ಬೆಂಗಳೂರು: ರೈಲ್ವೆ ADGP ಆಗಿ IPS ಅಧಿಕಾರಿ ಭಾಸ್ಕರ್ ರಾವ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಭಾಸ್ಕರ್ ರಾವ್ ಈ ಹಿಂದೆ ಆಂತರಿಕ ಭದ್ರತಾ ವಿಭಾಗದ ADGPಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದೀಗ, ಭಾಸ್ಕರ್ ರಾವ್ ಸ್ಥಾನಕ್ಕೆ ಅರುಣ್ ಚಕ್ರವರ್ತಿ ಅವರನ್ನು ನೇಮಕ ಮಾಡಲಾಗಿದೆ. ರೈಲ್ವೆ ADGPಯಾಗಿದ್ದ ಅರುಣ್ ಚಕ್ರವರ್ತಿ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ಟ್ರಾನ್ಸ್ಫರ್ ಮಾಡಲಾಗಿದೆ.
ಇದಲ್ಲದೆ, ಐವರು ಹಿರಿಯ IPS ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳ ವರ್ಗಾವಣೆ ವಿವರ ಹೀಗಿದೆ.
ಭಾಸ್ಕರ್ ರಾವ್, ADGP, ರೈಲ್ವೆ
ಪ್ರಶಾಂತ್ ಕುಮಾರ್ ಠಾಕೂರ್, ADGP, ಲೋಕಾಯುಕ್ತ
ಡಾ.ಎಸ್.ಮೂರ್ತಿ, ADGP & MD, KSPHC (ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ)
ಡಾ.ಕೆ.ರಾಮಚಂದ್ರರಾವ್, ADGP, BMTF
ಅರುಣ್ ಚಕ್ರವರ್ತಿ, ADGP, ಆಂತರಿಕ ಭದ್ರತಾ ವಿಭಾಗ
ಇದನ್ನೂ ಓದಿ: JC Madhuswamy ‘ಸಿದ್ದರಾಮಯ್ಯನವ್ರು ಏನು ಬೇಕಾದ್ರೂ ತಿನ್ನಬಹುದು; ಈ ದೇಶದಲ್ಲಿ ಪೂಜೆ, ಊಟ ವೈಯಕ್ತಿಕ ಹಕ್ಕು’
Published On - 7:20 pm, Tue, 16 February 21