ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಕಂತುಕಂತುಗಳಲ್ಲಿ ತನ್ನ ಮುಂದಿನ ನಡೆ ಬಗ್ಗೆ ವಿಡಿಯೊ ತುಣುಕು ಬಿಡುಗಡೆ ಮಾಡುತ್ತಿದ್ದಾರೆ. ಈ ಮಧ್ಯೆ ದೇಶದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಆಕೆ ಬರೆದಿದ್ದಾರೆ ಎನ್ನುವ ಪತ್ರದ ವಿವರ ಟಿವಿ9 ಡಿಜಿಟಲ್ಗೆ ಲಭ್ಯವಾಗಿದೆ. ಈ ಪತ್ರದಲ್ಲಿ ಸಂತ್ರಸ್ತ ಯುವತಿಯು ರಾಜ್ಯ ಸರ್ಕಾರ, ಎಸ್ಐಟಿ ಮತ್ತು ರಮೇಶ್ ಜಾರಕಿಹೊಳಿ ನನ್ನನ್ನು ಕೊಲ್ಲಬಹುದು ಎಂದು ಗುರುತರ ಆರೋಪ ಮಾಡಿದ್ದಾರೆ.
ಮಾರ್ಚ್ 28 ರಂದು ಬರೆದಿದ್ದಾರೆ ಎನ್ನುವ ಈ ಪತ್ರದ ಪ್ರಾರಂಭದಲ್ಲಿಯೇ ಅವರ ತಮ್ಮನ್ನು ‘ರೇಪ್ ವಿಕ್ಟಿಮ್’ (ಅತ್ಯಾಚಾರ ಸಂತ್ರಸ್ತೆ) ಎಂದು ಕರೆದುಕೊಂಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ನಲ್ಲಿ ದಾಖಲಾಗಿರುವ ಕೇಸು ಸಂಖ್ಯೆ ಎಫ್ಐಆರ್ 30/2021 ಪ್ರಕಾರ ರಮೇಶ ಜಾರಕಿಹೊಳಿ ಈ ರೇಪ್ ಕೇಸಿನ ಆರೋಪಿ. ಜಾರಕಿಹೊಳಿ ಬಹಳ ಪ್ರಭಾವಶಾಲಿ. ಇವರು ನನ್ನನ್ನು ಮುಗಿಸಲು ಯಾವ ಹಂತಕ್ಕೂ ಹೋಗಬಹುದು. ರಮೇಶ್ ಜಾರಕಿಹೊಳಿ ಅವರು ನನ್ನನ್ನು ಮತ್ತು ನನ್ನ ತಂದೆ ತಾಯಿಯನ್ನು ಮುಗಿಸಲೂಬಹುದು. ನಾನೆಷ್ಟೇ ಕೋರಿಕೊಂಡರೂ ಎಸ್ಐಟಿ ನನಗಾಗಲೀ ಅಥವಾ ನನ್ನ ತಂದೆ ತಾಯಿಗಾಗಲೀ ರಕ್ಷಣೆ ನೀಡಿಲ್ಲ ಎಂದು ಸಂತ್ರಸ್ತ ಯುವತಿ ಪತ್ರದಲ್ಲಿ ಹೇಳಿದ್ದಾರೆ.
ಮಾಧ್ಯಮದ ಮೂಲಕ ನಾನು ತಿಳಿದುಕೊಂಡಿದ್ದೇನೆಂದರೆ ರಮೇಶ್ ಜಾರಕಿಹೊಳಿ ಇಂದು (ಮಾರ್ಚ್ 28) ಮತ್ತೆ ನನ್ನನ್ನು ಹೆದರಿಸಿದ್ದಾರೆ. ರಾಜಕೀಯವಾಗಿ ತುಂಬಾ ಪ್ರಭಾವಿಯಾಗಿರುವ ಅವರು ಯಾವ ಹಂತಕ್ಕೂ ಹೋಗಬಹುದಾಗಿದೆ. ಯಾಕೆಂದರೆ ರಮೇಶ್ ಜಾರಕಿಹೊಳಿ ಅವರಿಗೆ ಅಪರಾಧದ ಹಿನ್ನೆಲೆಯಿದೆ. ಅವರು ನನ್ನನ್ನು ಯಾವತ್ತು ಬೇಕಾದರೂ, ಎಲ್ಲಿ ಬೇಕಾದರೂ ಕೊಲ್ಲಿಸಬಹುದಾಗಿದೆ. ಎಸ್ಐಟಿ ಮತ್ತು ರಾಜ್ಯ ಸರ್ಕಾರ ರಮೇಶ್ ಜಾರಕಿಹೊಳಿಮಾತನ್ನೇ ಕೇಳುತ್ತಿದೆ ಎಂದು ದೂರಿದ್ದಾರೆ.
ಎಸ್ಐಟಿ, ರಾಜ್ಯ ಸರ್ಕಾರ ಮತ್ತು ರಮೇಶ್ ಜಾರಕಿಹೊಳಿ ಸೇರಿಕೊಂಡು ಯಾವ ಸಮಯದಲ್ಲಾದರೂ, ಎಲ್ಲಿ ಬೇಕಾದರೂ ನನ್ನನ್ನು ಕೊಲ್ಲಿಸಬಹುದಾಗಿದೆ. ನಾನು, ಯಾವ ನಿರ್ಬಂಧ ಮತ್ತು ಒತ್ತಡವಿಲ್ಲದೇ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ. ನನ್ನ ಕುಟುಂಬವನ್ನು ರಮೇಶ್ ಜಾರಕಿಹೊಳಿ ತಮ್ಮ ಕೈ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ ಮತ್ತು ಅವರು ನನ್ನ ಕುಟುಂಬಕ್ಕೆ ತುಂಬಾ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಲ್ಲಿದೆ ಹೊಸ ಟ್ವಿಸ್ಟ್
ಈ ಮೇಲಿನ ಅಂಶಗಳನ್ನು ಗಮನಿಸಿಕೊಂಡು ತಾವು ನನ್ನ ಪತ್ರವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಈ ಕೂಡಲೇ ನನಗೆ ಭದ್ರತೆ ಒದಗಿಸಲು ತಾವು ಆದೇಶಿಸಬೇಕು. ಈ ಕೇಸಿನ ತನಿಖೆ ಮೇಲ್ವಿಚಾರಣೆ ತಮ್ಮ ನೇತೃತ್ವದಲ್ಲಿ ನಡೆಯಬೇಕು. ಕರ್ನಾಟಕದ ಹೊರಗೆ ಬೇರೆ ರಾಜ್ಯದ ನ್ಯಾಯಾಲಯದ ಮುಂದೆ ನನ್ನ ಹೇಳಿಕೆ ನೀಡಲು ಅನುಮತಿ ನೀಡುವ ನಿರ್ದೇಶನ ನೀಡಬೇಕು ಹಾಗೂ ಆ ಮೂಲಕ ನನಗೆ ನ್ಯಾಯ ಒದಗಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಯುವತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಎಸ್ಐಟಿಗೆ ಸಡ್ಡು ಹೊಡೆದ CD ಲೇಡಿ.. ಬಿಡುಗಡೆಯಾಯ್ತು ಮತ್ತೊಂದು ವಿಡಿಯೋ! ಪೊಲೀಸ್ ಕಮಿಷನರ್ ವಿರುದ್ಧ ಭಾರಿ ಆರೋಪ
ಇದನ್ನೂ ಓದಿ: ರಮೇಶ್ ಜಾರಕಿಹೊಳಿ CD ಪ್ರಕರಣ: ವಿಡಿಯೋದಲ್ಲಿದ್ದ ವಾಯ್ಸ್ ಸ್ಯಾಂಪಲ್ FSLಗೆ ಶಿಫ್ಟ್
Published On - 8:47 pm, Mon, 29 March 21