‘ಇನ್ನೂ ಒಂದೂವರೆ ವರ್ಷ ಯಡಿಯೂರಪ್ಪನವರೇ ಆಡಳಿತ ನಡೆಸಲಿ ಎಂಬುದು ನಮ್ಮ ಆಸೆ..‘-ಜಿ.ಪರಮೇಶ್ವರ್​

| Updated By: Lakshmi Hegde

Updated on: Jul 20, 2021 | 12:38 PM

ಎಂ.ಬಿ.ಪಾಟೀಲ್​ ಮತ್ತು ಶಾಮನೂರು ಶಿವಶಂಕರಪ್ಪನವರು ಬೇರೆಬೇರೆ ಕಾರಣಗಳಿಗೆ ಯಡಿಯೂರಪ್ಪನವರಿಗೆ ಬೆಂಬಲಿಸಿರಬಹುದು ಎಂದು ಹೇಳಿದ ಜಿ.ಪರಮೇಶ್ವರ್​, ಕಾಂಗ್ರೆಸ್​ ಯಾವಾಗಲೂ ಚುನಾವಣೆಗೆ ಸಿದ್ಧವಾಗಿದೆ ಎಂದರು.

‘ಇನ್ನೂ ಒಂದೂವರೆ ವರ್ಷ ಯಡಿಯೂರಪ್ಪನವರೇ ಆಡಳಿತ ನಡೆಸಲಿ ಎಂಬುದು ನಮ್ಮ ಆಸೆ..‘-ಜಿ.ಪರಮೇಶ್ವರ್​
ಜಿ.ಪರಮೇಶ್ವರ್ ಮತ್ತು ಬಿ.ಎಸ್​.ಯಡಿಯೂರಪ್ಪ
Follow us on

ತುಮಕೂರು: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ (B.S.Yediyurappa)ನವರು ಕೆಳಗೆ ಇಳಿಯುವುದು ಬಹುತೇಕ ನಿಶ್ಚಿತ ಎಂಬ ವರದಿಗಳು ದಟ್ಟವಾಗುತ್ತಿದೆ. ಮೊನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​ ಅವರದ್ದು ಎನ್ನಲಾದ ಆಡಿಯೋವೊಂದು ಬಿಡುಗಡೆಯಾದ ಬೆನ್ನಲ್ಲೇ, ನಾಯಕತ್ವ ಬದಲಾವಣೆ ಗಾಳಿ ಇನ್ನೂ ರಭಸವಾಗಿ ರಾಜ್ಯದಲ್ಲಿ ಬೀಸುತ್ತಿದೆ. ಈ ಮಧ್ಯೆ ಯಡಿಯೂರಪ್ಪನವರು ಕೂಡ ಏನೂ ಮಾತನಾಡುತ್ತಿಲ್ಲ. ಆದರೆ ಈ ಬಗ್ಗೆ ಬಿಜೆಪಿ (BJP) ಯಷ್ಟೇ ಅಲ್ಲ, ಕಾಂಗ್ರೆಸ್ (Congress) ಪಾಳೆಯದಿಂದಲೂ ಪ್ರತಿಕ್ರಿಯೆಗಳು ಬರುತ್ತಿವೆ. ಹೀಗೆ ಸಿಎಂ ಬದಲಾವಣೆ ಬಗ್ಗೆ ಸಣ್ಣಮಟ್ಟದ ಬೇಸರ ಹೊರಹಾಕಿದವರಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್(G.Parameshwar)​ ಕೂಡ ಒಬ್ಬರು.

ತುಮಕೂರಿನಲ್ಲಿ ಮಾತನಾಡಿದ ಜಿ.ಪರಮೇಶ್ವರ್​, ಬಿ.ಎಸ್​. ಯಡಿಯೂರಪ್ಪನವರು ತುಂಬ ಕಷ್ಟಪಟ್ಟು ಸರ್ಕಾರವನ್ನು ರಚಿಸಿದ್ದಾರೆ. ಅವರು ಮುಖ್ಯಮಂತ್ರಿಯಾದ ಮೇಲೆ ತುಂಬ ಆಸೆ ಇಟ್ಟುಕೊಂಡು, ಸರ್ಕಾರವನ್ನು ಮುನ್ನಡೆಸಿದರು. ಆದರೆ ಬಿಜೆಪಿಯವರೇ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಮುಂದಾಗಿದ್ದು ನಿಜಕ್ಕೂ ದುರದೃಷ್ಟಕರ ಎಂದು ಹೇಳಿದ್ದಾರೆ.
ಸಂಪುಟದಲ್ಲಿ ಇದ್ದವರೇ ಮುಖ್ಯಮಂತ್ರಿಯನ್ನು ಬದಲಿಸಲು ಹೊರಟಿದ್ದಾರೆ. ಇವರ ಕಿತ್ತಾಟ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಜನರಿಗೆ ಸಂಕಷ್ಟ ಉಂಟಾಗುತ್ತಿದೆ. ಇದನ್ನೆಲ್ಲ ಸರಿಪಡಿಸಿಕೊಳ್ಳುವಂತೆ ನಾನು ಈ ಮೊದಲೇ ಬಿ.ಎಸ್​.ಯಡಿಯೂರಪ್ಪನವರಿಗೆ ಹೇಳಿದ್ದೆ. ಬಿಜೆಪಿಯವರ ತಪ್ಪುಗಳು ಅನೇಕ ಇವೆ. ಅವೆಲ್ಲವುಗಳಿಂದಲೂ ನಮಗೆ ಅನನುಕೂಲ ಆಗುತ್ತಿವೆ ಎಂದು ಹೇಳಿದರು.

ಇನ್ನೂ ಒಂದೂವರೆ ವರ್ಷ ಯಡಿಯೂರಪ್ಪನವರೇ ಅಧಿಕಾರ ನಡೆಸಲಿ ಎಂಬ ಆಸೆ ನಮಗಿದೆ. ಯಾಕೆಂದರೆ ಅವರು ತಪ್ಪು ಮಾಡಿದಷ್ಟೂ ನಮಗೆ ಅನುಕೂಲವೇ ಆಗಲಿದೆ. ಎಂ.ಬಿ.ಪಾಟೀಲ್​ ಮತ್ತು ಶಾಮನೂರು ಶಿವಶಂಕರಪ್ಪನವರು ಬೇರೆಬೇರೆ ಕಾರಣಗಳಿಗೆ ಯಡಿಯೂರಪ್ಪನವರಿಗೆ ಬೆಂಬಲಿಸಿರಬಹುದು ಎಂದು ಹೇಳಿದ ಜಿ.ಪರಮೇಶ್ವರ್​, ಕಾಂಗ್ರೆಸ್​ ಯಾವಾಗಲೂ ಚುನಾವಣೆಗೆ ಸಿದ್ಧವಾಗಿದೆ ಎಂದರು.

ಇದನ್ನೂ ಓದಿ: Sagarika Shona: ರಾಜ್ ಕುಂದ್ರಾ ನಗ್ನವಾಗಿ ಆಡಿಶನ್ ಕೊಡಲು ಹೇಳಿದ್ದರು: ನಟಿ ಸಾಗರಿಕಾ ಶೋನಾ ಗಂಭೀರ ಆರೋಪ 

It is unfortunate that the BJP came forward to Change Leadership In Karnataka Says Congress leader G.Parameshwar