ದಾವಣಗೆರೆ: ಲಸಿಕೆ ಹಾಕಿಸಿಕೊಳ್ಳಿ ಗಿಡಗಳನ್ನು ಉಚಿತವಾಗಿ ಪಡೆಯಿರಿ ಕಾರ್ಯಕ್ರಮಕ್ಕೆ ಚಾಲನೆ

ಲಸಿಕೆ ಪಡೆಯಲು ಹಿಂದೇಟು ಹಾಕುವರಿಗೆ ಮನವೊಲಿಸಿ ಲಸಿಕೆ ಹಾಕಿಸುತ್ತಿದ್ದು, ಅದರ ಜತೆಗೆ ಹೊಂಗೆ, ಹುಣಸೆ, ಬೇವು, ಹಲಸು ಸೇರಿದಂತೆ ಹಲವು ಗಿಡಗಳ ವಿತರಣೆ ಮಾಡಲಾಗುತ್ತಿದೆ. ಸದ್ಯ ಗ್ರಾಮ ಪಂಚಾಯತಿ ಸದಸ್ಯರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ದಾವಣಗೆರೆ: ಲಸಿಕೆ ಹಾಕಿಸಿಕೊಳ್ಳಿ ಗಿಡಗಳನ್ನು ಉಚಿತವಾಗಿ ಪಡೆಯಿರಿ ಕಾರ್ಯಕ್ರಮಕ್ಕೆ ಚಾಲನೆ
ಲಸಿಕೆ ಹಾಕಿಸಿಕೊಳ್ಳಿ ಗಿಡಗಳನ್ನು ಉಚಿತವಾಗಿ ಪಡೆಯಿರಿ ಕಾರ್ಯಕ್ರಮಕ್ಕೆ ಚಾಲನೆ
Follow us
TV9 Web
| Updated By: preethi shettigar

Updated on: Jul 02, 2021 | 11:33 AM

ದಾವಣಗೆರೆ: ಲಸಿಕೆ ಪಡೆಯಿರಿ ಗಿಡಗಳನ್ನು ಉಚಿತವಾಗಿ ಪಡೆಯಿರಿ ಎನ್ನುವ ವಿನೂತನ ಕಾರ್ಯಕ್ರಮಕ್ಕೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ಚಾಲನೆ ನೀಡಿದ್ದಾರೆ. ಲಸಿಕೆ ಪಡೆದವರಿಗೆ ಒಂದೊಂದು ಗಿಡ ನೀಡಿ ಪ್ರೋತ್ಸಾಹ ನೀಡಿದ್ದು, ಈಗಾಗಲೇ 500 ಕ್ಕೂ ಹೆಚ್ಚು ಜನರಿಗೆ ಗ್ರಾಮ ಪಂಚಾಯತಿ ಸದಸ್ಯರು ಗಿಡಗಳನ್ನು ನೀಡಿದ್ದಾರೆ.

ಲಸಿಕೆ ಪಡೆಯಲು ಹಿಂದೇಟು ಹಾಕುವರಿಗೆ ಮನವೊಲಿಸಿ ಲಸಿಕೆ ಹಾಕಿಸುತ್ತಿದ್ದು, ಅದರ ಜತೆಗೆ ಹೊಂಗೆ, ಹುಣಸೆ, ಬೇವು, ಹಲಸು ಸೇರಿದಂತೆ ಹಲವು ಗಿಡಗಳ ವಿತರಣೆ ಮಾಡಲಾಗುತ್ತಿದೆ. ಸದ್ಯ ಗ್ರಾಮ ಪಂಚಾಯತಿ ಸದಸ್ಯರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಕೊವಿಡ್​ನಿಂದ ಗುಣಮುಖರಾದವರಿಂದ ಗಿಡ ನೆಟ್ಟು ಪರಿಸರ ಸಂರಕ್ಷಣೆ ಶಪಥ ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹಸಿರನ್ನು ಉಳಿಸುವ ಉದ್ದೇಶದಿಂದ ಈ ಆಚರಣೆಯನ್ನು ಚಾಲ್ತಿಗೆ ತರಲಾಗಿದೆ. ಸಾಲು ಮರದ ತಿಮ್ಮಕ್ಕನಂತಹ ಅದೆಷ್ಟೋ ಪರಿಸರ ಪ್ರೇಮಿಗಳು ಇದಕ್ಕೆ ಸ್ಪೂರ್ತಿ. ಆದರೆ ಕರ್ನಾಟಕದಲ್ಲಿ ಕೊವಿಡ್ ಸೋಂಕು ಕಡಿಮೆಯಾಗದ ಕಾರಣ ಜೂನ್ 5ರಂದು ರಾಜ್ಯ ಸರ್ಕಾರದ ವತಿಯಿಂದ ಆಚರಿಸಬೇಕಿದ್ದ, ವಿಶ್ವ ಪರಿಸರ ದಿನಾಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ ಈ ಬಾರಿಯ ವನಮಹೋತ್ಸವ ದಿನವನ್ನು ಸಾಧ್ಯವಾದಷ್ಟು ಮಟ್ಟಿಗೆ ಸೂರ್ತಿದಾಯಕವನ್ನಾಗಿ ಮಾಡುವ ನಿಟ್ಟಿನಲ್ಲಿ ಸಪ್ತಗಿರಿ ಆಸ್ಪತ್ರೆ ವೈದ್ಯರುಗಳು ಕೊವಿಡ್​ನಿಂದ ಗುಣಮುಖರಾದ ಪೇಷೆಂಟ್​ಗಳಿಂದ ಗಿಡ ನೆಡುವ ಮೂಲಕ ಹಾಗೂ ಗಿಡಗಳನ್ನು ನೀಡಿ ಪರಿಸರ ಉಳಿಸಿ ಪರಿಸರ ಬೆಳೆಸಿ ಎಂಬ ವಿನೂತನ ಜಾಗೃತಿಯನ್ನು ಮೂಡಿಸಿದ್ದರು.

ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಉತ್ತಮ ಆಮ್ಲಜನಕ ಸಿಗಲಿ ಎಂಬ ಸದುದ್ದೇಶದಿಂದ ಸಪ್ತಗಿರಿ ಆಸ್ಪತ್ರೆಯ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಎಂದರೆ ಕೊವಿಡ್ ಸೋಂಕಿನಿಂದ ಬಳಲಿ ಆಮ್ಲಜನಕದ ನೆರವಿನಿಂದ ಗುಣಮುಖರಾದವರು ಗಿಡ ನೆಟ್ಟು ಧನ್ಯತಾಭಾವ ಮೆರೆದರು. ಜತೆಗ ಪರಿಸರ ಸಂಕ್ಷರಣೆಗೆ ಶಪಥ ಮಾಡಿದರು.

ಕೊವಿಡ್ ಮಹಾಮಾರಿಯಿಂದ ಇದೀಗ ಪ್ರಾಣವಾಯುವಿನ ಮಹತ್ವದ ಅರಿವಾಗಿದ್ದು, ನಾವು ಇನ್ನಷ್ಟು ಗಿಡಗಳನ್ನು ನೆಟ್ಟು ಸೂಕ್ತ ರೀತಿಯಲ್ಲಿ ಪರಿಸರ ಸಂರಕ್ಷಿಸಬೇಕು. ಎಲ್ಲರ ಸಹಕಾರದಿಂದ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದು ಸೋಂಕಿನಿಂದ ಗುಣಮುಖರಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು.

ಸಪ್ತಗಿರಿ ಆಸ್ಪತ್ರೆಯ ಪ್ರಾಂಶುಪಾಲರಾದ ತಜ್ಞ ವೈದ್ಯೆ ಡಾ .ಜಯಂತಿ ಈ ಸಂದರ್ಭದಲ್ಲಿ ಮಾತನಾಡಿದ್ದು, ಬೆಂಗಳೂರಿನ ಜನ ಸಂಖ್ಯೆಗೆ ಪ್ರತಿಯೊಬ್ಬ ಮನುಷ್ಯನಿಗೆ ಕನಿಷ್ಠ ಏಳು ಮರಗಳು ಇರಬೇಕಾಗಿತ್ತು. ಆದರೆ ಕೇವಲ ಒಬ್ಬ ವ್ಯಕ್ತಿಗೆ ಒಂದು ಮರ ಮಾತ್ರ ಇದೆ. ನೀಲಗಿರಿ, ಅಕೇಶಿಯಾದಂತಹ ಮರಗಳು ಪರಿಸರಕ್ಕೆ ಮಾರಕವಾಗಿದ್ದು, ವಾತಾವರಣವನ್ನು ತಂಪಾಗಿಸುವ, ಹೊಂಗೆ, ಹಣ್ಣು ಬಿಡುವ ವಿವಿಧ ಜಾತಿಯ ಮರಗಳನ್ನು ಬೆಳೆಸಬೇಕು. ಇದರಿಂದ ಪ್ರಾಣಿ ಪಕ್ಷಿಗಳ ಸಂತತಿಯನ್ನು ಸಲಹಲು ಅನುಕೂಲವಾಗಲಿದೆ ಎಂದು ಹೇಳಿದರು.

ಕೊವಿಡ್ ಸಂಕಷ್ಟ ಎದುರಾದ ನಂತರ ನಮಗೆ ಔಷಧೀಯ ಸಸ್ಯಗಳ ಮಹತ್ವದ ಅರಿವಾಗುತ್ತಿದೆ. ವೈವಿದ್ಯಮಯ ಸಸ್ಯ ಸಂಕುಲ ಜೀವ ವೈವಿದ್ಯತೆಯ ರಕ್ಷಣೆಗೆ ಸಹಕಾರಿಯಾಗಲಿದೆ. ಪ್ರತಿಯೊಂದು ಆಸ್ಪತ್ರೆ, ಪಂಚಾಯತಿ ಕಚೇರಿಗಳು, ಶಾಲೆಗಳಲ್ಲಿ ಕಿರು ಅರಣ್ಯ ಮಾದರಿಯಲ್ಲಿ ಗಿಡ, ಮರಗಳನ್ನು ನೆಡುವ ಪರಿಸರ ಮುಖಿ ಕೆಲಸ ಆಗಬೇಕು ಎಂದು ತಜ್ಞ ವೈದ್ಯ ಗಿರೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಕೊಟ್ಟು ಮುಗಿಯಲು ಎಷ್ಟು ದಿನ ಬೇಕು?-ಇಲ್ಲಿದೆ ನೋಡಿ ಒಂದು ಲೆಕ್ಕಾಚಾರ

ಕೊಪ್ಪಳದಲ್ಲಿ ಹಸಿರು ಮಾನವೀಯತೆ; ರಸ್ತೆ ಬದಿಯಲ್ಲಿ ಒಣಗಿ ಹೋಗುತ್ತಿದ್ದ ಗಿಡಗಳಿಗೆ ನೀರುಣಿಸಿದ ದ್ವಾರಕಾಮಯಿ ಟ್ರಸ್ಟ್ ಸದಸ್ಯರು

Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್