ಮುಳುಗುತ್ತಿದ್ದ ಮಕ್ಕಳನ್ನ ಬಾಹುಬಲಿ ಸಿನಿಮಾದ ಶಿವಗಾಮಿಯಂತೆ ರಕ್ಷಿಸಿ.. ಪ್ರಾಣ ಬಿಟ್ಟ ತಂದೆ..!
ನೀರಿನಲ್ಲಿ ಇಬ್ಬರು ಸಣ್ಣ ಮಕ್ಕಳನ್ನು ಜಯರಾಮಗೌಡ ತಮ್ಮ ಎರಡು ಕೈಗಳಿಂದ ನೀರಿನಿಂದ ಮೇಲೆತ್ತಿ ಹಿಡಿದಿದ್ದರು. ಹಲವು ನಿಮಿಷಗಳ ಕಾಲ ಹೀಗೆ ಮಕ್ಕಳನ್ನು ನೀರಿನಲ್ಲಿ ಹಿಡಿದಿಟ್ಟುಕೊಂಡಿದ್ರಿಂದ ಜಯರಾಮಗೌಡ ಮಕ್ಕಳನ್ನು ರಕ್ಷಿಸಿದ್ರು.

ದಕ್ಷಿಣ ಕನ್ನಡ: ಕರಾವಳಿಯಲ್ಲಿ ಈಗೊಂದು ವೀಡಿಯೋ ಸಖತ್ ವೈರಲ್ ಆಗ್ತಾಯಿದೆ. ಆ ವೀಡಿಯೋ ಸಮುದ್ರದಲ್ಲಿ ನಡೆಯೋ ಲೈವ್ ರೆಸ್ಕ್ಯೂ ಆಪರೇಷನ್ದ್ದು. ಅದು ಸಮುದ್ರಾನ ಅಥವಾ ನದಿನಾ. ಅಪಯಾಕ್ಕೆ ಸಿಲುಕಿದ್ದವರು ಯಾರು. ಅದರಲ್ಲಿ ಮೃತಪಟ್ಟವರು ಯಾರು. ಅಲ್ಲಿ ರಕ್ಷಣೆ ಮಾಡಿದವರು ಯಾರು. ಅದು ಯಾವಾಗ ನಡೆದಿದ್ದು ಎಲ್ಲಿ ನಡೆದಿದ್ದು ಅನ್ನೊದ್ರಾ ಕಂಪ್ಲೀಟ್ ಡೀಲೇಲ್ಸ್ ಇಲ್ಲಿದೆ.
ಸಮುದ್ರ ಸೇರೋ ನದಿಯಲ್ಲಿ ಮುಳುಗುತ್ತಿದ್ದವರ ಆಪರೇಷನ್..! ಮೂವರು ಮಕ್ಕಳು ಮತ್ತು ತಂದೆ, ತಾಯಿ ಇರುವ ಐದು ಜನರ ಒಂದು ಕುಟುಂಬ ನೀರಿನಲ್ಲಿ ಮುಳುಗುತ್ತಿತ್ತು. ಎಲ್ಲರ ಕುತ್ತಿಗೆ ಮಾತ್ರ ಕಾಣುತ್ತಿತ್ತು. ಇನ್ನೇನು ಎಲ್ಲಾ ಮುಳುಗಿ ಹೋದ್ರು ಅನ್ನೊದ್ರಲ್ಲಿ ಹೀರೋ ಹಾಗೆ ಒಬ್ಬ ಜಂಪ್ ಮಾಡ್ತಾನೆ. ಮತ್ತೊರ್ವ ಹಗ್ಗ ಎಸೆಯುತ್ತಾನೆ. ಚಿಕ್ಕ ಬಾಲಕಿಯನ್ನು ನಂತರ ಬಾಲಕನನ್ನು ಮತ್ತೊಂದು ಎತ್ತಿ ದೋಣಿಗೆ ಹಾಕ್ತಾನೆ.
ಬಳಿಕ ತಂದೆ, ತಾಯಿ ಮತ್ತು ಮೊತ್ತೋರ್ವ ಮಗನನ್ನು ದೋಣಿಯ ಬದಿಯಲ್ಲಿ ಹಿಡಿದುಕೊಂಡು ದಡದ ಬಳಿ ಮುಟ್ಟಿಸುತ್ತಾರೆ. ಇದು ನಡೆದಿದ್ದು ಇಯರ್ ಎಂಡ್ ದಿನ. ಹೌದು 2020 ರ ಡಿಸೆಂಬರ್ 31 ರಂದು ಸಂಜೆ ವೇಳೆಗೆ ಈ ಘಟನೆ ನಡೆದಿದೆ. ಇದು ಸಮುದ್ರ ಅಲ್ಲ. ನಂದಿನಿ ಮತ್ತು ಶಾಂಭವಿ ನದಿಗಳೆರಡು ಸಮುದ್ರ ಸೇರುವ ಜಾಗ. ಅಂದು ದಕ್ಷಿಣ ಕನ್ನಡ ಜಿಲ್ಲೆ ಕಡಬ ಮೂಲದ ಜಯರಾಮಗೌಡ ಎಂಬವರು ತಮ್ಮ ಫ್ಯಾಮಿಲಿ ಜೊತೆ ಇಯರ್ ಎಂಡ್ ಪಾರ್ಟಿ ಮಾಡಲು ಮಂಗಳೂರು ಹೊರವಲಯದ ಸಸಿಹಿತ್ಲು ಬಳಿ ಇರುವ ಕೆರಿಬಿಯನ್ ಸೀ ಹೋಮ್ ರೆಸಾರ್ಟ್ ಗೆ ಬಂದಿದ್ದಾರೆ.
ಅಲ್ಲಿ ನದಿಗಳು ಸಮುದ್ರ ಸೇರುವ ಜಾಗದಲ್ಲಿ ಕುಟುಂಬದವರೆಲ್ಲರೂ ನೀರಿಗಿಳಿದಿದ್ದಾರೆ. ನೀರು ಏರುತ್ತಾ ಬಂದು ಎಲ್ಲರು ಮುಳುಗಿ ಹೋಗಿದ್ದಾರೆ. ಆಗ ಮಂತ್ರ ಸರ್ಫಿಂಗ್ ಕ್ಲಬ್ನ ಶ್ಯಾಮ್ ಮತ್ತು ಇಬ್ಬರು ಸದಸ್ಯರು ಬೋಟ್ನಲ್ಲಿ ಅಲ್ಲಿಗೆ ಬರುತ್ತಾರೆ. ಈ ಮುಳುಗುತ್ತಿರೋ ಫ್ಯಾಮಿಲಿಯನ್ನು ನೋಡಿದ ಸರ್ಫರ್ ಶ್ಯಾಮ್ ಅವರನ್ನು ರಕ್ಷಣೆ ಮಾಡುತ್ತಾರೆ. ಓರ್ವ ಮಹಿಳೆ ಸೇರಿದಂತೆ ಮೂವರನ್ನು ಸರ್ಫರ್ ಕ್ಲಬ್ನ ಸದಸ್ಯರು ರಕ್ಷಿಸುತ್ತಾರೆ.
ಮಕ್ಕಳನ್ನು ರಕ್ಷಿಸುತ್ತಾ ಪ್ರಾಣ ಬಿಟ್ಟ ಜಯರಾಮಗೌಡ..! ಈ ರಕ್ಷಣಾ ಕಾರ್ಯದಲ್ಲಿ ಕುಟುಂಬದ ಮೂವರು ಮಕ್ಕಳು ಮತ್ತು ಜಯರಾಮಗೌಡ ಅವರ ಪತ್ನಿ ಬದುಕುಳಿದ್ರು. 48 ವರ್ಷದ ಜಯರಾಮ ಗೌಡ ಮಾತ್ರ ಸಾವನ್ನಪ್ಪಿದ್ರು. ನೀರಿನಲ್ಲಿ ತಾವು ಮುಳುಗಿದ್ದರೂ ಇಬ್ಬರು ಸಣ್ಣ ಮಕ್ಕಳನ್ನು ಜಯರಾಮಗೌಡ ತನ್ನ ಎರಡು ಕೈಗಳಿಂದ ನೀರಿನಿಂದ ಮೇಲೆತ್ತಿ ಹಿಡಿದಿದ್ದರು. ಹಲವು ನಿಮಿಷಗಳ ಕಾಲ ಹೀಗೆ ಮಕ್ಕಳನ್ನು ನೀರಿನಲ್ಲಿ ಹಿಡಿದಿಟ್ಟುಕೊಂಡಿದ್ರಿಂದ ಜಯರಾಮಗೌಡ ಮಕ್ಕಳನ್ನು ರಕ್ಷಿಸಿದ್ರು. ತಾವು ಕೂಡ ಜೀವ ಉಳಿಸಿಕೊಳ್ಳಲು ಯತ್ನಿಸಿದರು. ಅವರನ್ನು ಕೂಡ ದಡಕ್ಕೆ ಕರೆದುಕೊಂಡು ಬಂದ್ರು ಬದುಕುಳಿಯಲಿಲ್ಲ.
ಈ ಪ್ರಕರಣ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು. ಸದ್ಯ ಈ ಕಾರ್ಯಚರಣೆ ದೃಶ್ಯಾವಳಿಗಳೂ ಈಗ ವೈರಲ್ ಆಗುತ್ತಿದೆ. ಈ ದೃಶ್ಯದಲ್ಲಿ ರಕ್ಷಣೆ ಮಾಡುತ್ತಿರೋದು ಮಾತ್ರ ಕಾಣ ಸಿಗುತ್ತದೆ. ಆದ್ರೆ ಈ ದೃಶ್ಯದ ಹಿಂದಿನ ಇಷ್ಟೊಂದು ದೊಡ್ಡ ಕಹಾನಿ ಎಲ್ಲರ ಕಣ್ಣನ್ನು ತೇವಗೊಳಿಸದೇ ಇರಲ್ಲ.
Published On - 6:46 pm, Mon, 4 January 21