AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರಮಂದಿರದಲ್ಲಿ ಬ್ಲಾಕ್ ಬಸ್ಟರ್ ಆದ ‘ಕುಬೇರ’ ಬಂದೇ ಬಿಟ್ಟಿತು ಒಟಿಟಿಗೆ

Kubera movie: ಧನುಶ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಕುಬೇರ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. 100 ಕೋಟಿಗೂ ಹೆಚ್ಚು ಮೊತ್ತದ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಒಟಿಟಿಗೆ ಬರುವುದು ಯಾವಾಗ ಎಂದು ಸಿನಿಮಾ ಪ್ರೇಮಿಗಳು ಕಾತರರಾಗಿದ್ದರು. ಇದೀಗ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

ಚಿತ್ರಮಂದಿರದಲ್ಲಿ ಬ್ಲಾಕ್ ಬಸ್ಟರ್ ಆದ ‘ಕುಬೇರ’ ಬಂದೇ ಬಿಟ್ಟಿತು ಒಟಿಟಿಗೆ
Kubera
ಮಂಜುನಾಥ ಸಿ.
|

Updated on:Jul 11, 2025 | 4:01 PM

Share

ಧನುಶ್ (Dhanush), ರಶ್ಮಿಕಾ ಮಂದಣ್ಣ (Rashmika MandannaKu) ನಟಿಸಿರುವ ‘ಕುಬೇರ’ ಸಿನಿಮಾ ಕೆಲವೇ ವಾರಗಳ ಹಿಂದೆ ಚಿತ್ರಮಂದಿರಗಳಿಗೆ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಯ್ತು. ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದ ಈ ಸಿನಿಮಾನಲ್ಲಿ ನಾಗಾರ್ಜುನ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದ ಕತೆ, ಸಂಗೀತ, ನಟರುಗಳ ನಟನೆ ಎಲ್ಲವೂ ಜನರಿಗೆ ಬಹಳ ಇಷ್ಟವಾಗಿತ್ತು. ಫ್ಯಾಮಿಲಿ ಆಡಿಯೆನ್ಸ್ ಸಹ ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿದರು. ಇದೇ ಕಾರಣಕ್ಕೆ ಈ ಸಿನಿಮಾ 100 ಕೋಟಿಗೂ ಹೆಚ್ಚು ಕಲೆಕ್ಷನ್ ಸಹ ಮಾಡಿತು. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ.

ಇದೀಗ ‘ಕುಬೇರ’ ಸಿನಿಮಾ ಒಟಿಟಿಗೆ ಬರುತ್ತಿದ್ದು, ಒಟಿಟಿ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ‘ಕುಬೇರ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಜುಲೈ 18 ರಂದು ಬಿಡುಗಡೆ ಆಗಲಿದೆ. ಭಾರತ ಮಾತ್ರವಲ್ಲದೆ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ಒಟಿಟಿಯಲ್ಲಿ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಅಮೆಜಾನ್ ಪ್ರೈಂ ಸಹ ‘ಕುಬೇರ’ ಸಿನಿಮಾವನ್ನು ಚೆನ್ನಾಗಿ ಪ್ರಚಾರ ಮಾಡುತ್ತಿದೆ.

‘ಕುಬೇರ’ ಸಿನಿಮಾವು ಚಿತ್ರಮಂದಿರದಲ್ಲಿ ಬಿಡುಗಡೆ ಆಗುವ ಮುಂಚೆಯೇ ಅಮೆಜಾನ್ ಪ್ರೈಂ ಜೊತೆಗೆ ದೊಡ್ಡ ಮೊತ್ತದ ಡೀಲ್​ಗೆ ಸಹಿ ಹಾಕಿತ್ತು. ಬರೋಬ್ಬರಿ 50 ಕೋಟಿ ರೂಪಾಯಿ ಹಣ ನೀಡಿ ‘ಕುಬೇರ’ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಂ ಖರೀದಿ ಮಾಡಿತ್ತು. ಅಮೆಜಾನ್ ಪ್ರೈಂನ ಮುನ್ನೋಟದಂತೆ ಸಿನಿಮಾ ದೊಡ್ಡ ಹಿಟ್ ಆಗಿದ್ದು, ಒಟಿಟಿಯಲ್ಲಿಯೂ ಸಹ ‘ಕುಬೇರ’ ಸಿನಿಮಾ ಸೂಪರ್ ಹಿಟ್ ಆಗುವ ಎಲ್ಲ ಭರವಸೆಗಳನ್ನು ಮೂಡಿಸಿದೆ.

ಇದನ್ನೂ ಓದಿ:‘ಕುಬೇರ’ ನಿರಾಕರಿಸಿ ಹಿಟ್ ಮಿಸ್ ಮಾಡಿಕೊಂಡ ಫ್ಲಾಪ್ ನಟ ಯಾರು ಗೊತ್ತೆ?

‘ಆನಂದ್’, ‘ಗೋಧಾವರಿ’, ‘ಲೀಡರ್’, ‘ಹ್ಯಾಪಿ ಡೇಸ್’, ‘ಫಿದಾ’ ರೀತಿಯ ಬ್ಲಾಕ್ ಬಸ್ಟರ್ ಕಲ್ಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಶೇಖರ್ ಕಮ್ಮುಲ ಅವರು ಈ ಸಿನಿಮಾ ನಿರ್ದೇಶಿಸಿದ್ದು, ಇದೊಂದು ಸಾಮಾಜಿಕ ಸಂದೇಶ ಹೊಂದಿರುವ ಆದರೆ ಥ್ರಿಲ್ಲರ್ ಗುಣವುಳ್ಳ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಬಡವ ಶ್ರೀಮಂತನ ನಡುವಿನ ಅಂತರ, ಹಣವುಳ್ಳವರ ದುರಾಸೆ, ಬಡವರ ಅಸಹಾಯಕತೆಗಳನ್ನು ತೋರಿಸಲಾಗಿದೆ. ಸಿನಿಮಾನಲ್ಲಿ ಧನುಶ್ ನಟನೆಯನ್ನು ಸಿನಿಮಾ ನೋಡಿದವರೆಲ್ಲ ಕೊಂಡಾಡಿದ್ದಾರೆ. ರಶ್ಮಿಕಾ ಮತ್ತು ನಾಗಾರ್ಜುನ ನಟನೆ ಸಹ ಬಹಳ ಚೆನ್ನಾಗಿದೆಯಂತೆ. ದೇವಿ ಶ್ರೀ ಪ್ರಸಾದ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ರೀ ರೆಕಾರ್ಡಿಂಗ್ ಸಹ ಅವರದ್ದೆ. ಈ ಸಿನಿಮಾದ ನಟನೆಗೆ ಧನುಶ್​ಗೆ ಮತ್ತೊಂದು ರಾಷ್ಟ್ರಪ್ರಶಸ್ತಿ ಸಿಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Fri, 11 July 25

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ