Loading video

ಇದ್ದಿದ್ದೆಲ್ಲವನ್ನು ಅಲ್ಪಸಂಖ್ಯಾತರಿಗೆ ನೀಡಿದರೆ ಉಳಿದ ಸಮುದಾಯಗಳ ಪಾಡೇನು? ನಿಖಿಲ್ ಕುಮಾರಸ್ವಾಮಿ

|

Updated on: Mar 08, 2025 | 3:12 PM

ಸಾಲ ಮಾಡಲೇಬೇಕಾಗುತ್ತದೆ ಅದರಲ್ಲಿ ತಪ್ಪೇನೂ ಇಲ್ಲ, ಕೇಂದ್ರ ಸರ್ಕಾರವೂ ಸಾಲ ಮಾಡುತ್ತದೆ, ಆದರೆ ಸಾಲ ಯಾವ ಕಾರಣಕ್ಕಾಗಿ ಮಾಡುತ್ತಿದ್ದೀರಿ ಅನ್ನೋದು ಗಣನೆಗೆ ಬರುತ್ತದೆ, ಹಿಂದಿನ ಸಲ ಮಾಡಿದ ಸಾಲವನ್ನು ತೀರಿಸಲು ಹೊಸ ಸಾಲ ಮಾಡಿದರೆ ಅದಕ್ಕೆ ಅರ್ಥವಿಲ್ಲ, ನಮ್ಮ ರಾಜ್ಯದ ವಿತ್ತೀಯ ಕೊರತೆ ₹ 90,000 ಕೋಟಿಗಳಷ್ಟಿದೆ ಎಂದು ನಿಖಿಲ್ ಹೇಳಿದರು.

ಬೆಂಗಳೂರು, ಮಾರ್ಚ್​ 8 : ಅಲ್ಪಸಂಖ್ಯಾತ ಸಮುದಾಯಕ್ಕೆ (minority community) ಸರ್ಕಾರ ಅನುದಾನ ನೀಡಿದರೆ ಜೆಡಿಎಸ್ ಪಕ್ಷದ ಅಭ್ಯಂತರವೇನೂ ಇಲ್ಲ, ಆದರೆ ಇದಿದ್ದೆಲ್ಲವನ್ನು ಅವರಿಗೆ ಕೊಟ್ಟರೆ ಉಳಿದ ಸಮುದಾಯಗಳ ಗತಿಯೇನು ಎಂದು ಪಕ್ಷದ ಯುವನಾಯಕ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು. ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನೋಡಿದರೆ ಅವರು ರಂಜಾನ್ ಹಬ್ಬದ ಬಿರಿಯಾನಿ ಈಗಲೇ ಮುಸಲ್ಮಾನರಿಗೆ ನೀಡಿದ್ದಾರೆ ಮತ್ತು ಉಳಿದವರಿಗೆ ನೆಕ್ಕಲು ಉಪ್ಪಿನಕಾಯಿ ಕೊಟ್ಟಿದ್ದಾರೆ ಎಂದು ನಿಖಿಲ್ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Budget: ಸಿದ್ದರಾಮಯ್ಯ ಬಜೆಟ್ ಮಂಡನೆಗೆ ತೆಗೆದುಕೊಂಡ ಸಮಯ ಎಷ್ಟು? ಬಜೆಟ್ ಗಾತ್ರ ಎಷ್ಟು? ಇಲ್ಲಿದೆ ಮಾಹಿತಿ 

Published on: Mar 08, 2025 02:34 PM