ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನ ನೆಲೆಯನ್ನು ಕಳೆದುಕೊಳ್ಳುತ್ತದೆ: ಶಾಸಕ ಯತೀಂದ್ರ ಸಿದ್ದರಾಮಯ್ಯ

| Updated By: preethi shettigar

Updated on: Jul 02, 2021 | 10:55 AM

ಪಾಪದ ಕೊಡ ತುಂಬುತ್ತದೆ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಮತ್ತೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ ಅವರು ಯಾವುದೇ ಪಾಪ ಮಾಡಿಲ್ಲ ಎಂದು ತಂದೆ ಪರ ಮಾತನಾಡಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನ ನೆಲೆಯನ್ನು ಕಳೆದುಕೊಳ್ಳುತ್ತದೆ: ಶಾಸಕ ಯತೀಂದ್ರ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ
Follow us on

ಮೈಸೂರು: ಸಿದ್ದರಾಮಯ್ಯ ತಾವಾಗಿಯೇ ಜೆಡಿಎಸ್ ಪಕ್ಷವನ್ನು ಬಿಡಲಿಲ್ಲ. ಜೆಡಿಎಸ್​ನಲ್ಲಿ ಬೆಳೆಯುತ್ತಿರುವ ನಾಯಕರನ್ನು ಮೊಟಕುಗೊಳಿಸಲು ಉಚ್ಚಾಟನೆ ಮಾಡಲಾಗಿತ್ತು. ಹೀಗಾಗಿ ಜೆಡಿಎಸ್​ನಿಂದ ಹೊರಬಂದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಯಿತು. ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನ ನೆಲೆಯನ್ನು ಕಳೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ವರುಣ ಕ್ಷೇತ್ರದ ಸೋಮೇಶ್ವರ ಗ್ರಾಮದಲ್ಲಿ ಹೇಳಿಕೆ ನೀಡಿದ್ದಾರೆ.

ಪಾಪದ ಕೊಡ ತುಂಬುತ್ತದೆ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಮತ್ತೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ ಅವರು ಯಾವುದೇ ಪಾಪ ಮಾಡಿಲ್ಲ ಎಂದು ತಂದೆ ಪರ ಮಾತನಾಡಿದ್ದಾರೆ.

ಈ ಹಿಂದೆ ಕೂಡ ಪರೋಕ್ಷವಾಗಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಜೆಡಿಎಸ್​ ವಿರುದ್ಧ ಅಸಮಧಾನ ಹೊರಹಾಕಿದ್ದರು
ಬಸವಕಲ್ಯಾಣ ಕ್ಷೇತ್ರದ ಬೈ ಎಲೆಕ್ಷನ್ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಗೆಲ್ಲುವ ಎಲ್ಲ ಅವಕಾಶವಿತ್ತು. ಆದರೆ ಜಾತ್ಯತೀತ ಮುಖವಾಡ ಧರಿಸಿರುವ ಕೋಮುವಾದಿಗಳ ರಾಜಕೀಯ ಕುತಂತ್ರದಿಂದ ಕಾಂಗ್ರೆಸ್ ಹಿನ್ನಡೆಯಾಗಿದೆ. ನಕಲಿ ಜಾತ್ಯತೀತರ ಬಗ್ಗೆ ಮುಂದೆ ಜಾಗೃತರಾಗಿರಬೇಕೆಂದು ಜೆಡಿಎಸ್ ಬಗ್ಗೆ ಪರೋಕ್ಷವಾಗಿ ಶಾಸಕ ಯತೀಂದ್ರ ಆಕ್ರೋಶ ಹೊರಹಾಕಿದ್ದರು.

ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಿ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಹಾಗೂ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದಗಳು ಮತ್ತು ಜಯ ಗಳಿಸಿದ ಬಸನಗೌಡ ತುರವಿಹಾಳ ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ:
ಸಿದ್ದರಾಮಯ್ಯ ರಾಜಕೀಯ ಹುಲಿ, ರಾಜ್ಯದ ಹುಲಿ, ಮೈಸೂರು ಹುಲಿ ಘೋಷಣೆ | Siddaramaiah

ಜೆಡಿಎಸ್​ ಕುಟುಂಬ ರಾಕ್ಷಸ ರಾಜಕಾರಣ ಬಿಜೆಪಿಯಲ್ಲೂ ಇದೆ: ಅರುಣ್ ಸಿಂಗ್ ಎದುರು ಗುಡುಗಿದ ಹೆಚ್​ ವಿಶ್ವನಾಥ್​ ಏನೆಲ್ಲ ಹೇಳಿದ್ರು?

ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಗೆಲ್ಲುವ ಎಲ್ಲ ಅವಕಾಶವಿತ್ತು, ರಾಜಕೀಯ ಕುತಂತ್ರದಿಂದ ಹಿನ್ನಡೆಯಾಗಿದೆ; ಯತೀಂದ್ರ ಸಿದ್ದರಾಮಯ್ಯ ಟ್ವೀಟ್