Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್ ತುಂಡು ಜಮೀನಿಗಾಗಿ 9-ವರ್ಷದ ಬಾಲಕಿಯನ್ನು ಅಪಹರಿಸಿದ್ದರು: ಹೆಚ್ ಡಿ ದೇವೇಗೌಡ

ಡಿಕೆ ಶಿವಕುಮಾರ್ ತುಂಡು ಜಮೀನಿಗಾಗಿ 9-ವರ್ಷದ ಬಾಲಕಿಯನ್ನು ಅಪಹರಿಸಿದ್ದರು: ಹೆಚ್ ಡಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 17, 2024 | 2:20 PM

ನಂತರ ಅ ನಿರ್ದಿಷ್ಟ ಜಮೀನನ್ನು ಪಡೆಯಲೇ ಬೇಕೆಂದು ಹಟಕ್ಕೆ ಬೀಳುವ ಶಿವಕಮಾರ್ ಅ ವ್ಯಕ್ತಿಯ 9-ವರ್ಷದ ಮಗಳನ್ನು ಅಪಹರಿಸಿ ಯಾವುದೋ ಮನೆಯಲ್ಲಿ ಕೂಡಿಹಾಕುತ್ತಾರೆ ಎಂದು ಹೇಳುವ ದೇವೇಗೌಡರು, ಮಗು ದೂರವಾದ ಕಾರಣ ಅನ್ನ ನೀರು ಬಿಟ್ಟಿದ್ದ ತಾಯಿ ತನ್ನ ಗಂಡನಿಗೆ ಜಮೀನಿನ ಸಹವಾಸವೇ ಬೇಡ, ಮಗುವನ್ನು ವಾಪಸ್ಸು ಕರೆದುಕೊಂಡು ಬರಲು ಹೇಳಿದಾಗ ಅ ವ್ಯಕ್ತಿ ಅಲ್ಲಿಗೆ ಹೋದಾಗಲೂ ಆತನಿಗೆ ಮತ್ತು ಮಗುವಿಗೆ ಮಾನಸಿಕ ಹಿಂಸೆ ನೀಡುತ್ತಾರೆ ಎನ್ನುತ್ತಾರೆ.

ಚಿಕ್ಕಮಗಳೂರು: ನಗರದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವಾಗ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (HD Devegowda) ಅವರು ಡಿಕೆ ಶಿವಕುಮಾರ್ (DK Shivakumar) ಮೇಲೆ ತೀವ್ರ ವಾಗ್ದಾಳಿ ನಡೆಸಿ ಗುರುತರವಾದ ಆರೋಪವೊಂದನ್ನು ಮಾಡಿದರು. ನಿನ್ನೆ ಬೆಂಗಳೂರಲ್ಲಿ ಜಮೀನೊಂದಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಬಾಲಕಿಯನ್ನು ಅಪಹರಿಸಿದ್ದನ್ನು ಕುಮಾರಸ್ವಾಮಿ (HD Kumaraswamy) ಹೇಳಿದ್ದರು. ಆ ಕತೆಯನ್ನು ದೇವೇಗೌಡರು ಇಂದು ಸಂಪೂರ್ಣವಾಗಿ ವಿವರಿಸಿದರು. ಅಮೇರಿಕದಲ್ಲಿ ಹಣ ಸಂಪಾದನೆ ಮಾಡಿಕೊಂಡು ಸ್ವದೇಶಕ್ಕೆ ವಾಪಸ್ಸಾದ ವ್ಯಕ್ತಿಯೊಬ್ಬ ಬಿಡದಿ ಬಳಿ ಒಂದು ಐಟಿ ಕಂಪನಿ ಸ್ಥಾಪಿಸಲು ಜಮೀನು ಖರೀದಿಸುತ್ತಾರೆ. ಆದರೆ ಶಿವಕುಮಾರ್ ಸುಳ್ಳು ದಾಖಲಾತಿ ಪತ್ರಗಳನ್ನು ತಯಾರಿಸಿ ಆ ಜಮೀನನ್ನು ಕಬಳಿಸಲು ಪ್ರಯತ್ನಿಸುತ್ತಾರೆ.

ಆ ವ್ಯಕ್ತಿ ಕೋರ್ಟ್ ಮೊರೆಹೊಕ್ಕಾಗ ಉಚ್ಚ ಮತ್ತು ಸರ್ವೋಚ್ಛ ನ್ಯಾಯಾಲಯ ಎರಡರಲ್ಲೂ ಶಿವಕುಮಾರ್ ಗೆ ಸೋಲಾಗುತ್ತದೆ ಎಂದು ದೇವೇಗೌಡ ಹೇಳುತ್ತಾರೆ. ನಂತರ ಅ ನಿರ್ದಿಷ್ಟ ಜಮೀನನ್ನು ಪಡೆಯಲೇ ಬೇಕೆಂದು ಹಟಕ್ಕೆ ಬೀಳುವ ಶಿವಕಮಾರ್ ಅ ವ್ಯಕ್ತಿಯ 9-ವರ್ಷದ ಮಗಳನ್ನು ಅಪಹರಿಸಿ ಯಾವುದೋ ಮನೆಯಲ್ಲಿ ಕೂಡಿಹಾಕುತ್ತಾರೆ ಎಂದು ಹೇಳುವ ದೇವೇಗೌಡರು, ಮಗು ದೂರವಾದ ಕಾರಣ ಅನ್ನ ನೀರು ಬಿಟ್ಟಿದ್ದ ತಾಯಿ ತನ್ನ ಗಂಡನಿಗೆ ಜಮೀನಿನ ಸಹವಾಸವೇ ಬೇಡ, ಮಗುವನ್ನು ವಾಪಸ್ಸು ಕರೆದುಕೊಂಡು ಬರಲು ಹೇಳಿದಾಗ ಅ ವ್ಯಕ್ತಿ ಅಲ್ಲಿಗೆ ಹೋದಾಗಲೂ ಆತನಿಗೆ ಮತ್ತು ಮಗುವಿಗೆ ಮಾನಸಿಕ ಹಿಂಸೆ ನೀಡುತ್ತಾರೆ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಿಶ್ವದ ಅಗ್ರಗಣ್ಯ ನಾಯಕನಾಗಿ ಬೆಳೆದಿರುವ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕಿದೆ: ಹೆಚ್ ಡಿ ದೇವೇಗೌಡ