ಶಕ್ತಿ ಯೋಜನೆಯನ್ನ ಕಷ್ಟದಲ್ಲೇ ಒಪ್ಪಿಕೊಂಡಿದ್ದೇವೆ: ಡಿಸಿಎಂ ಡಿಕೆ ಶಿವಕುಮಾರ್
ಶಕ್ತಿ ಯೋಜನೆಯನ್ನ ಕಷ್ಡದಲ್ಲೇ ಒಪ್ಪಿಕೊಂಡಿದ್ದೇವೆ ಎಂದು ಹೇಳುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಕ್ಕೆ ನಾವು ಶಕ್ತಿ ಯೋಜನೆ ಮುಂದುವರೆಸೋ ಅನಿವಾರ್ಯ ಇದೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು, ಅ.7: ಶಕ್ತಿ ಯೋಜನೆಯನ್ನ (Shakti Scheme) ಕಷ್ಟದಲ್ಲೇ ಒಪ್ಪಿಕೊಂಡಿದ್ದೇವೆ ಎಂದು ಹೇಳುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಕ್ಕೆ ನಾವು ಶಕ್ತಿ ಯೋಜನೆ ಮುಂದುವರೆಸೋ ಅನಿವಾರ್ಯ ಇದೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ನಡೆದ 148 ಬಸ್ಗಳ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರಿಗೆ ನಿಗಮದಲ್ಲಿ ಕಳೆದ 6 ವರ್ಷದಿಂದ ವೇತನ ಪರಿಷ್ಕರಣೆ ಆಗಿಲ್ಲ. ಸದ್ಯ KSRTC ಯಲ್ಲಿ ಕರ್ತವ್ಯದಲ್ಲಿ ಮೃತ ನೌಕರರಿಗೆ 1 ಕೋಟಿ ವಿಮೆ ನೀಡಲಾಗುತ್ತಿದೆ. ಇದನ್ನ ಇತರ ನಿಗಮಗಳಿಗೂ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದರು.
ನಾನು ಪಲ್ಲಕ್ಕಿ ಬಸ್ನಲ್ಲಿ ಕುಳಿತು ನೋಡಿದೆ. ಹಾಗೆನೇ ಬಸ್ನ ಸೀಟ್ನಲ್ಲಿ ಮಲಗಿ ನೋಡಿದೆ. ಸರಿಯಾಗಿ ಬಸ್ ಸೀಟ್ 6 ಅಡಿ ಉದ್ದವಾಗಿದೆ. ನನ್ನ ಹೆಂಡತಿಗೂ ಪಲ್ಲಕ್ಕಿ ಬಸ್ನಲ್ಲಿ ಮೈಸೂರಿಗೆ ಹೋಗುವಂತೆ ತಿಳಿಸಿದ್ದೇನೆ ಎಂದರು.
ಇದನ್ನೂ ಓದಿ: ಪಲ್ಲಕ್ಕಿ ಬಸ್ಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ, ವಿಶೇಷತೆಗಳು ಹೀಗಿವೆ
ಇಡೀ ದೇಶದಲ್ಲೇ ನಮ್ಮ ರಾಜ್ಯದ ಸಾರಿಗೆ ಮಾದರಿಯಾಗಿದೆ. ಇಲ್ಲಿನ ಸೇವೆಯನ್ನ ಇತರ ರಾಜ್ಯಗಳ ಸಾರಿಗೆಗೂ ಅಳವಡಿಕೆ ಮಾಡುವ ಚಿಂತನೆ ಮಾಡುತ್ತಿದ್ದಾರೆ. ನೂತನ ಬಸ್ಗೆ ಪಲ್ಲಕ್ಕಿ ಹೆಸರು ಕೊಟ್ಟ ಸಚಿವರಿಗೆ ಪ್ರಶಸ್ತಿ ಕೊಡಬೇಕು. ಪಲ್ಲಕ್ಕಿ ಬಸ್ ಪ್ರತಿ ಮನೆಯರ ಮಹಾರಾಣಿಯನ್ನ ಕರೆದುಕೊಂಡು ಹೋಗಲಿದೆ ಎಂದರು.
ಒಂದು ವರ್ಷದಲ್ಲಿ ಸಾವಿರ ಬಸ್ಗಳ ಸೇರ್ಪಡೆ
ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇನ್ನೊಂದು ವರ್ಷದಲ್ಲಿ ಇಲಾಖೆಗೆ ಒಂದು ಸಾವಿರ ಬಸ್ಗಳನ್ನು ಸೇರ್ಪಡೆ ಮಾಡಲಾಗುವುದು ಎಂದರು. ನಾಲ್ಕೂ ನಿಗಮಗಳಲ್ಲಿ 24000 ಬಸ್ಗಳು ಸಂಚಾರ ಮಾಡುತ್ತಿವೆ. ಪ್ರತಿವರ್ಷ ಶೇಕಡಾ 10 ರಷ್ಟು ಬಸ್ಗಳು ಸ್ಕ್ರ್ಯಾಪ್ ಆಗುತ್ತಿವೆ. ಕಳೆದ 6 ವರ್ಷದಿಂದ ಹೊಸ ಬಸ್ ಖರೀದಿ ಮಾಡಿರಲಿಲ್ಲ. ಸದ್ಯ 148 ಬಸ್ಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಜನಸಂಖ್ಯೆಗೆ ಅನುಗುಣವಾಗಿ ಬಸ್ಗಳು ಇಲ್ಲ, ಕೊರತೆ ಇದೆ. ಜನಸಂಖ್ಯೆಗೆ ಅನುಗುಣವಾಗಿ 12000 ಬಸ್ಗಳ ಅಗತ್ಯವಿದೆ. ಬೆಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ 2 ಕೋಟಿ ಜನಸಂಖ್ಯೆ ಇದೆ ಎಂದರು.
ಪ್ರಸ್ತುತ ನಾನ್ ಎಸಿ ಬಸ್ಗಳಿಗೆ ಡಿಮ್ಯಾಂಡ್ ಇದೆ. ಹೀಗಾಗಿ ಇಂದು ವಿನೂತನ ಮಾದರಿಯ ನಾನ್ ಎಸಿ ಬಸ್ಗಳಿಗೆ ಚಾಲನೆ ನೀಡಲಾಗಿದೆ. ಒಟ್ಟು 100 ಹೊಸ ನಾನ್ ಎಸಿ ಬಸ್ಗಳನ್ನು ಕೆಎಸ್ಆರ್ಟಿಸಿಗೆ ಸೇರ್ಪಡೆಯಾಗಲಿದೆ ಎಂದರು. ನಾಲ್ಕೂ ನಿಗಮಗಳಲ್ಲಿ ನೇಮಕಾತಿ ಆಗಿಲ್ಲ. ಬಾಕಿ ಇರುವ ನೇಮಕಾತಿಯೂ ಆಗಲಿದೆ ಅಂತಾನೂ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ