಸ್ಟ್ ಮಾಡಿದ್ದಾರೆ.

ಇನ್ನುಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದಿದ್ದಕ್ಕೆ ರೋಹಿಣಿ ವಿರುದ್ಧ ಮತ್ತೆ ಡಿ.ರೂಪಾ ಆಕ್ರೋಶಗೊಂಡಿದ್ದು, ನಿಮ್ಮ ಬಣ್ಣ ಈಗ ಬಯಲಾಗಿದ್ದಕ್ಕೆ ಇಂತಹ ಹತಾಶೆಯ ಮಾತೇ? ಒಂದು ಕಡೆ ಡಿ.ಕೆ.ರವಿ ಮಾನಸಿಕ ಅಸ್ವಸ್ಥತೆಯಿಂದ ಮೃತಪಟ್ಟಿದ್ದು ಅಂತ ಹೇಳ್ತೀರಿ. ನಿಮ್ಮನ್ನ ಎಕ್ಸ್​ಪೋಸ್​ ಮಾಡಿದ್ದಕ್ಕೆ ನನ್ನ ವಿರುದ್ಧ ಆರೋಪ ಮಾಡಿದ್ದೀರಿ.ನೀವು ಭ್ರಷ್ಟಾಚಾರ ಮಾಡಿದ ಚಾಟ್​ಗಳೂ ನನ್ನ ಬಳಿ ಇವೆ. ಬಹಿರಂಗವಾಗಿ ನೀವು ನನ್ನ ಕ್ಷಮೆಯಾಚಿಸಿ, ಇಲ್ಲದಿದ್ರೆ ಮಾನಹಾನಿ ಪ್ರಕರಣ ದಾಖಲಿಸುವುದಾಗಿ ರೋಹಿಣಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ? ರೋಹಿಣಿ ಸಿಂಧೂರಿ ಸ್ಪಷ್ಟೀಕರಣಕ್ಕೆ ಐಪಿಎಸ್ ಡಿ. ರೂಪಾ ಪ್ರಶ್ನೆ

ಸಾರ್ವಜನಿಕ ಹಣದಿಂದ ನಿಮ್ಮ ಮೋಜಿನ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿದ್ದೀರಿ. ಅದರಲ್ಲೂ ಕೋವಿಡ್​ ಸಮಯ ಹಾಗೂ ಪಾರಂಪರಿಕ ಕಟ್ಟಡದಲ್ಲಿ ನಿರ್ಮಾಣ ಮಾಡಿದ್ದೀರಿ. ಈ ಮೂಲಕ ನೀವು ಸೇವಾ ನಿಯಮ ಉಲ್ಲಂಘಿಸಿದ್ದೀರಿ. ಕಾನೂನು ಕ್ರಮಕ್ಕೆ ಗುರಿಯಾತ್ತೀರಿ. ಇದನ್ನು ನಾನು ಇಲ್ಲಿಗೆ ಬಿಡುವುದಿಲ್ಲ, ಫಾಲೋ ಅಪ್ ಮಾಡುತ್ತೇನೆ. ನೆನಪಿಡಿ ಎಂದು ಗುಡುಗಿದ್ದಾರೆ.

ಒಟ್ಟಿನಲ್ಲಿ ರಾಜ್ಯದ ಮಹಿಳಾ ಐಪಿಎಸ್, ಐಎಎಸ್ ನಡುವಿನ ಜಗಳ ಈಗ ಹಾದಿ ಬೀದಿಯಲ್ಲಿ ನಡೆಯೋ ಜಡೆ ಜಗಳವಾಗಿ ತಿರುಗಿದ್ದು, ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಎಂದು ಕಾದು ನೋಡಬೇಕಿದೆ.