ಕೊಪ್ಪಳದಲ್ಲಿ ಹಸಿರು ಮಾನವೀಯತೆ; ರಸ್ತೆ ಬದಿಯಲ್ಲಿ ಒಣಗಿ ಹೋಗುತ್ತಿದ್ದ ಗಿಡಗಳಿಗೆ ನೀರುಣಿಸಿದ ದ್ವಾರಕಾಮಯಿ ಟ್ರಸ್ಟ್ ಸದಸ್ಯರು

ಪ್ರಾದೇಶಿಕ ವಲಯ ಅರಣ್ಯ ಇಲಾಖೆ, ಕುಷ್ಟಗಿ-ಕೊಪ್ಪಳ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟಿತ್ತು. ಇದೀಗ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ನೆಟ್ಟ ಗಿಡಗಳು ಒಣಗುತ್ತಿವೆ. ದಿನದಿಂದ ದಿನಕ್ಕೆ ಗಿಡಗಳು ಒಣಗುತ್ತಿರುವುದನ್ನು ಕಂಡ ದ್ವಾರಕಾಮಯಿ ಯುವಕರ ತಂಡ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರು ಹಾಕುತ್ತಿದ್ದಾರೆ.

ಕೊಪ್ಪಳದಲ್ಲಿ ಹಸಿರು ಮಾನವೀಯತೆ;  ರಸ್ತೆ ಬದಿಯಲ್ಲಿ ಒಣಗಿ ಹೋಗುತ್ತಿದ್ದ ಗಿಡಗಳಿಗೆ ನೀರುಣಿಸಿದ ದ್ವಾರಕಾಮಯಿ ಟ್ರಸ್ಟ್ ಸದಸ್ಯರು
ಗಿಡಗಳಿಗೆ ನೀರು ಹಾಕುತ್ತಿರುವ ದ್ವಾರಕಾಮಯಿ ಟ್ರಸ್ಟ್ ಯುವಕರು
Follow us
sandhya thejappa
|

Updated on: Apr 08, 2021 | 11:24 AM

ಕೊಪ್ಪಳ:  ಬಿಸಿಲು ನಾಡು ಎಂದು ಹೆಸರಾದ ಪ್ರದೇಶ ಕೊಪ್ಪಳ. ಇಲ್ಲಿ ಗಿಡ, ಮರಗಳನ್ನು ಬೆಳೆಸುವುದು ಸವಾಲಿನ ಕೆಲಸ. ಆದರೆ ರಸ್ತೆ ಬದಿಯಲ್ಲಿ ಗಿಡ ನೆಟ್ಟು, ನೀರು ಉಣಿಸದೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದನ್ನು ಕಂಡ ಯುವಕರ ತಂಡವೊಂದು ರಸ್ತೆ ಬದಿಯಲ್ಲಿ ಗಿಡ ನೆಟ್ಟು, ನೀರು ಉಣಿಸುವ ಮೂಲಕ ಇತರರಿಗೆ ಮಾದರಿಯಾಗಿದೆ. ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಕಳೆದ ವರ್ಷ ರಸ್ತೆ ಬದಿಯಲ್ಲಿ ಗಿಡ ನೆಟ್ಟಿತ್ತು. ಗಿಡ ನೆಟ್ಟು ಸುಮ್ಮನಾದ ಅರಣ್ಯ ಇಲಾಖೆ ಗಿಡಗಳನ್ನು ಪಾಲನೆ- ಪೋಷಣೆ ಮಾಡಲು ಮರೆತು ಬಿಟ್ಟಿದೆ. ಇದಕ್ಕೆ ಅನುದಾನ ಕೊರತೆ ಹಾಗೂ ಸಿಬ್ಬಂದಿಗಳ ಕೊರತೆ ಕಾರಣ ಎನ್ನಲಾಗುತ್ತಿದೆ. ನೆಟ್ಟ ಗಿಡಗಳು ನೀರಿಲ್ಲದ ಕಾರಣ ಒಣಗುತ್ತಿದ್ದವು. ಇದನ್ನು ಕಂಡು ಜಿಲ್ಲೆಯ ದ್ವಾರಕಾಮಯಿ ಟ್ರಸ್ಟ್ ಯುವಕರು ಗಿಡಕ್ಕೆ ನೀರು ಉಣಿಸಲು ಮುಂದಾಗಿದ್ದಾರೆ.

ಪ್ರಾದೇಶಿಕ ವಲಯ ಅರಣ್ಯ ಇಲಾಖೆ, ಕುಷ್ಟಗಿ-ಕೊಪ್ಪಳ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟಿತ್ತು. ಇದೀಗ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ನೆಟ್ಟ ಗಿಡಗಳು ಒಣಗುತ್ತಿವೆ. ದಿನದಿಂದ ದಿನಕ್ಕೆ ಗಿಡಗಳು ಒಣಗುತ್ತಿರುವುದನ್ನು ಕಂಡ ದ್ವಾರಕಾಮಯಿ ಯುವಕರ ತಂಡ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅನುದಾನದ ಕೊರತೆಯಿಂದ ನೀರು ಹಾಕುವುದನ್ನು ನಿಲ್ಲಿಸಿದ್ದಾರೆ. ಸರ್ಕಾರಿಂದ ಬರುತ್ತಿದ್ದ ಅನುದಾನ ಮಾರ್ಚ್ 2020 ಕ್ಕೆ ನಿಂತು ಹೋಗಿದೆ. ಹೀಗಾಗಿ ರಸ್ತೆ ಬದಿ ನೆಟ್ಟ ಗಿಡಗಳು ಬಿಸಿಲಿನ ತಾಪಮಾನಕ್ಕೆ ಒಣಗುತ್ತಿವೆ. ಇದನ್ನು ಕಂಡು ಯುವಕರು ಸ್ವಂತ ಹಣದಿಂದ ಟ್ಯಾಂಕರ್ ಮೂಲಕ ನೀರು ತಂದು ಹಾಕುತ್ತಿದ್ದಾರೆ.

ದ್ವಾರಕಾಮಯಿ ಟ್ರಸ್ಟ್ ಬಗ್ಗೆ  ದ್ವಾರಕಾಮಯಿ ಟ್ರಸ್ಟ್ 2017 ರಲ್ಲಿ ಸ್ಥಾಪನೆ ಮಾಡಲಾಯಿತು. ರಾಜ್ಯದಲ್ಲಿ ತೀವ್ರ ಬರಗಾಲದ ಸನ್ನಿವೇಶ ಇದ್ದ ಕಾರಣ ಯುವಕರು 2017 ರಲ್ಲಿ ಟ್ರಸ್ಟ್ ನಿರ್ಮಾಣ ಮಾಡಿ ಜಾನುವಾರುಗಳಿಗೆ ಮೇವು ವಿತರಣೆ ಮಾಡಿದ್ದರು. ಪರಿಸರ ಹಾಗೂ ಮೂಕ ಪ್ರಾಣಿಗಳಿಗೆ ಸಹಾಯ ಮಾಡುವ ದೃಷ್ಟಿಯಿಂದ ದ್ವಾರಕಾಮಯಿ ಟ್ರಸ್ಟ್ ರಚನೆ ಮಾಡಲಾಯಿತು .ಏಳೆಂಟು ಯುವರಕ ತಂಡ 2017 ರ ಬರಗಾಲದಲ್ಲಿ ಸ್ವಂತ ಹಣದಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವು ವಿತರಣೆ ಮಾಡಿದೆ. ಇದೀಗ ಒಣಗುತ್ತಿರುವ ಗಿಡಗಳಿಗೆ ನೀರು ಉಣಿಸುವ ಕೆಲಸ ಮಾಡುತ್ತಿದೆ.

ಸ್ವಂತ ಹಣ, ಬಾಡಿಗೆ ಟ್ಯಾಂಕರ್ ತಂದು ನೀರು ಹಾಕುತ್ತಿರುವ ಯುವಕರ ತಂಡ ದ್ವಾರಕಾಮಯಿ ಟ್ರಸ್ಟ್ ಯುವಕರು ಈಗಾಗಲೇ ಕೊಪ್ಪಳ ರಸ್ತೆ ಬದಿಯಲ್ಲಿ ನೆಟ್ಟಿರುವ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ದಿನವೊಂದಕ್ಕೆ ಸುಮಾರು 1,500 ರೂಪಾಯಿ ಖರ್ಚು ಮಾಡಿ ನೀರು ಉಣಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ಟ್ಯಾಂಕರ್ಗೆ 300 ರಿಂದ 400 ಬಾಡಿಗೆ ಕೊಟ್ಟು ದಿನಕ್ಕೆ ನಾಲ್ಕು ಟ್ಯಾಂಕರ್ ನೀರು ಬಾಡಿಗೆ ತಂದು ನೀರು ಉಣಿಸುವ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕೊಪ್ಪಳ -ಕುಷ್ಟಗಿ ರಸ್ತೆಯಲ್ಲಿರುವ ಗಿಡಗಳಿಗೆ ನೀರು ಹಾಕುತ್ತಿದ್ದು, ಕುಷ್ಟಗಿಯಿಂದ ಗಜೇಂದ್ರಗಡ ರಸ್ತೆ ಮಾರ್ಗದಲ್ಲಿರುವ ಗಿಡಗಳಿಗೆ ನೀರು ಹಾಕುವ ಕೆಲಸವನ್ನು ಯುವಕರು ಒಪ್ಪಿಕೊಂಡಿದ್ದಾರೆ. ದ್ವಾರಕಾಮಯಿ ಟ್ರಸ್ಟ್​ನ  ಕೃಷ್ಣ ಕಂದಕೂರು, ಸತ್ಯನಾರಾಯಣ ಕಂದಗಲ್, ರಾಜು ಕತ್ತಿ, ಹನಮೇಶ್ ಕಂದಕೂರು ಸೇರಿದಂತೆ ಕೆಲ ಯುವಕರು ಸ್ವಂತ ಹಣ ಖರ್ಚು ಮಾಡಿ ಈ ಕೆಲಸವನ್ನು ಮಾಡುತ್ತಿದ್ದಾರೆ.

ದ್ವಾರಕಾಮಯಿ ಟ್ರಸ್ಟ್​ನ ಕೃಷ್ಣ ಕಂದಕೂರು, ಸತ್ಯನಾರಾಯಣ ಕಂದಗಲ್, ರಾಜು ಕತ್ತಿ, ಹನಮೇಶ್ ಕಂದಕೂರು ಸೇರಿದಂತೆ ಕೆಲವರು ಈ ಕೆಲಸ ಮಾಡುತ್ತಿದ್ದಾರೆ

ಅರಣ್ಯ ಇಲಾಖೆಯಲ್ಲಿ ಅನುದಾನದ ಕೊರತೆ ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ಅನುದಾನದ ಕೊರತೆಯಿಂದ ಗಿಡಗಳಿಗೆ ನೀರು ಹಾಕುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಅರಣ್ಯ ಇಲಾಖೆಗೆ ಬಂದಿರುವ 2020 ಮಾರ್ಚ್​ಗೆ ಮುಗಿದು ಹೋಗಿದೆ. ಹೀಗಾಗಿ ಅರಣ್ಯ ಇಲಾಖೆ ಗಿಡ ನೆಟ್ಟು ಅದನ್ನು ಪೋಷಣೆ ಮಾಡಲು ಮರೆತು ಬಿಟ್ಟಿದೆ. ದ್ವಾರಕಾಮಯಿ ತಂಡ ರಸ್ತೆ ಬದಿ ಹೋಗುವಾಗ ಗಿಡಗಳು ಒಣಗಿರುವುದನ್ನು ನೋಡಿ ಗಿಡಗಳಿಗೆ ನೀರು ಹಾಕಲು ಮುಂದಾಗಿದೆ. ನಿತ್ಯ ಯುವಕರ ತಂಡ ಈ ಕೆಲಸ ಮಾಡುತ್ತಿದೆ. ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಯುವಕರ ತಂಡ ಒಣಗುತ್ತಿರುವ ಗಿಡಗಳನ್ನ ಕಾಪಾಡಲು ಮುಂದಾಗಿದೆ.

ಗಿಡ ನೆಟ್ಟು ನೀರು ಹಾಕುತ್ತಿದ್ದಾರೆ

ರಸ್ತೆ ಬದಿಯಲ್ಲಿ ನೆಟ್ಟ ಗಿಡಗಳಿಗೆ ನೀರು ಹಾಕಲು ಅನುದಾನ ಮಾರ್ಚ್ 2020 ರಲ್ಲಿ ಮುಗಿದು ಹೋಗಿದೆ. ಅಲ್ಲದೇ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಗಿಡಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಇದೀಗ ಯುವಕರ ತಂಡ ಗಿಡಗಳಿಗೆ ನೀರು ಹಾಕುತ್ತಿರುವ ವಿಷಯ ತಿಳಿದಿದ್ದು, ಇದೊಂದು ಮಾದರಿ ಕೆಲಸವಾಗಿದೆ ಎಂದು ಉಪವಲಯ ಅರಣ್ಯ ಅಧಿಕಾರಿ ಶಿವಶಂಕರ ರ್ಯಾವಣಕಿ ಅಭಿಪ್ರಾಯಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ರಸ್ತೆ ಬದಿಯಲ್ಲಿ ಆಕಸ್ಮಾತ್ ಹೋಗುವಾಗ ಗಿಡಗಳನ್ನು ಒಣಗಿರುವುದನ್ನು ಗಮನಿಸಿದ್ದೆವು. ಬಿಸಿಲಿನ ತಾಪಮಾನಕ್ಕೆ ಗಿಡಗಳು ಬಾಡಿ ಹೋಗಿದ್ದು, ನಮ್ಮ ತಂಡ ಅವುಗಳನ್ನ ಕಾಪಾಡುವ ಕೆಲಸಕ್ಕೆ ಮುಂದಾಗಿದೆ. ಈಗಾಗಲೇ ನಾವು ಕುಷ್ಟಗಿಯಿಂದ ಕೊಪ್ಪಳಕ್ಕೆ ಹೋಗುವ ಮಾರ್ಗದಲ್ಲಿ ಇರುವ ಗಿಡಗಳಿಗೆ ಸ್ವಂತ ಹಣದಿಂದ ನೀರು ಹಾಕುವ ಕೆಲಸ ಮಾಡುತ್ತಿದ್ದು, ಗಜೇಂದ್ರಗಡ ರಸ್ತೆಯಲ್ಲಿರುವ ಗಿಡಗಳಿಗೂ ನೀರು ಹಾಕುತ್ತೀವಿ. ಇದರಲ್ಲಿ ನಮಗೆ ಸಂತೃಪ್ತಿಯಿದೆ ಎಂದು ದ್ವಾರಕಾಮಯಿ ಟ್ರಸ್ಟ್​ನ ಸದಸ್ಯ ಕೃಷ್ಣ ಕಂದಕೂರ ಹೇಳಿದರು.

(ವರದಿ: ಶಿವಕುಮಾರ್ ಪತ್ತಾರ್ – 9980510151)

ಇದನ್ನೂ ಓದಿ

ಕೊವಿಡ್ ಎರಡನೇ ಅಲೆ ಆರ್ಭಟ; 10 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಸ್ಥಗಿತ

ಕರ್ನಾಟಕದಲ್ಲಿ ಲಾಕ್​ಡೌನ್ ಭೀತಿ​: ವದಂತಿಗೆ ಬೆದರಿ ಗುಳೆ ಹೊರಟ ಕೂಲಿ ಕಾರ್ಮಿಕರು

(Dwarkamai Trust Youth is watering down the roadside plants in koppal)

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ