ಕೋಲಾರ: ಜಿಲ್ಲೆಯ ಮಾಲೂರು ಮೂಲದ ಉದ್ಯಮಿ ಮನೆ ಮೇಲೆ IT ಇಲಾಖೆ ಅಧಿಕಾರಿಗಳ ದಾಳಿ ನಡೆದಿದೆ. ಉದ್ಯಮಿ ಹಯಾಜ್ ಎಂಬುವವರ ಮನೆ ಮೇಲೆ IT ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಯಾಜ್ ನೀಲಗಿರಿ ಮರಗಳನ್ನು ಖರೀದಿಸಿ ರಫ್ತು ಮಾಡುವ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಟ್ರಾನ್ಸಪೋರ್ಟ್ ಹಾಗೂ ಲ್ಯಾಂಡ್ ಡೆವಲಪ್ಮೆಂಟ್ನಲ್ಲೂ ಹಣ ತೊಡಗಿಸಿದ್ದರು ಎಂದು ಹೇಳಲಾಗಿದೆ. ಸದ್ಯ, ಉದ್ಯಮಿ 50 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಹಯಾಜ್ರ ಮಾಲೂರಿನ ಕಚೇರಿ ಹಾಗೂ ಯಾರ್ಡ್ ಮೇಲೆ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ.
ಮೊಬೈಲ್ ವಿಷಯಕ್ಕೆ ಪೋಷಕರೊಟ್ಟಿಗೆ ಜಗಳವಾಡಿದ ಸೋದರರು.. ಮನನೊಂದು ಆತ್ಮಹತ್ಯೆಗೆ ಶರಣು, ಎಲ್ಲಿ?