Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಡಿ ಸಂಗಣ್ಣ ಕಾಂಗ್ರೆಸ್ ಸೇರಿದ್ದು ಅವರ ವೈಯಕ್ತಿಕ ನಿರ್ಧಾರ, ಕಾಮೆಂಟ್ ಮಾಡಲಾರೆ: ಬಿಎಸ್ ಯಡಿಯೂರಪ್ಪ

ಕರಡಿ ಸಂಗಣ್ಣ ಕಾಂಗ್ರೆಸ್ ಸೇರಿದ್ದು ಅವರ ವೈಯಕ್ತಿಕ ನಿರ್ಧಾರ, ಕಾಮೆಂಟ್ ಮಾಡಲಾರೆ: ಬಿಎಸ್ ಯಡಿಯೂರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 17, 2024 | 2:56 PM

ಎಲ್ಲ 28 ಸ್ಥಾನಗಳನ್ನು ಗೆಲ್ಲುವ ಪ್ರಯತ್ನದಲ್ಲಿ ಯಶ ಕಾಣಲಿದ್ದೇವೆ ಎಂದರು. ಕಾಂಗ್ರೆಸ್ ಪಕ್ಷದವರು ಲಿಂಗಾಯತ ಕಾರ್ಡ್ ಪ್ಲೇ ಮಾಡಿ ವೋಟು ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದರೆ ತಮ್ಮದೇನೂ ಅಭ್ಯಂತರವಿಲ್ಲ, ಆದರೆ ಬಿಜೆಪಿಗೆ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಲ್ಲ ಸಮುದಾಯದವರು ಬೇಕು ಎಂದು ಯಡಿಯೂರಪ್ಪ ಹೇಳಿದರು.

ಬೆಳಗಾವಿ: ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ (Jagadish Shettar) ಅವರು ಇಂದು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು (BS Yediyurappa) ಕರಡಿ ಸಂಗಣ್ಣ (Karadi Sanganna) ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಆಶ್ಚರ್ಯ ಮತ್ತು ವಿಷಾದ ಎರಡನ್ನೂ ವ್ಯಕ್ತಪಡಿಸಲಿಲ್ಲ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಅದು ಅವರ ವೈಯಕ್ತಿಕ ನಿರ್ಧಾರ, ತಮ್ಮೊಂದಿಗೆ ಮಾತಾಡುವಂತೆ ಹೇಳಿದ್ದೆ, ಆದರೆ ಅವರು ಬಿಜೆಪಿ ಒದಗಿಸಿದ ವಿಪುಲ ಅವಕಾಶಗಳ ಹೊರತಾಗಿಯೂ ಕಾಂಗ್ರೆಸ್ ಸೇರಿದ್ದಾರೆ, ಇದೆಲ್ಲ ಸ್ವಾಭಾವಿಕ, ಯಾರೇನೂ ಮಾಡಲಾಗದು ಎಂದು ಹೇಳಿದರು. ಬೆಳಗಾವಿಯಿಂದ ಕೊಪ್ಪಳಕ್ಕೆ ಹೋಗೋದಾಗಿ ಹೇಳಿದ ಅವರು ಎಲ್ಲೆಡೆ ಬಿಜೆಪಿಗೆ ಅನುಕೂಲಕಾರವಾದ ವಾತಾವರಣವಿದೆ. ಎಲ್ಲ 28 ಸ್ಥಾನಗಳನ್ನು ಗೆಲ್ಲುವ ಪ್ರಯತ್ನದಲ್ಲಿ ಯಶ ಕಾಣಲಿದ್ದೇವೆ ಎಂದರು. ಕಾಂಗ್ರೆಸ್ ಪಕ್ಷದವರು ಲಿಂಗಾಯತ ಕಾರ್ಡ್ ಪ್ಲೇ ಮಾಡಿ ವೋಟು ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದರೆ ತಮ್ಮದೇನೂ ಅಭ್ಯಂತರವಿಲ್ಲ, ಆದರೆ ಬಿಜೆಪಿಗೆ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಲ್ಲ ಸಮುದಾಯದವರು ಬೇಕು ಎಂದು ಯಡಿಯೂರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಪರೂಪಕ್ಕೊಮ್ಮೆ ನಕ್ಕ ಬಿಎಸ್ ಯಡಿಯೂರಪ್ಪ ಕೇಳಿದ ಪ್ರಶ್ನೆಗೆ ಉತ್ತರ ನೀಡಲಿಲ್ಲ!