ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ? ರೋಹಿಣಿ ಸಿಂಧೂರಿ ಸ್ಪಷ್ಟೀಕರಣಕ್ಕೆ ಐಪಿಎಸ್ ಡಿ. ರೂಪಾ ಪ್ರಶ್ನೆ
ತಮ್ಮ ಆರೋಪಗಳಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತ್ರಿಕಾ ಹೇಳಿಕೆ ಮೂಲಕ ಸವಾಲಿಗೆ ಐಪಿಎಸ್ ಡಿ ರೂಪ ಮತ್ತೆ ಗರಂ ಆಗಿದ್ದು, ಪದೇಪದೆ ನನ್ನನ್ನು ಕೆಣಕಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
![ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ? ರೋಹಿಣಿ ಸಿಂಧೂರಿ ಸ್ಪಷ್ಟೀಕರಣಕ್ಕೆ ಐಪಿಎಸ್ ಡಿ. ರೂಪಾ ಪ್ರಶ್ನೆ](https://images.tv9kannada.com/wp-content/uploads/2023/02/Roopa-And-Rohini.jpg?w=1280)
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ(Rohini Sindhuri) ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ (d roopa moudgil) ನಡುವಿನ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದೆ. ಡಿ. ರೂಪಾ ಮಾಡಿದ್ದ ಆರೋಪಗಳಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಕಾನೂನು ಮೊರೆ ಹೋಗುವುದಾಗಿ ಹೇಳಿದ್ದಾರೆ. ಅಲ್ಲದೇ ಆ ಫೋಟೋಗಳನ್ನು ಯಾರಿಗೆ ಕಳುಹಿಸಿದ್ದೆನೆಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಇದೀಗ ರೂಪಾ ಅವರು ಮತ್ತೆ ಸುದ್ದಿಗೋಷ್ಟಿ ನಡೆಸಿ, ಪದೇಪದೆ ನನ್ನನ್ನು ಕೆಣಕಬೇಡಿ ಎಂದು ರೋಹಿಣಿ ಸಿಂಧೂರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನನ್ನನ್ನು ಬೆದರಿಸುವ ರೀತಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದೀರಿ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಹಿರಂಗವಾಗಿ ಹೇಳುತ್ತೇನೆ. ಬೇರೆಯವರ ಬಾಯಿ ಮುಚ್ಚಿಸಿದ ರೀತಿ ನನ್ನ ಬಾಯಿ ಮುಚ್ಚಿಸಲಾಗಲ್ಲ. ಪ್ರಕರಣವನ್ನು ತಾರ್ಕಿಕ ಅಂತ್ಯ ಕಾಣಿಸುತ್ತೇನೆಂದು ಡಿ.ರೂಪಾ ಗುಡುಗಿದರು.
ಫೋಟೋಸ್ ಕಳಿಸಿ ಪ್ರಚೋದನೆ ಮಾಡುವ ಮೂಲಕ ರೋಹಿಣಿ ಸಿಂಧೂರಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಫೋಟೋಸ್ ಯಾರಿಗೆ ಕಳಿಸಿದ್ದೇನೆಂದು ಬಹಿರಂಗಪಡಿಸಲಿ ಎಂದು ಹೇಳಿದ್ದೀರಿ. ಆದ್ರೆ ಯಾರಿಗೆಲ್ಲಾ ಫೋಟೋಸ್ ಕಳಿಸಿದ್ದೀರಿ ಎಂದು ನೀವೇ ಬಹಿರಂಗಪಡಿಸಿ ಎಂದು ರೂಪಾ ಅವರು ರೋಹಿಣಿ ಸವಾಲಿಗೆ ಪ್ರತಿ ಸವಾಲು ಹಾಕಿದರು.
ಡಿಕೆ ರವಿ ಸತ್ತದ್ದು mental illness ಇಂದ ಅಂತ. ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಳಿಸಿದರೆ? ನನ್ನ ಪ್ರಶ್ನೆ ಇಷ್ಟೇ…ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೇ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ias ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ? ಈ ರೀತಿಯ ಚಿತ್ರಗಳನ್ನು ಯಾವ ಯಾವ ಅಧಿಕಾರಿಗೆ, ಯಾಕೆ ಕಳಿಸಿದರು, ಹಾಗೂ ಸೇವಾ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಸ್ಪಷ್ಟೀಕರಣ ನೀಡಲಿ. ಸಂಧಾನಕ್ಕೆ mla ಬಳಿ ಹೋದದ್ದು ಯಾಕೆ. ಯಾವ ಭ್ರಷ್ಟಾಚಾರ ಮುಚ್ಚಿ ಹಾಕಿಕೊಳ್ಳಲು ಅಥವಾ ಯಾವ ಅನೈತಿಕ ನಡತೆ ಮುಚ್ಚಲು? ಉತ್ತರಿಸಿ. ನನಗೆ ಬೇಡ, ಸರ್ಕಾರಕ್ಕೆ ಉತ್ತರಿಸಿ. ರೋಹಿಣಿ ಸಿಂಧೂರಿ ಯಾವ forum ಹೋದರೂ, ಸತ್ಯ ಸತ್ಯವೇ. ಸತ್ಯ ಮಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ನನ್ನ ಬಗ್ಗೆ ಥ್ರೆಟ್ ರೀತಿ ಬರೆಯುತ್ತಿದ್ದಾರೆ. ರವಿ ಸಾವಿನ ಮೆಂಟಲ್ ಇಲ್ನೆಸ್ ಇತ್ತು ಅಂತ ಹೇಳಿದ್ದಾರೆ ಅದರ ಬಗ್ಗೆ ನಾನು ಮಾತನಾಡಲ್ಲ. ರೋಹಿಣಿಯಿಂದಲೇ ಡಿ.ಕೆ.ರವಿ ಮೃತಪಟ್ಟಿದ್ದಾರೆಂದು ನಾನು ಹೇಳಿಲ್ಲ. ಫೋಟೋ ಕಳಿಸಿರೋ ವ್ಯಕ್ತಿಯೇ ಯಾರಿಗೆಲ್ಲಾ ಕಳಿಸಿದ್ದೇನೆ ಎಂದು ಹೇಳಲಿ . ಈ ಪ್ರಕರಣ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇನೆ. ಈ ಪ್ರಕರಣ ಅಂತ್ಯ ಕಾಣಿಸುತ್ತೇನೆ. ಐಎಎಸ್ ಅಧಿಕಾರಿ ರೋಹಿಣಿ ತನ್ನ ಪ್ರವೃತ್ತಿ ಮುಂದುವರಿಸಿದ್ದಾರೆಂದು ಎಂದು ತಿರುಗೇಟು ನೀಡಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:21 pm, Sun, 19 February 23