ಧಾರವಾಡ: ಘಟನೆ ನಡೆದು ಎರಡು ವರ್ಷವಾದರೂ ಯಾವುದೇ ಪರಿಹಾರ ನೀಡದ ಸರ್ಕಾರ.. ಜನ ಜಾಗೃತಿ ಸಂಘಟನೆಯಿಂದ ಪಾದಯಾತ್ರೆ

ಮಾರ್ಚ್ 19, 2019 ರ ಮಧ್ಯಾಹ್ನ 3:40 ರ ಸುಮಾರಿಗೆ ಧಾರವಾಡ ನಗರದ ಕುಮಾರೇಶ್ವರ ನಗರ ಬಡಾವಣೆಯಲ್ಲಿ ಯಾರೂ ಊಹಿಸಿರದ ಘಟನೆಯೊಂದು ನಡೆದು ಹೋಗಿತ್ತು. ಮಧ್ಯಾಹ್ನ ಬಡಾವಣೆಯ ಬೆಳಗಾವಿ ರಸ್ತೆಯಲ್ಲಿ ಬಹುಮಹಡಿ ಕಟ್ಟಡವೊಂದು ದಿಢೀರನೇ ಕುಸಿದು ಬಿದ್ದಿತ್ತು.

ಧಾರವಾಡ: ಘಟನೆ ನಡೆದು ಎರಡು ವರ್ಷವಾದರೂ ಯಾವುದೇ ಪರಿಹಾರ ನೀಡದ ಸರ್ಕಾರ.. ಜನ ಜಾಗೃತಿ ಸಂಘಟನೆಯಿಂದ ಪಾದಯಾತ್ರೆ
ಜನ ಜಾಗೃತಿ ಸಂಘಟನೆಯಿಂದ ಪಾದಯಾತ್ರೆ
Follow us
sandhya thejappa
|

Updated on: Mar 20, 2021 | 4:23 PM

ಧಾರವಾಡ: 2019 ರಲ್ಲಿ ನಡೆದ ಘಟನೆ ಬಗ್ಗೆ ಯಾರೂ ಕೂಡ ಊಹಿಸಿರಲಿಲ್ಲ. ಇಡೀ ರಾಜ್ಯವೇ ಬೆಚ್ಚಿಬಿದ್ದಿದ್ದ ಘಟನೆಯಲ್ಲಿ ಹಲವರು ಪ್ರಾಣ ಕಳೆದುಕೊಂಡರೆ, ಅನೇಕರು ಶಾಶ್ವತವಾಗಿ ಅಂಗವಿಕಲರಾಗಿ ಹೋಗಿದ್ದರು. ಇಷ್ಟೆಲ್ಲ ಆಗಿದ್ದರೂ ಸರ್ಕಾರ ಮಾತ್ರ ಘಟನೆಗೂ ತನಗೂ ಸಂಬಂಧವೇ ಇಲ್ಲ ಅಂತಾ ಸುಮ್ಮನಾಗಿಬಿಟ್ಟಿದೆ. ಘಟನೆ ನಡೆದು ನಿನ್ನೆಗೆ ಬರೋಬ್ಬರಿ ಎರಡು ವರ್ಷವಾಗಿರುವ ಹಿನ್ನೆಲೆಯಲ್ಲಿ ಪರಿಹಾರ ವಿತರಣೆಗೆ ಆಗ್ರಹಿಸಿ ಜನ ಜಾಗೃತಿ ಸಂಘಟನೆಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಪರಿಹಾರ ನೀಡದ ಸರ್ಕಾರ ಮಾರ್ಚ್ 19, 2019 ರ ಮಧ್ಯಾಹ್ನ 3:40 ರ ಸುಮಾರಿಗೆ ಧಾರವಾಡ ನಗರದ ಕುಮಾರೇಶ್ವರ ನಗರ ಬಡಾವಣೆಯಲ್ಲಿ ಯಾರೂ ಊಹಿಸಿರದ ಘಟನೆಯೊಂದು ನಡೆದು ಹೋಗಿತ್ತು. ಮಧ್ಯಾಹ್ನ ಬಡಾವಣೆಯ ಬೆಳಗಾವಿ ರಸ್ತೆಯಲ್ಲಿ ಬಹುಮಹಡಿ ಕಟ್ಟಡವೊಂದು ದಿಢೀರನೇ ಕುಸಿದು ಬಿದ್ದಿತ್ತು. ಕಟ್ಟಡದ ಅವಶೇಷಗಳಡಿ ಹಲವಾರು ಜನರು ಸಿಲುಕಿದ್ದರು. ಒಂದು ವಾರ ನಡೆದ ತೆರವು ಕಾರ್ಯಾಚರಣೆ ಬಳಿಕ 57 ಜನರನ್ನು ರಕ್ಷಿಸಲಾಗಿತ್ತು. ಆದರೆ ದುರದೃಷ್ಟದಿಂದ 19 ಜನರು ಪ್ರಾಣವನ್ನು ಕಳೆದುಕೊಂಡಿದ್ದರು. ಘಟನೆ ನಡೆದು ಎರಡು ವರ್ಷ ತುಂಬಿದರೂ ಇದುವರೆಗೂ ಸರ್ಕಾರ ಗಾಯಾಳುಗಳಿಗೆ, ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರವನ್ನು ನೀಡಿಲ್ಲ ಅಂತಾ ಜನ ಜಾಗೃತಿ ಸಂಘದ ಸದಸ್ಯರು ಘಟನಾ ಸ್ಥಳದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಅದಕ್ಕೂ ಮುಂಚೆ ಘಟನಾ ಸ್ಥಳದಲ್ಲಿ ಮೊದಲಿಗೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಪೂಜೆ ಸಲ್ಲಿಸಿ, ಮೌನಾಚರಣೆ ನಡೆಸಲಾಯಿತು.

ಮೃತರ ಭಾವಚಿತ್ರಗಳು

ಕಟ್ಟಡ ಕುಸಿತದಲ್ಲಿ ಕಾಲು ಕಳೆದುಕೊಂಡರು 

ಪಾದಯಾತ್ರೆಯಲ್ಲಿ ಮೃತರ, ಗಾಯಾಳುಗಳ ಕುಟುಂಬಸ್ಥರು ಹಾಗೂ ಆಸ್ತಿ ಕಳೆದುಕೊಂಡವರು ಪಾಲ್ಗೊಂಡಿದ್ದರು. ಘಟನೆ ನಡೆದ ಬಳಿಕ ಸರ್ಕಾರ ಈ ಕುರಿತು ವರದಿ ಸಲ್ಲಿಸುವಂತೆ ಆಗಿನ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಆದೇಶ ಮಾಡಿತ್ತು. ಮಾರ್ಚ್ 14, 2020 ರಂದೇ ಅವರು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು. ಆದರೆ ಇದುವರೆಗೂ ಆ ವರದಿಯಲ್ಲಿ ಏನಿದೆ ಎನ್ನುವುದು ಬಹಿರಂಗಗೊಂಡಿಲ್ಲ. ಇದು ದೇಶದ ಭದ್ರತೆಗೆ ಸಂಬಂಧಿಸಿದ ವರದಿಯಲ್ಲ. ಆದರೂ ಅದರ ಮಾಹಿತಿಯನ್ನು ಸರ್ಕಾರ ಯಾಕೆ ಗುಪ್ತವಾಗಿ ಇರಿಸಿದೆ ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಇದರಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ತಂತ್ರವೇನಾದರೂ ಅಡಗಿದೆಯಾ ಎನ್ನುವ ಪ್ರಶ್ನೆಯನ್ನು ಸಂತ್ರಸ್ತರು ಕೇಳುತ್ತಿದ್ದಾರೆ. ಇದುವರೆಗೂ ಗಾಯಾಳುಗಳಿಗೆ ಯಾವುದೇ ಪರಿಹಾರ ನೀಡದೇ ಇರದಿದಕ್ಕೆ ಸಂತ್ರಸ್ತರು ಸರ್ಕಾರದ ವಿರುದ್ಧ ಹರಿಹಾಯುವಂತಾಗಿದೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆ ಮಾಡಿದರು

ಇದನ್ನೂ ಓದಿ

ಬೆಂಗಳೂರಿನ ವಿವಿಧೆಡೆ ಪೊಲೀಸರ ಕಾರ್ಯಾರಣೆ; ಬಂಧಿತರಿಂದ ಚಿನ್ನ, ಮಾದಕ ವಸ್ತು ವಶ

ವಾಟ್ಸಾಪ್ ಖಾಸಗಿತನ ನಿಯಮಾವಳಿಗಳ ಅಪ್​ಡೇಟ್​ಗೆ ದೆಹಲಿ ಹೈಕೋರ್ಟ್​ನಲ್ಲಿ ತಡೆ ಕೋರಿದ ಸರ್ಕಾರ

ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು