ರಾಜ್ಯ ಬಿಜೆಪಿಗೆ Surprise ನೀಡಿದ ಬಿಜೆಪಿ ಹೈಕಮಾಂಡ್, ಇಬ್ಬರ ಹೆಸರು ಘೋಷಣೆ

|

Updated on: Jun 08, 2020 | 2:43 PM

ಬೆಂಗಳೂರು: ರಾಜ್ಯಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಐದಾರು ಪ್ರಮುಖ ಹೆಸರುಗಳು ಬಿಜೆಪಿ ಅಂಗಳದಲ್ಲಿ ಸರಿದಾಗಿತ್ತು. ಕೊನೆಗೆ ರಾಜ್ಯ ನಾಯಕರು ಎರಡು ಸ್ಥಾನಕ್ಕೆ ಮೂವರ ಹೆಸರನ್ನು ಸೂಚಿಸಿ ಪಕ್ಷದ ಹೈಕಮಾಂಡ್​ಗೆ ಕಳುಹಿಸಿದ್ದರು. ಈ ಮೂವರಲ್ಲಿ ಇಬ್ಬರಂತೂ ಫೈನಲ್ ಆಗ್ತಾರೆ ಎಂದು ರಾಜ್ಯದ ಬಿಜೆಪಿ ನಾಯಕರು ಅಂದುಕೊಂಡಿದ್ದರು. ಆದರೆ ಬಿಜೆಪಿ ಹೈಕಮಾಂಡ್, ರಾಜ್ಯದ ನಾಯಕರನ್ನು ಬೆಚ್ಚಿ ಬೀಳಿಸುವಂತೆ ಮಾತಕತೆಯಲ್ಲಿ ಇಲ್ಲದ ಇಬ್ಬರು ನಾಯಕರನ್ನು ಘೋಷಿಸಿದೆ. ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದು, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕಕ್ಕೆ ಅವಕಾಶ […]

ರಾಜ್ಯ ಬಿಜೆಪಿಗೆ Surprise ನೀಡಿದ ಬಿಜೆಪಿ ಹೈಕಮಾಂಡ್, ಇಬ್ಬರ ಹೆಸರು ಘೋಷಣೆ
Follow us on

ಬೆಂಗಳೂರು: ರಾಜ್ಯಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಐದಾರು ಪ್ರಮುಖ ಹೆಸರುಗಳು ಬಿಜೆಪಿ ಅಂಗಳದಲ್ಲಿ ಸರಿದಾಗಿತ್ತು. ಕೊನೆಗೆ ರಾಜ್ಯ ನಾಯಕರು ಎರಡು ಸ್ಥಾನಕ್ಕೆ ಮೂವರ ಹೆಸರನ್ನು ಸೂಚಿಸಿ ಪಕ್ಷದ ಹೈಕಮಾಂಡ್​ಗೆ ಕಳುಹಿಸಿದ್ದರು. ಈ ಮೂವರಲ್ಲಿ ಇಬ್ಬರಂತೂ ಫೈನಲ್ ಆಗ್ತಾರೆ ಎಂದು ರಾಜ್ಯದ ಬಿಜೆಪಿ ನಾಯಕರು ಅಂದುಕೊಂಡಿದ್ದರು. ಆದರೆ ಬಿಜೆಪಿ ಹೈಕಮಾಂಡ್, ರಾಜ್ಯದ ನಾಯಕರನ್ನು ಬೆಚ್ಚಿ ಬೀಳಿಸುವಂತೆ ಮಾತಕತೆಯಲ್ಲಿ ಇಲ್ಲದ ಇಬ್ಬರು ನಾಯಕರನ್ನು ಘೋಷಿಸಿದೆ.

ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದು, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕಕ್ಕೆ ಅವಕಾಶ ಕೊಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ವಿಭಾಗೀಯ ಪ್ರಭಾರಿ ಈರಣ್ಣ ಕಡಾಡಿ ಮತ್ತು ರಾಯಚೂರಿನ ಕಲ್ಯಾಣ ಕರ್ನಾಟಕ ವಿಭಾಗೀಯ ಉಸ್ತುವಾರಿ ಅಶೋಕ್ ಗಸ್ತಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.

ಕೋರೆಗೆ ತಪ್ಪಿದ ಟಿಕೆಟ್​:
ಅಭ್ಯರ್ಥಿಗಳ ಆಯ್ಕೆಯಲ್ಲಿ ಮೆಗಾ ಟ್ವಿಸ್ಟ್ ಪಡೆದುಕೊಂಡಿದೆ. ಎರಡು ಸ್ಥಾನಗಳಿಗೆ ಅಚ್ಚರಿಯ ಹೆಸರುಗಳನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದೆ. ಈ ಮೂಲಕ ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ರಮೇಶ್ ಕತ್ತಿ ಹಾಗೂ ಪ್ರಕಾಶ್​ ಶೆಟ್ಟಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ.

ಕಾರಟಗಿಯಲ್ಲಿ ಗಸ್ತಿಗೆ ಅಭಿನಂದನೆ ಸಲ್ಲಿಸಿದ ಕಟೀಲ್:
ರಾಜ್ಯಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಅಶೋಕ್ ಗಸ್ತಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ನಳೀನ್ ಕುಮಾರ್ ಕಟೀಲ್ ಮತ್ತು ಅಶೋಕ್ ಗಸ್ತಿ ಕಾರಟಗಿಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Published On - 12:59 pm, Mon, 8 June 20