ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ದೂರು ನೀಡಿದ ಜೆಡಿಎಸ್

|

Updated on: Apr 09, 2023 | 5:48 PM

ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಆಡಿಯೋ ವೈರಲ್ ಆಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಲ್ಲದೆ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಈ ಬಗ್ಗೆ ಶಾಸಕರ ವಿರುದ್ಧ ಜೆಡಿಎಸ್ ದೂರು ದಾಖಲಿಸಿದೆ.

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ದೂರು ನೀಡಿದ ಜೆಡಿಎಸ್
ರಾಯಚೂರು ನಗರ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ (ಎಡಚಿತ್ರ)
Follow us on

ರಾಯಚೂರು: ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ರಾಯಚೂರು ನಗರ ಕ್ಷೇತ್ರದ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ (Dr. Shivaraj Patil) ವಿರುದ್ಧ ಜೆಡಿಎಸ್ (JDS) ದೂರು ನೀಡಿದೆ. ಶಾಸಕರದ್ದು ಎನ್ನಲಾಗಿರುವ ವೈರಲ್ ಆಡಿಯೋ ಆಧರಿಸಿ ರಾಯಚೂರು ನಗರದ ಪಶ್ಚಿಮ ಠಾಣೆಗೆ ಜೆಡಿಎಸ್ ದೂರು ನೀಡಿದೆ. ಅಲ್ಲದೆ, ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತೆ ಪೋಸ್ಟ್ ಮಾಡಿದ್ದ ಆರೋಪದಡಿ ಎಫ್​ಐಆರ್ ದಾಖಲಿಸಿ ನಟ ಚೇತನ್ ಅಹಿಂಸಾ (Chetan Ahimsa) ಅವರನ್ನು ಬಂಧಿಸಲಾಗಿತ್ತು. ಅದೇ ರೀತಿ ಶಾಸಕ ಶಿವರಾಜ್ ಪಾಟೀಲ್​ ವಿರುದ್ಧ ಎಫ್​ಐಆರ್ ದಾಖಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಜೆಡಿಎಸ್ ಮನವಿ ಮಾಡಿದೆ.

ಚುನಾವಣೆ ಸಮೀಪದಲ್ಲಿರುವಾಗಲೇ ವೈರಲ್ ಆದ ವಿಡಿಯೋದಲ್ಲಿ ಏನಿದೆ? ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಶೋಕ ಜೈನ್ ಮತ್ತು ಶಿವರಾಜ ಪಾಟೀಲ್ ನಡುವೆ ನಡೆದ ಸಂಭಾಷಣೆ ಎಂದು ಹೇಳಲಾಗುತ್ತಿದೆ. ಯಾವ ಮೋದಿಯಿಲ್ಲ,ಪಾದಿಯಿಲ್ಲ.. ನಾನೊಬ್ಬನೇ ಶಿವರಾಜ್ ಪಾಟೀಲ್.. ಯಾವ ಬದನೆಕಾಯಿ ಮಾತು ನಾನು ಕೇಳಲ್ಲ.. ಮೋದಿ ರೈಟ್ ಹ್ಯಾಂಡ್‌ ಗೆ ನಾನು ಕೇಳಲ್ಲ. ನಾನೇ ಸಿಂಗಲ್ ಆರ್ಮಿ, ನನಗೆ ರೈಟ್ ಇಲ್ಲ, ಲೆಫ್ಟ್ ಇಲ್ಲ. ನನ್ನ ಕೈ ನನ್ನ ಕಾಲು ನಾನೇ ಮೋದಿ, ನಾನೇ ಟ್ರಂಪ್.. ಯಾವನ ಬದನೆಕಾಯಿ ಮಾತು ಸಹ ನಾನು‌ ಕೇಳಲ್ಲ. ನನ್ನ ಮುಂದೆ ಹೇಳಿದ್ರೆ ಏನೂ ನಡೆಯಂಗಿಲ್ಲ ಎಂದು ಹೇಳುವುದನ್ನು ಆಡಿಯೋದಲ್ಲಿ ಕೇಳಿಸಬಹುದು.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಹೇಗಿದ್ರು ಸಿಟಿ ರವಿನೇ ಗೆಲ್ಲೋದು ಸರ್..!: ಕಾಂಗ್ರೆಸ್​ ನಾಯಕನ ಆಡಿಯೋ ವೈರಲ್​​: ಪಕ್ಷದಿಂದ ಉಚ್ಚಾಟನೆ

ಅಲ್ಲದೆ, ಮೊದಲಿನಿಂದಲೂ ನನ್ನ ಕ್ಷೇತ್ರಕ್ಕೆ ‌ಲೀಡರ್ ಗಳಿಗೆ ಬಾ ಅಂತೀನಾ..? ನನಗೆ ಯಾರೂ‌ ಇಲ್ಲ.. ನಾನು‌ ಸಿಂಗಲ್ ಆರ್ಮಿ. ಎಲೆಕ್ಷನ್​ನಲ್ಲಿ ಸೋತರು ಚಿಂತೆಯಿಲ್ಲ, ಗೆದ್ರು ಚಿಂತೆಯಿಲ್ಲ, ಮಲಗಿದರು ಚಿಂತೆಯಿಲ್ಲ.. ಜಗತ್ತಿನಲ್ಲಿ ಚಿಂತೆಯಿಲ್ಲದ ಪುರುಷ ಅಂದ್ರೆ ಅದು ಶಿವರಾಜ್ ಪಾಟೀಲ್. ನಾನು ದೇವರು ಇದ್ದಂಗೆ, ಅದಕ್ಕೆ ನಮ್ಮ ಹುಡುಗರಿಗೆ ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ ಹೇಳ್ತಿನಿ.. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ.. ನಾನೇ ದೈವ ಬರಿತೀನಿ ಎಂದು ಮಾತುಗಳನ್ನಾಡಿರುವ ಆಡಿಯೋ ಇದೀಗ ವೈರಲ್ ಆಗಿತ್ತು. ಇದೇ ವಿಡಿಯೋದಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ಶ್ರೀರಾಮುಲು ಬಗ್ಗೆಯೂ ಉಡಾಫೆ ಮಾತುಗಳನ್ನಾಡುವುದನ್ನು ಕೇಳಿಸಬಹುದು.

ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಪಕ್ಷದೊಳಗೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಆಡಿಯೋ ಶಾಸಕರದ್ದೇ ಅಥವಾ ಬೇರೆಯವರದ್ದೇ ಎಂಬುದಕ್ಕೆ ಯಾವುದೇ ಕ್ಲಾರಿಟಿ ಸಿಕ್ಕಿಲ್ಲ. ಆದರೆ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದ ಶಾಸಕ ಶಿವರಾಜ್ ಪಾಟೀಲ್, ಆ ಆಡಿಯೋವನ್ನು ತಿರುಚಲಾಗಿದೆ. ಆರಂಭದಲ್ಲಿ ಕೇಳಿಬರುವ ಧ್ವನಿ ನನ್ನದು. ನಂತರ ಬೇರೆಯವರು ಮಾತನಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ತುಮಕೂರು ಎಸ್​ಪಿ ಅವರಿಗೆ ದೂರು ನೀಡಿದ್ದಾಗಿ ಹೇಳಿಕೆ ನೀಡಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Sun, 9 April 23