ಹಿಂದುಳಿದ, ದಲಿತ ನಾಯಕರನ್ನು ತುಳಿಯಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ -ಪ್ರಸನ್ನಾನಂದಪುರಿ ಸ್ವಾಮೀಜಿ ಆರೋಪ

ಇತಿಹಾಸದುದ್ದಕ್ಕೂ‌ ನೋಡಿಕೊಂಡು ಬಂದಿದ್ದೇವೆ. ಹಿಂದುಳಿದ ಮತ್ತು ದಲಿತ ನಾಯಕರನ್ನು ತುಳಿಯಲು ಯತ್ನ ನಡೆಯುತ್ತಿದೆ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಆರೋಪಿಸಿದರು.

ಹಿಂದುಳಿದ, ದಲಿತ ನಾಯಕರನ್ನು ತುಳಿಯಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ -ಪ್ರಸನ್ನಾನಂದಪುರಿ ಸ್ವಾಮೀಜಿ ಆರೋಪ
ಪ್ರಸನ್ನಾನಂದಪುರಿ ಶ್ರೀಗಳು
Follow us
KUSHAL V
|

Updated on:Mar 29, 2021 | 10:10 PM

ಬೆಳಗಾವಿ: ನೋವಿನಲ್ಲಿರುವ ಸಂತ್ರಸ್ತೆ ಕುಟುಂಬಕ್ಕೆ ಧೈರ್ಯ ಹೇಳಿದೆ ಎಂದು ಸಿಡಿ ಲೇಡಿಯ ಕುಟುಂಬದವರನ್ನ ಭೇಟಿಯಾದ ಬಳಿಕ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಶ್ರೀ ಹೇಳಿದರು. ಸಂತ್ರಸ್ತೆ ಕುಟುಂಬಕ್ಕೆ ಸಾಂತ್ವನ ಹೇಳಲು ಭೇಟಿಯಾಗಿದ್ದೆ. ಎಸ್‌ಐಟಿ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ. ಜಡ್ಜ್‌ ಮುಂದೆ ಹಾಜರು ಪಡಿಸುವ ಮೊದಲು ಕೌನ್ಸಲಿಂಗ್ ಅತ್ಯಗತ್ಯ. ಒತ್ತಡದಲ್ಲಿರುವ ಯುವತಿಗೆ ಕೌನ್ಸಲಿಂಗ್ ಮಾಡಿಸಬೇಕು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳು ಹೇಳಿದರು.

‘ದಲಿತ ನಾಯಕರನ್ನು ತುಳಿಯಲು ವ್ಯವಸ್ಥಿತ ಷಡ್ಯಂತ್ರ’ ಇತಿಹಾಸದುದ್ದಕ್ಕೂ‌ ನೋಡಿಕೊಂಡು ಬಂದಿದ್ದೇವೆ. ಹಿಂದುಳಿದ ಮತ್ತು ದಲಿತ ನಾಯಕರನ್ನು ತುಳಿಯಲು ಯತ್ನ ನಡೆಯುತ್ತಿದೆ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಆರೋಪಿಸಿದರು. ಇದೊಂದು ರಾಜಕೀಯ ಷಡ್ಯಂತ್ರ ಎಂದು ಹೇಳಿದ್ದೇನೆ. ದಲಿತ ನಾಯಕರನ್ನು ತುಳಿಯಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಹಿಂದೆಯೂ ನಡೆದಿದೆ, ಮುಂದೂ ಷಡ್ಯಂತ್ರ ನಡೆಯುವ ಸಾಧ್ಯತೆಯಿದೆ ಎಂದು ಹೇಳಿದರು. ಹಿಂದುಳಿದ ನಾಯಕರ ತೇಜೋವಧೆ ನಡೆಯುತ್ತಲಿದೆ ಎಂದು ಸಹ ಹೇಳಿದರು.

‘ಸಂತ್ರಸ್ತ ಯುವತಿ ಕುಟುಂಬದ ಜೊತೆಗೆ ನಾವು ಇರುತ್ತೇವೆ’ ಸಂತ್ರಸ್ತ ಯುವತಿ ಕುಟುಂಬದ ಜೊತೆಗೆ ನಾವು ಇರುತ್ತೇವೆ ಎಂದು ಕುಟುಂಬದ ಭೇಟಿ ಬಳಿಕ ಪ್ರಸನ್ನಾನಂದಪುರಿ ಶ್ರೀ ಹೇಳಿದರು. ನಮ್ಮ ಮಗಳು ಕಿಡ್ನ್ಯಾಪ್ ಆಗಿದ್ದಾರೆಂದು ಆಕೆ ತಂದೆ ಹೇಳಿದ್ದಾರೆ. ನಮ್ಮ ಮಗಳು ಒತ್ತಡದಲ್ಲಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಮಗಳನ್ನು ಕಳುಹಿಸಿಕೊಡಿ ಎಂದು ಹೇಳುತ್ತಿದ್ದಾರೆ. ಸಂತ್ರಸ್ತ ಯುವತಿ ಕುಟುಂಬವೇ ಈಗ ನೋವಿನಲ್ಲಿದೆ. ಕುಟುಂಬಸ್ಥರ ಬಳಿ ಸಂತ್ರಸ್ತ ಯುವತಿ ಮೊದಲು ಬರಲಿ. ಯುವತಿ ಕುಟುಂಬದ ಜೊತೆ ವಾಲ್ಮೀಕಿ ಸಮಾಜ ಇರುತ್ತೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಗಳು ಆಶ್ವಾಸನೆ ನೀಡಿದರು.

ಇದನ್ನೂ ಓದಿ: ಸಿಡಿ ಲೇಡಿ ಪೋಷಕರ ನಿವಾಸಕ್ಕೆ ವಾಲ್ಮೀಕಿ ಪೀಠದ ಜಗದ್ಗುರು ಪ್ರಸನ್ನಾನಂದಪುರಿ ಶ್ರೀ ಭೇಟಿ

Published On - 9:36 pm, Mon, 29 March 21