AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್, ಬಿಸಿಲ ಧಗೆಯಲ್ಲೂ ಮಸ್ತ್ ಮಜಾ, ರೈಲಿನಲ್ಲಿ ನೇತ್ರಾಣಿ ತಲುಪುವುದು ಹೇಗೆ?

Netrani Scuba Diving: ಬೇಸಿಗೆ ರಜೆ ಎಂದ ತಕ್ಷಣ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರೇ ದಂಡೇ ಹರಿದುಬರುತ್ತದೆ. ಅದರಲ್ಲಿಯೂ ಕರಾವಳಿ ಕಡಲತೀರಗಳು, ಜಲಕ್ರೀಡೆಗಳು, ಪ್ರಮುಖ ದೇವಾಲಯ, ಕೋಟೆ, ಜಲಸಾಹಸಿ ಕ್ರೀಡೆಗಳತ್ತ ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದು, ಪ್ರವಾಸಿತಾಣಗಳು ನಿತ್ಯವೂ ಜನರಿಂದ ಗಿಜುಗುಡುತ್ತಿರುತ್ತದೆ. ಹಾಗೆಯೇ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮಜಾನೇ ಬೇರೆ, ಈ ಬೇಸಿಗೆಯಲ್ಲಿ ನಿಮ್ಮ ಮಕ್ಕಳನ್ನು ಕರೆದೊಯ್ಯಲು ಇದು ಉತ್ತಮ ಜಾಗ.

ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್, ಬಿಸಿಲ ಧಗೆಯಲ್ಲೂ ಮಸ್ತ್ ಮಜಾ, ರೈಲಿನಲ್ಲಿ ನೇತ್ರಾಣಿ ತಲುಪುವುದು ಹೇಗೆ?
ಸ್ಕೂಬಾ ಡೈವಿಂಗ್
ನಯನಾ ರಾಜೀವ್
|

Updated on: Apr 17, 2024 | 2:50 PM

Share

ಇಂಥಾ ಕಡು ಬೇಸಿಗೆಯಲ್ಲಿ ಸ್ಕೂಬಾ ಡೈವಿಂಗ್(Scuba Diving) ಮಾಡಲು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ, ಹಾಗಾದರೆ ಯಾಕೆ ತಡ ನೇತ್ರಾಣಿ(Netrani) ಗೆ ನೀವು ಭೇಟಿ ನೀಡಲೇಬೇಕು. ಉರಿ ಉರಿ ಬಿಸಿಲ ಝಳದಿಂದ ಸ್ವಲ್ಪ ಹೊತ್ತಾದರೂ ಬಿಡುವು ಪಡೆಯಬಹುದು. ಮುರುಡೇಶ್ವರ ಹತ್ತಿರದ ನೇತ್ರಾಣಿ ದ್ವೀಪವು ಕರ್ನಾಟಕದ ಪ್ರಮುಖ ಸ್ಕೂಬಾ ಡೈವಿಂಗ್ ತಾಣವೆಂದೇ ಪ್ರಖ್ಯಾತವಾಗಿದೆ. ಇದು ಮುರುಡೇಶ್ವರ ತೀರದಿಂದ ಸುಮಾರು 22 ಕಿ.ಮೀ ದೂರದಲ್ಲಿದೆ ಮತ್ತು ದೋಣಿಯಲ್ಲಿ ಒಂದು ಗಂಟೆ ತೆಗೆದುಕೊಳ್ಳುತ್ತದೆ.

ಹವ್ಯಾಸಿ ಸ್ಕೂಬಾ ಡೈವ್ ಮತ್ತು ಸ್ಕೂಬಾ ಡೈವಿಂಗ್ ತರಬೇತಿ ಶಿಬಿರಗಳನ್ನು ನಡೆಸುವ ಖಾಸಗಿ ಕಂಪೆನಿಗಳಿವೆ. ಮೀನಿನಂತೆ ಈಜುವುದು, ನೀರಿನೊಳಗಿರುವ ಅದ್ಭುತವಾದ ಸಸ್ಯಗಳು, ಮೀನುಗಳು, ಕಲ್ಲುಗಳು ಸೇರಿದಂತೆ ಹಲವು ಆಕರ್ಷಕ ವಸ್ತುಗಳನ್ನು ನೀವು ಕಣ್ತುಂಬಿಕೊಳ್ಳಬಹುದು.

ಸ್ಕೂಬಾ ಡೈವಿಂಗ್ ವಿಧಗಳು ಸೋಲೋ ಡೈವ್: ಉಸಿರಾಟದ ಸಾಧನ ಧರಿಸಿ ನೀರೊನೊಳಗೆ ಯಾವುದೇ ವ್ಯಕ್ತಿ ಸ್ಕೂಬಾ ಡೈವಿಂಗ್ ಮಾಡಬಹುದು. ಸೂಕ್ತ ತರಬೇತಿ ಪಡೆದು (ಪಡಿ) ಮಾನ್ಯತೆ ಇರುವವರು ಯಾರದೇ ಹಂಗಿಲ್ಲದೆ ಸ್ಕೂಬಾ ಡೈವಿಂಗ್ ಮಾಡಬಹುದು. ಇತರ ಹವ್ಯಾಸಿ ಪ್ರವಾಸಿಗರು ಸ್ಕೂಬಾ ಡೈವಿಂಗ್ ನಡೆಸಿಕೊಡುವ ಸಂಸ್ಥೆಯ ಅನುಭವಿ ಮಾರ್ಗದರ್ಶಕರ ಕಣ್ಗಾವಲಿನಲ್ಲಿ ಸ್ಕೂಬಾ ಡೈವಿಂಗ್ ಮಾಡಬಹುದು.

ನೀರಿನ ಅಡಿಯಲ್ಲಿ ಸಂವಹನಕ್ಕಾಗಿ ಬಳಸಬೇಕಾದ ವಿವಿಧ ಕೈ ಸನ್ನೆಗಳು, ಮೂಲ ಉಸಿರಾಟದ ತತ್ವಗಳು ಮತ್ತು ಉಪಕರಣಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಮಾರ್ಗದರ್ಶಕರುತಿಳಿಸಿಕೊಡುತ್ತಾರೆ.

ಪಡಿ / ಎಸ್‌ಎಸ್‌ಐ ಕೋರ್ಸ್: ಗೈಡ್ ಇಲ್ಲದೆ ಖುದ್ದಾಗಿ ಡೈವಿಂಗ್ ಮಾಡಲು ಆಸಕ್ತಿ ಹೊಂದಿರುವ ವ್ಯಕ್ತಿಗಳು ಪಡಿ (ಪ್ರೊಫೆಷನಲ್ ಅಸೋಸಿಯೇಶನ್ ಆಫ್ ಡೈವಿಂಗ್ ಇನ್ಸ್ಟ್ರಕ್ಟರ್ಸ್) ಅಥವಾ ಎಸ್‌ಎಸ್‌ಐ (ಸ್ಕೂಬಾ ಸ್ಕೂಲ್ ಇಂಟರ್‌ನ್ಯಾಷನಲ್) ಅಡಿಯಲ್ಲಿ ಪ್ರಮಾಣಪತ್ರ ಕೋರ್ಸ್ ಅನ್ನು ತೆಗೆದುಕೊಳ್ಳಬಹುದು.

ಕೋರ್ಸ್ ಸಾಮಾನ್ಯವಾಗಿ 5-7 ದಿನಗಳವರೆಗೆ ಇರುತ್ತದೆ ಮತ್ತು 3 ಮಾಡ್ಯೂಲ್‌ಗಳು- ಪಠ್ಯ ಬೋಧನೆ, ಸೀಮಿತ ಡೈವ್‌ಗಳು (ಈಜುಕೊಳಗಳಲ್ಲಿ) ಮತ್ತು ಸಮುದ್ರ ನೀರಿನ ಡೈವಿಂಗ್ ಅನ್ನು ಒಳಗೊಂಡಿದೆ. ಕೋರ್ಸ್ ಅನ್ನು ಪೂರ್ಣಗೊಳಿಸುವುದರಿಂದ ಗೈಡ್ ಡೈವ್ ಕೈಗೊಳ್ಳಲು ಮತ್ತು ಇತರ ಡೈವರ್‌ಗಳಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ.

ಮತ್ತಷ್ಟು ಓದಿ: ಅತಿ ಎತ್ತರದ ಶಿವನ ಪ್ರತಿಮೆ ಹಾಗೂ ಕರಾವಳಿ ವೈಭವ ನೋಡಲು ಮುರುಡೇಶ್ವರಕ್ಕೆ ಭೇಟಿ ನೀಡಿ

ವೆಚ್ಚ: ಒಂದು ಡೈವ್‌ಗೆ 4000 ರೂಪಾಯಿಗಳಷ್ಟು ವೆಚ್ಚವಾಗಬಹುದು. ನಿಮ್ಮ ತಂಡದಲ್ಲಿ ಎಷ್ಟು ಜನರಿದ್ದಾರೆ, ಋತುಮಾನ, ಬೇಡಿಕೆ ಮತ್ತಿತರ ಅಂಶಗಳನ್ನು ಅವಲಂಬಿಸಿ ಆಪರೇಟರ್‌ನೊಂದಿಗೆ ಉತ್ತಮ ದರವನ್ನು ಮಾತುಕತೆ ಮೂಲಕ ನಿಗದಿ ಪಡಿಸಲು ಸಾಧ್ಯವಿದೆ.

ಪ್ರಯಾಣ: ಮುರುಡೇಶ್ವರ ಬೆಂಗಳೂರಿನಿಂದ 600 ಕಿ.ಮೀ ದೂರದಲ್ಲಿದೆ. ಮುರುಡೇಶ್ವರ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲ್ವೆ ನಿಲ್ದಾಣವನ್ನು ಹೊಂದಿದ್ದು, ಕರ್ನಾಟಕದ ಎಲ್ಲಾ ಭಾಗಗಳಿಂದ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಹೊಂದಿದೆ. 150 ಕಿ.ಮೀ ದೂರದಲ್ಲಿರುವ ಮಂಗಳೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ.

ವಸತಿ : ಮುರುಡೇಶ್ವರ ದೇವಾಲಯದ ಪಟ್ಟಣವಾಗಿದ್ದು, ವ್ಯಾಪಕ ಶ್ರೇಣಿಯ ಬಜೆಟ್ ಮತ್ತು ಮಧ್ಯ ಶ್ರೇಣಿಯ ಹೋಟೆಲ್​ಗಳ ಆಯ್ಕೆಗಳಿವೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ